Tuesday, 12th December 2017

Recent News

1 month ago

ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡ ಸ್ವಾಮೀಜಿ- ಫೋಟೋ ವೈರಲ್

ನೆಲಮಂಗಲ: ವರ್ಷದಲ್ಲಿ ಯುಗಾದಿ ಹಬ್ಬದಂದು ಮಾತ್ರ ಮಾತನಾಡುವ ಮೌನ ಸ್ವಾಮೀಜಿ ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡಿರುವ ದೃಶ್ಯಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹಿಮೆ ರಂಗನ ಬೆಟ್ಟದ ಬಳಿಯ ಜಡೆ ಶಾಂತಲಿಂಗೇಶ್ವರರ ಶಾಖಾ ಮಠದಲ್ಲಿ ಕಳೆದ ಭಾನುವಾರ ನಡೆದಿದೆ. ಅಂದು ಜಡೆ ಶಾಂತಲಿಂಗೇಶ್ವರರ ಶಾಖಾ ಮಠ ಉದ್ಘಾಟನೆ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಸದ್ಭಾವನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸ್ವಾಮೀಜಿ ಈ ವೇಳೆ ಲಿಂಗದ ಮೇಲೆ ಸ್ವಾಮೀಜಿ ಕಾಲಿಟ್ಟು ಪೂಜೆ ಮಾಡಿಸಿಕೊಂಡಿರುವ ಫೋಟೋ […]

1 month ago

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ-ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಸಮೀಪದ ಬೆಟ್ಟಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ನಾಲ್ವರಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. 75 ವರ್ಷದ ವೆಂಕಟನರಸಪ್ಪ, ಪತ್ನಿ ತಾಯಮ್ಮ ಮತ್ತು ಮಗಳು ಹೊನ್ನಮ್ಮ ಮೃತರು. ವಿಷ ಸೇವಿಸಿದ ಮಗ ದೊಡ್ಡೇಗೌಡ ಎಂಬವರನ್ನು ನಗರದ ರಾಜರಾಜೇಶ್ವರಿ ಆಸ್ಪತ್ರೆಗೆ...

2 ಕೊಠಡಿಗಳಿರುವ ಶಾಲೆಯಲ್ಲಿ 1-5 ತರಗತಿವರೆಗೆ ಶಿಕ್ಷಣ: ಜೀವಭಯದಲ್ಲೇ ಪಾಠ ಕೇಳ್ತಿದ್ದಾರೆ ಮಕ್ಕಳು

1 month ago

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲದೇ ಶಾಲೆಗಳು ಮುಚ್ಚಲ್ಪಡುತ್ತಿವೆ. ಆದರೆ ಆನೇಕಲ್ ತಾಲೂಕಿನ ಹೊನ್ನಕಳಸಾಪುರ ಗ್ರಾಮದಲ್ಲಿ ಮಕ್ಕಳಿದ್ದರೂ ಶಾಲೆಯೇ ಸರಿಯಾಗಿಲ್ಲ. ಹೌದು. ಎರಡು ಕೊಠಡಿಗಳಿರುವ ಈ ಶಾಲೆಯಲ್ಲಿ 1 ರಿಂದ 5 ತರಗತಿಯವರೆಗೆ 30 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಜೀವ ಭಯದಲ್ಲೇ ಪಾಠ...

ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

2 months ago

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮುಗಳಲ್ಲೇ ಕೊಳೆಯುತ್ತಿದ್ದು, ಸರ್ಕಾರ ನೂರಾರು ಕೋಟಿ ರೂ. ನೀಡಿ ಖರೀದಿಸಿದ್ದ ಪಡಿತರ ವ್ಯರ್ಥವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ...

ಭಿಕ್ಷುಕರಿಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ!

2 months ago

ಬೆಂಗಳೂರು: ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಮಲಗಿದ್ದ ಇಬ್ಬರು ಭಿಕ್ಷುಕರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆ ಪಟ್ಟಣದ ಕೆಇಬಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವರಲ್ಲಿ ಓರ್ವರನ್ನು...

ಒಂಟಿಯಾಗಿ ಜೀವಿಸ್ತಿರೋ 75 ವರ್ಷದ ಅಜ್ಜಿಗೆ ಬೇಕಿದೆ ವಿದ್ಯುತ್ತಿನ ಬೆಳಕು

2 months ago

ನೆಲಮಂಗಲ: ತನ್ನ ಇಳಿ ವಯಸ್ಸಿನಲ್ಲಿ ಯಾರ ಹಂಗಿಲ್ಲದೆ, ಸ್ವಾವಲಂಬಿಯಾಗಿ ಜೀವನವನ್ನ ನಡೆಸುತ್ತಿರುವ ವೃದ್ಧೆಯ ಹೆಸರು ಅರಸಮ್ಮ. ಸುಮಾರು 75 ವರ್ಷ ವಯಸ್ಸು. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮದ ನಿವಾಸಿ. ಒಂದು ಕಾಲದಲ್ಲಿ ಈ ಗ್ರಾಮ ರಾಜಮಹಾರಾಜರು...

ಬೈಕಿಗೆ ಡಿಕ್ಕಿ ಹೊಡೆದು ಪ್ರಯಾಣಿಕರ ತಂಗುದಾಣಕ್ಕೆ ನುಗ್ಗಿದ ಕಾರ್- ಐವರ ದುರ್ಮರಣ

2 months ago

ಬೆಂಗಳೂರು: ನಗರದ ಹೊರವಲಯ ನೆಲಮಂಗಲ ಸಮೀಪದ ಬೈಚಾಪುರ ಗ್ರಾಮದ ಬಳಿ ಭೀಕರ ಅಪಘಾತ ನಡೆದಿದ್ದು, ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ನೆಲಮಂಗಲ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಅತಿ ವೇಗದಲ್ಲಿ ಹೋಗುತ್ತಿದ್ದ ಕಾರು ಬೈಕ್ ಗೆ...

ಕೊಳೆತ ಸ್ಥಿತಿಯಲ್ಲಿ ಮಹಿಳೆಯ ತಲೆಯಿಲ್ಲದ ಮೃತದೇಹ ಪತ್ತೆ

2 months ago

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಪ್ಪನಹಳ್ಳಿ ಗ್ರಾಮ ಹೊರವಲಯದ ನೀಲಗಿರಿ ತೋಪಿನಲ್ಲಿ ಮಹಿಳೆಯ ತಲೆ ಇಲ್ಲದ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ....