Wednesday, 19th July 2017

3 hours ago

ಮಧ್ಯರಸ್ತೆಯಲ್ಲೇ ಕೆಟ್ಟು ನಿಲ್ತು ಓವರ್‍ಲೋಡ್ ಆದ ಲಾರಿ- ಪಲ್ಟಿಯಾಗೋ ಆತಂಕ

ಬಳ್ಳಾರಿ: ಜಿಲ್ಲೆಯ ಮೋತಿ ಸರ್ಕಲ್ ನಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮಧ್ಯರಸ್ತೆಯಲ್ಲಿ ಕೆಟ್ಟು ನಿಂತಿದೆ. ಲಾರಿ ಪಲ್ಟಿಯಾಗಿ ಬೀಳುವ ಸ್ಥಿತಿ ತಲುಪಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದು ಮುಂಜಾನೆ ಜನನಿಬಿಡ ಮೋತಿ ಸರ್ಕಲ್‍ನಲ್ಲಿ ಓವರ್ ಲೋಡ್ ಆಗಿದ್ದ ಲಾರಿಯ ಆಕ್ಸಲ್ ಪ್ಲೇಟ್ ಕಟ್ ಆಗಿ ಕೆಟ್ಟು ನಿಂತಿತ್ತು. ಮೂಟೆಗಳ ಭಾರ ತಡೆಯಲಾಗದೆ ಲಾರಿ ಪಕ್ಕಕ್ಕೆ ವಾಲಿಕೊಂಡು ಬೀಳುವ ಸ್ಥಿತಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೋತಿ ಸರ್ಕಲ್ ಮೂಲಕ ಸಂಚಾರ ಮಾಡುವ ವಾಹನ ಸವಾರರು ಭಯ ಪಡುವಂತಾಗಿದೆ. […]

1 day ago

ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

ಬಳ್ಳಾರಿ: ಜೈನ ಸಮಾಜ ಶಾಂತಿ ಅಹಿಂಸೆಗೆ ಹೆಸರು ವಾಸಿ. ಇದಕ್ಕೆ ಅಪವಾದ ಅನ್ನುವಂತೆ ಜೈನ ಸಮುದಾಯದವರೇ ಆದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ, ಹುಡುಗನಿಗೆ ಜೈಲುವಾಸ ಅನುಭವಿಸುತ್ತಿದ್ದ, ಹುಡುಗಿ ನರಕ ಯಾತನೆ ಅನುಭವಿಸುತ್ತಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಹೌದು. ಬಳ್ಳಾರಿ ಹೊಸಪೇಟೆಯ ನಿವಾಸಿಗಳಾದ, ಜೈನ ಸಮುದಾಯದ ಮಾಹಿನ್ ಮತ್ತು ಮಾನಸಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸುದ್ದಿ...

ಅಮ್ಮನ ಸ್ಮರಣಾರ್ಥ ಬಸ್ ಶೆಲ್ಟರ್ ನಿರ್ಮಾಣ- ಸಿಸಿಟಿವಿ ಅಳವಡಿಸಿ ಭದ್ರತೆ

6 days ago

ಬಳ್ಳಾರಿ: ಪತ್ನಿ ಮುಮ್ತಾಜ್‍ಗಾಗಿ ಶಹಜಹಾನ್ ತಾಜಮಹಲ್ ನಿರ್ಮಿಸಿ ಇತಿಹಾಸ ಸೇರಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಮಕ್ಕಳು ತಮ್ಮ ತಾಯಿಯ ನೆನಪಿಗಾಗಿ ಬಸ್ ಶೆಲ್ಟರ್ ನಿರ್ಮಿಸಿದ್ದು, ತಂಗುದಾಣದಲ್ಲಿ ಸಿಸಿಟಿವಿ ಅಳವಡಿಸಿ ಪ್ರಯಾಣಿಕರಿಗೆ ಭದ್ರತೆಯನ್ನ ಒದಗಿಸಿದ್ದಾರೆ. ಕಂಪ್ಲಿ ಪಟ್ಟಣದ ನಿವಾಸಿಯಾಗಿರೋ ಬಿಡಿಸಿಸಿ ಬ್ಯಾಂಕ್‍ನ ನಿವೃತ್ತ ವ್ಯವಸ್ಥಾಪಕರಾದ...

ಆತ್ಮಹತ್ಯೆ ಮಾಡ್ಕೊಂಡ ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಕೊಂಡು ಠಾಣೆಗೆ ತಂದ ಪ್ರಿಯಕರ!

1 week ago

ಬಳ್ಳಾರಿ: ತನ್ನ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆಯ ಶವವನ್ನು ಪ್ರಿಯಕರ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ಠಾಣೆಗೆ ತಂದ ಹೃದಯವಿದ್ರಾವಕ ಘಟನೆಯೊಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಸಿರುಗುಪ್ಪ ತಾಲೂಕಿನ ಸಿರಿಗೆರೆಯ ಹುಚ್ಚೇಶ್ವರ ನಗರದ ಹನುಮಂತಮ್ಮ(19) ಹಾಗೂ ಹಣ್ಣಿನ ವ್ಯಾಪಾರಿ ದಾವಲ್ ಸಾಬ್...

35 ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರು – ಜಮೀನಿನಲ್ಲೇ ಮೂಕ ಜೀವಿಗಳ ಮಾರಣಹೋಮ

2 weeks ago

ಬಳ್ಳಾರಿ: ಹೂವಿನಹಡಗಲಿ ತಾಲೂಕಿನಲ್ಲಿ 35 ಗೂಳಿಗಳ ಮಾರಣಹೋಮ ಮಾಡಲಾಗಿದೆ. ಮೆಕ್ಕೆಜೋಳದ ಬೆಳೆಗೆ ಔಷಧ ಸಿಂಪಡಿಸುವ ನೆಪದಲ್ಲಿ ಬೆಳೆಗಳ ಮೇಲೆ ವಿಷ ಹಾಕಿ 35 ಗೂಳಿಗಳನ್ನು ಕೊಲ್ಲಲಾಗಿದೆ. ಹಿರೇಹಡಗಲಿ ಬಳಿಯ ಕಟ್ಟಿ ಮಸಾರಿ ಬಳಿಯ ಜಮೀನುಗಳಲ್ಲಿ 28 ಗೂಳಿ ಮತ್ತು ಹಿರೇ ಮಲ್ಲನಕೇರಿ...

ರಾತ್ರೋರಾತ್ರಿ ಹಬ್ಬಿದ ಈ ವದಂತಿಗೆ ಮಾಂಗಲ್ಯದ ಹವಳ ಒಡೆದು ಹಾಕಿದ ಮಹಿಳೆಯರು!

2 weeks ago

– ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಯಲ್ಲಿ ಹಬ್ಬಿದ ಗಾಳಿ ಸುದ್ದಿ ಕೊಪ್ಪಳ/ಬಳ್ಳಾರಿ/ಚಿತ್ರದುರ್ಗ: ಜನ ಮರಳೋ ಜಾತ್ರೆ ಮರುಳೋ ಅನ್ನೋ ಹಾಗೆ ಮಹಿಳೆಯರು ತಮ್ಮ ಮಾಂಗಲ್ಯ ಸರದಲ್ಲಿನ ಹವಳವನ್ನು ರಾತ್ರೋರಾತ್ರಿ ಒಡೆದು ಹಾಕಿರೋ ಘಟನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ...

ರಾಜಕುಮಾರ ಚಿತ್ರ ನೋಡಿ, ಗುರುವಿಲ್ಲದೆ ಡಾನ್ಸ್ ಕಲಿತ ಅಪ್ಪು ಅಭಿಮಾನಿ!

2 weeks ago

ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ನೋಡಿ ಅವರಂತೆ ಡಾನ್ಸ್ ಮಾಡಲಾರಂಭಿಸಿದ್ದಾನೆ. ಜಿಲ್ಲೆಯ ಹೊಸಪೇಟೆಯ ನಿವಾಸಿಯಾಗಿರುವ ಮದಕರಿ ಗುಜ್ಜಲ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ. ಗುಜ್ಜಲ್ ಇಂಜನೀಯರ್ ವಿದ್ಯಾರ್ಥಿಯಾಗಿದ್ದು, ಅಪ್ಪು ಅಭಿನಯದ ಎಲ್ಲ ಚಿತ್ರಗಳನ್ನು ನೋಡಿ ಅವರಂತೆ...

ಹಂಪಿ: ಸ್ಮಾರಕ ವಿರೂಪಗೊಳಿಸಿದ್ದ ಪ್ರವಾಸಿಗ ಅರೆಸ್ಟ್

2 weeks ago

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯಲ್ಲಿ ಒಂದಲ್ಲ ಒಂದು ರೀತಿಯ ಎಡವಟ್ಟು ಆಗುತ್ತಲೇ ಇವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಶಿವಲಿಂಗ ಧ್ವಂಸ ಮಾಡಿದ್ದ ದುಷ್ಕರ್ಮಿಗಳ ಬಗ್ಗೆ ಸುದ್ದಿಯಾಗಿತ್ತು. ಇದೀಗ ಮತ್ತೊಂದು ಸ್ಮಾರಕವನ್ನು ವಿರೂಪ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಲಾಗಿದೆ....