Wednesday, 23rd May 2018

Recent News

11 months ago

ನೋಟ್ ಬ್ಯಾನ್ ಬೆಂಬಲಿಸಿ, ರಂಜಾನ್ ಪ್ರಯುಕ್ತ 10 ಪೈಸೆಗೊಂದು ಸೀರೆ ಮಾರಾಟ

ಬೀದರ್: ಪ್ರಧಾನಿ ಮೋದಿ ಸರ್ಕಾರದ ನೋಟ್ ಬ್ಯಾನ್ ಬೆಂಬಲಿಸಿ ನಗರದ ವರ್ತಕರೊಬ್ಬರು ರಂಜಾನ್ ಹಬ್ಬದ ಪ್ರಯುಕ್ತವಾಗಿ 10 ಪೈಸೆಗೆ ಒಂದು ಸೀರೆಯನ್ನ ಮಾರಾಟ ಮಾಡುತ್ತಿದ್ದಾರೆ. ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸೀರೆಗಳನ್ನು ಕೊಳ್ಳಲು ಕೇವಲ ಹಳೆಯ 10, 25 ಮತ್ತು 50 ಪೈಸೆಯ ನಾಣ್ಯಗಳನ್ನು ನೀಡಿದರೆ ಸೀರೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮೋದಿಯವರು ನೋಟ್ ಬ್ಯಾನ್ ಮಾಡಿ ದೇಶಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಅದರ ಪ್ರಯುಕ್ತವಾಗಿ ನಾನು ಸೀರೆಗಳನ್ನು ಅತಿ […]

11 months ago

ಬೀದರ್ ಲೋಕೋಪಯೋಗಿ ಇಲಾಖೆ ಮುಂದೆಯೇ ರಸ್ತೆ ಕುಸಿದು ಹಳ್ಳಕ್ಕೆ ಬಿದ್ದ ಲಾರಿ, ಕಾರು

ಬೀದರ್: ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಮುಂದೆಯೇ ರಸ್ತೆ ಕುಸಿದ ಪರಿಣಾಮ ಕಾರು ಹಾಗೂ ಲಾರಿ ಹಳ್ಳಕ್ಕೆ ಬಿದ್ದಿದೆ. ಕೆಲವೇ ದಿನಗಳ ಹಿಂದಷ್ಟೆ ಮಾಡಿದ್ದ ಯುಜಿಡಿ ರಸ್ತೆ ಕುಸಿದು ಕಾರು ಮತ್ತು ಲಾರಿ ಹಳ್ಳದಲ್ಲಿ ಸಿಲುಕಿಕೊಂಡಿದೆ. ವಿಪರ್ಯಾಸವೆಂದರೆ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆಯೇ ರಸ್ತೆ ಕುಸಿದು ಈ ಅವಘಡ ಸಂಭವಿಸಿದ್ದಕ್ಕೆ ಅಧಿಕಾರಿಗಳು...

ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ – ಕಾರ್ಮಿಕ ಸಾವು

12 months ago

ಬೀದರ್: ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ನಡೆದಿದೆ. ಹೈದ್ರಾಬಾದ್ ಮೂಲದ 38 ವರ್ಷದ ವೆಂಕಟೇಶ್ ಸಾವನ್ನಪ್ಪಿರೋ ಕಾರ್ಮಿಕ ಅಂತ ಗೊತ್ತಾಗಿದೆ. ಆರ್.ಕೆ ಆರ್ಗಾನಿಕ್...

ಮದ್ವೆಯಾದ ಒಂದೇ ವಾರಕ್ಕೆ ಗಂಡ, ಅತ್ತೆ, ಮಾವನಿಂದಲೇ ನವವಿವಾಹಿತೆಯ ಕೊಲೆ

12 months ago

ಬೀದರ್: ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿ ಸುಖವಾಗಿ ಬಾಳುವ ಕನಸು ಕಂಡಿದ್ದ ನವ ವಧುವನ್ನು ಆಕೆಯ ಅತ್ತೆ, ಮಾವ, ಗಂಡ ಸೇರಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಕಲ್ಲೂರ್ ತಾಂಡಾದಲ್ಲಿ ನಡೆದಿದೆ. 19 ವರ್ಷದ ದೀಪಾ ಕೊಲೆಯಾದ...

ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಕೋತಿಯ ಮನಕಲಕುವ ವಿಡಿಯೋ ನೋಡಿ

12 months ago

ಬೀದರ್: ನಾಯಿಗಳ ದಾಳಿಗೊಳಗಾಗಿ ರಕ್ತದ ಮಡುವಿನಲ್ಲಿ ಕೋತಿಯೊಂದು ಒದ್ದಾಡುತ್ತಿರೋ ಮನಕಲಕುವ ಘಟನೆಯೊಂದು ಬೀದರ್ ನಗರದ ಸಾಯಿ ದೇವಸ್ಥಾನದ ಬಳಿ ನಡೆದಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶ್ವಾನಗಳ ದಾಳಿಗೆ ಸಿಲುಕಿ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ದೃಶ್ಯ ನೆರೆದವರ ಕಣ್ಣಂಚಲ್ಲಿ...

ಲಾರಿ-ಬೈಕ್ ಡಿಕ್ಕಿ: ತುಂಬು ಗರ್ಭಿಣಿಯ ಹೊಟ್ಟೆಯಿಂದ ಹೊರಬಂತು ಮಗು!

12 months ago

ಬೀದರ್: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಬಳಿ ನಡೆದಿದೆ. 25 ವರ್ಷದ ಯಾಸಮೀನ್ ಮೃತಪಟ್ಟ ದುರ್ದೈವಿ ಗರ್ಭಿಣಿ. ಘಟನೆಯಿಂದ ಪತಿಗೆ ಗಂಭೀರ...

ದ್ವಿತೀಯ ಪಿಯುಸಿ ಮುಗಿಸಲು ಹಣದ ಸಮಸ್ಯೆ: 1 ವರ್ಷದಿಂದ ಶಿಕ್ಷಣವಿಲ್ದೆ ಮನೆಯಲ್ಲಿರೋ ಬೀದರ್‍ನ ಈ ವಿದ್ಯಾರ್ಥಿಗೆ ಬೇಕಿದೆ ಸಹಾಯ

12 months ago

ಬೀದರ್: ಇಲ್ಲಿನ ಗ್ರಾಮೀಣ ಪ್ರತಿಭೆ ಆರ್ಥಿಕ ಸಮಸ್ಯೆಯಿಂದ ಕಾಲೇಜು ಬಿಡುವ ಹಂತದಲ್ಲಿದ್ದಾನೆ. ಮೊದಲನೆ ವರ್ಷದ ವಿಜ್ಞಾನ ಪಿಯುಸಿ ಮುಗಿಸಿದ್ದು, ಎರಡನೇ ವರ್ಷದ ಪಿಯುಸಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಕಡು ಬಡತನದಲ್ಲಿ ಹುಟ್ಟಿದ ಈ ಗ್ರಾಮೀಣ ಪ್ರತಿಭೆಗೆ ವಿದ್ಯಾಭ್ಯಾಸ ಮಾಡಲು ಹಣವಿಲ್ಲದೆ ಒಂದು...

ಪಿಯುಸಿ ಫಲಿತಾಂಶ ನೋಡಿದ ಬಳಿಕ ವಿದ್ಯಾರ್ಥಿ ನಾಪತ್ತೆ

1 year ago

– ಎಲ್ಲಿದ್ದರೂ ಓಡಿ ಬಾರೋ ಮಗ ಅಂತಾ ಇತ್ತ ತಾಯಿ ಕಣ್ಣೀರು ಬೀದರ್: ಪಿಯುಸಿ ಫಲಿತಾಂಶ ನೋಡಿದ ಬಳಿಕ ಮನನೊಂದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರೋ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಮುಚ್ಚಳಾಂಬ ಗ್ರಾಮದಲ್ಲಿ ನಡೆದಿದೆ. ಮಹೇಶ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಪ್ರತೀ ಬಾರಿಯೂ ಶೇ.90...