Wednesday, 28th June 2017

Recent News

18 hours ago

ಸಿದ್ರಾಮಯ್ಯ ಅಂಕಲ್ ಕೊಟ್ಟಿರೋ ಬಟ್ಟೆ ಹಾಕೋಕೆ ಮುಜುಗರ ಆಗುತ್ತೆ, ಸೊಳ್ಳೆ ಪರದೆ ಥರ ಇದೆ: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ದೂರು

ಚಾಮರಾಜನಗರ: ನಮಗೆ ಸಿದ್ದರಾಮಯ್ಯ ಅಂಕಲ್ ಬಟ್ಟೆಗಳನ್ನು ಕೊಟ್ಟಿದ್ದಾರಲ್ಲ ಅದು ನಮಗೆ ಸರಿಯಾಗ್ತಿಲ್ಲ. ಟೈಲರ್‍ಗೆ ಕೊಟ್ರೆ ಇದು ಸಾಲಲ್ಲ ಅಂತಾರೆ. ಹೊರಗಡೆ ಹಾಕಿಕೊಂಡು ಹೋಗೋದಕ್ಕೆ ನಮಗೆ ಮುಜುಗರ ಆಗುತ್ತೆ. ಅವರು ನೀಡಿರುವ ಬಟ್ಟೆ ಸೊಳ್ಳೆ ಪರದೆ ಹಾಗೆ ಇದೆ. ಅದನ್ನು ಹಾಕಿಕೊಂಡು ಓಡಾಡಲು ನಮಗೆ ಆಗಲ್ಲ. ಹೀಗೆ ಹೇಳ್ತಾ ಇರೋದು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ. ಹೌದು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕು ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಿರುವ ಸಮವಸ್ತ್ರಗಳ ಗುಣಮಟ್ಟವನ್ನು ನೋಡಿ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು […]

4 days ago

ಕೆಟ್ಟ ಕಾಫಿ ಕೊಟ್ಟದ್ದಕ್ಕೆ ಕೆನ್ನೆಗೆ ಏಟು: ಪತ್ನಿಯನ್ನು ಕೊಂದ ಪತಿ ಅರೆಸ್ಟ್

ಚಾಮರಾಜನಗರ: ಕೆಟ್ಟ ಕಾಫಿ ಕೊಟ್ಟಿದ್ದೀಯಾ ಎಂದು ಪತಿಯೊಬ್ಬ ಪತ್ನಿಯ ಕೆನ್ನೆ ಹೊಡೆದು ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೆಲಂಬಳ್ಳಿ ಗ್ರಾಮದಲ್ಲಿ ಜರುಗಿದೆ. ಮಮತಾ (24) ಕೊಲೆಯಾದ ಮಹಿಳೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಶಿವಕುಮಾರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ವ್ಯವಸಾಯ ಮಾಡುತ್ತಿರುವ ಶಿವಕುಮಾರ್ ಮಮತಾ ದಂಪತಿಗೆ ಎರಡು ಗಂಡು...

ಉರುಳಿಗೆ ಸಿಲುಕಿ ನರಳುತ್ತಿದ್ದ ಜಿಂಕೆಯನ್ನು ರಕ್ಷಿಸಿದ ಯುವಕರು

2 weeks ago

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ಜೀವಿಧಾಮದಲ್ಲಿ ಉರುಳಿಗೆ ಸಿಲುಕಿ ನರಳುತ್ತಿದ್ದ ಜಿಂಕೆ ಮತ್ತು ಜಿಂಕೆ ಮರಿಯನ್ನು ಯುವಕರು ರಕ್ಷಿಸಿದ್ದಾರೆ. ಕೊಳ್ಳೆಗಾಲ ತಾಲೂಕಿನ ಚಿಕ್ಕಲ್ಲೂರುನಿಂದ ಮುತ್ತತ್ತಿಗೆ ಹೋಗುವ ದಾರಿಯಲ್ಲಿ ಜಿಂಕೆಯ ಚೀರಾಟ ಕೇಳುತಿತ್ತು. ಕೂಡಲೇ ಈ ಸ್ಥಳದ ಮೂಲಕ ತೆರಳುತ್ತಿದ್ದ ಯುವಕರು...

ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕೆ 25 ಕುಟುಂಬಗಳಿಗೆ ಬಹಿಷ್ಕಾರ

2 weeks ago

ಚಾಮರಾಜನಗರ: ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಹಾಕಿದ್ದಕ್ಕೆ 25 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರಿರುವ ಅಮಾನವೀಯ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಾಲಾಪುರ ಗ್ರಾಮದ 25 ಕುಟುಂಬದ ಮತದಾರರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಗ್ರಾಮದ ಕಾಂಗ್ರೆಸ್...

ಬ್ಯಾಂಡ್ ಬಾರಿಸಿಕೊಂಡು, ಮನೆಮನೆಗೆ ತೆರಳಿ ಮಕ್ಕಳನ್ನು ಸಾರೋಟಿನಲ್ಲಿ ಕರೆತಂದ ಸರ್ಕಾರಿ ಶಾಲೆ ಶಿಕ್ಷಕರು

4 weeks ago

ಚಾಮರಾಜನಗರ: ಸುದೀರ್ಘ ಬೇಸಿಗೆ ರಜೆ ಕಳೆದರೂ ಇನ್ನೂ ಕೂಡ ರಜೆಯ ಮೂಡ್‍ನಲ್ಲೇ ಇರುವ ಮಕ್ಕಳನ್ನು ಆಕರ್ಷಿಸಿ ಶಾಲೆಗೆ ಕರೆತರಲು ಶಿಕ್ಷಕರುಗಳು ವಿಭಿನ್ನವಾದ ಪ್ರಯತ್ನವೊಂದನ್ನು ಮಾಡಿದ್ದಾರೆ. ಮನೆ ಮನೆಗೆ ತೆರಳಿ ಮಕ್ಕಳನ್ನು ಸಾರೋಟಿನಲ್ಲಿ ಶಾಲೆಗೆ ಕರೆತರುವ ಮೂಲಕ ವಿನೂತನವಾಗಿ ಶಾಲೆಗೆ ಸ್ವಾಗತ ಮಾಡಿಕೊಂಡಿದ್ದಾರೆ....

ರೈತರೇ ಈಗಲೇ ಬಿತ್ತನೆ ಮಾಡಿ, ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

1 month ago

ಚಾಮರಾಜನಗರ: ಈಗ ಮಳೆ ಬರ್ತಿದೆ. ಈಗಲೇ ಬಿತ್ತನೆ ಕಾರ್ಯ ಶುರು ಮಾಡಿ. ಒಂದು ವೇಳೆ ಬಿತ್ತನೆ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ. ಬರಗಾಲದಲ್ಲಿ ರೈತರ ನೆರವಿಗೆ ಬಾರದ ಜಿಲ್ಲಾಡಳಿತ...

ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಭತ್ತ ನಾಟಿ ಮಾಡಿ ಸಾರ್ವಜನಿಕರ ಪ್ರತಿಭಟನೆ

1 month ago

ಚಾಮರಾಜನಗರ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದ ಹಲವೆಡೆ ಅವಾಂತರ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ಕೆರೆಯಂತಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಭತ್ತದ ನಾಟಿ ಮಾಡಿ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು....

ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ- ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಜಿ.ಪಂ ಸದಸ್ಯ

1 month ago

ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯ ಮತ್ತು ಬೆಂಬಲಿಗರು ಕೊಳ್ಳೆಗಾಲದ ಕೃಷಿ ಇಲಾಖೆಯ ಕಚೇರಿಗೆ ನುಗ್ಗಿ ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಿಲ್ಲೆಯ ಕುಂತೂರು ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಎಲ್.ನಾಗರಾಜು ಮತ್ತು ಬೆಂಬಲಿಗರು...