Sunday, 25th February 2018

3 days ago

ಬಣವೆ ಬಳಿ ಆಟವಾಡುತ್ತಿದ್ದ ಬಾಲಕ ಬೆಂಕಿಗಾಹುತಿಯಾದ

ಧಾರವಾಡ: ಆಕಸ್ಮಿಕ ಬೆಂಕಿ ಅನಾಹುತಕ್ಕೆ ಬಾಲಕ ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲುಕಿನ ಕುರುವಿನಕೊಪ್ಪ ಗ್ರಾಮದಲ್ಲಿ ನಡೆದಿದೆ. 7 ವರ್ಷದ ಬಾಲಕ ಚಂದನ ಸಂಗೊಳ್ಳಿ ಮೃತ ದುರ್ದೈವಿ. ದ್ಯಾಮಣ್ಣ ಕೊಂಕಣ್ಣವರ ಅವರಿಗೆ ಸೇರಿದ ಬಣವೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬಣವೆಯ ಬಳಿ ಆಟವಾಡುತ್ತಿದ್ದ ಬಾಲಕ ಚಂದನ ಸಂಗೊಳ್ಳಿ ಬೆಂಕಿಗೆ ಆಹುತಿಯಾಗಿದ್ದಾನೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕಲಘಟಗಿ ಪೊಲೀಸರು ಬಣವೆಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಮಹಿತಿ ಕಲೆ ಹಾಕುತ್ತಿದ್ದಾರೆ.

4 days ago

ಟೈರ್ ಸ್ಫೋಟಗೊಂಡು ದೇವಸ್ಥಾನಕ್ಕೆ ಗುದ್ದಿದ ಲಾರಿ- ತಪ್ಪಿದ ಭಾರೀ ಅನಾಹುತ

ಧಾರವಾಡ: ಟೈರ್ ಸ್ಫೋಟಗೊಂಡು ಲಾರಿಯೊಂದು ದೇವಸ್ಥಾನಕ್ಕೆ ಗುದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಧಾರವಾಡ ಜಿಲ್ಲೆಯ ಗುಳೇದಕೊಪ್ಪ ಗ್ರಾಮದಲ್ಲಿ ನಡೆದಿದೆ. ಬೆಳಗಾವಿಯಿಂದ ಧಾರವಾಡಕ್ಕೆ ತೆರಳುತ್ತಿದ್ದಾಗ ಲಾರಿ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ಹಿಂದಿನಿಂದ ಗುದ್ದಿದೆ. ಅಕ್ಕಪಕ್ಕದಲ್ಲಿ ಮನೆಗಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ದೇವಸ್ಥಾನ ಇದಾಗಿದೆ. ಇಂದು ಬೆಳಗಿನ ಜಾವ 7ಗಂಟೆ...

ಮೋದಿ, ಅಮಿತ್ ಶಾ ತಲೆಯಲ್ಲಿ ಏನು ಇಲ್ಲ ಅನ್ನೋದಕ್ಕೆ ಪುರಾವೆ ನನ್ನಲ್ಲಿದೆ: ಪ್ರಕಾಶ್ ರೈ

1 week ago

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಕೋಡಾ ಮಾಡುವುದನ್ನು ಉದ್ಯೋಗ ಎನ್ನುತ್ತಿದೆ. ಏಕೆಂದರೆ ಅವರು ರೈತರ ಸಮಸ್ಯೆ ಎಂದರೆ ಟೊಮೆಟೊ, ಪೊಟ್ಯಾಟೋ, ಆನಿಯನ್ ಅಷ್ಟೇ ಎಂದು ತಿಳಿದುಕೊಂಡಿದ್ದಾರೆ. ಅವರ ತಲೆಯಲ್ಲಿ ಅಷ್ಟೇ ಇದೇ ಎಂದು ಮತ್ತೊಮ್ಮೆ ನಟ ಪ್ರಕಾಶ್ ರೈ ವಾಗ್ದಾಳಿ...

ಮಹದಾಯಿ ಹೋರಾಟಗಾರರಿಗೆ ಮಾತು ಕೊಟ್ಟು ತಪ್ಪಿದ ರಾಜ್ಯ ಸರ್ಕಾರ?

1 week ago

ಹುಬ್ಬಳ್ಳಿ: ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಹಿಂಪಡೆಯುವುದಾಗಿ ಈ ಹಿಂದೆ ಹೇಳಿದ್ದ ರಾಜ್ಯ ಸರ್ಕಾರ ಈಗ ಮಾತು ತಪ್ಪಿದ್ಯಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಸರ್ಕಾರಿ ಆಸ್ತಿ ಪಾಸ್ತಿ ಹಾನಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ...

ವ್ಯಾಲೆಂಟೈನ್ಸ್ ಡೇ ಆಚರಿಸಲು ಬಿಡಲ್ಲ, ಪ್ರೇಮಿಗಳು ಕಂಡ್ರೆ ಮದ್ವೆ ಮಾಡಿಸ್ತೀವಿ – ಕ್ರಾಂತಿ ಸೇನೆ ಎಚ್ಚರಿಕೆ

2 weeks ago

ಹುಬ್ಬಳ್ಳಿ: ನಮ್ಮ ದೇಶ ಹಾಗೂ ಸಂಸ್ಕೃತಿಗೆ ವಿರುದ್ಧವಾಗಿರುವ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲು ಬಿಡುವುದಿಲ್ಲ ಎಂದು ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ಎಚ್ವರಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪ್ರೇಮಿಗಳ ದಿನದ ನೆಪದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ...

ಬಿಜೆಪಿ ನಾಯಕರು ತಂಗಿದ್ದ ಸ್ಲಂ ಮನೆಗಳು ಹೇಗಿತ್ತು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

2 weeks ago

ಬೆಂಗಳೂರು: ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯದಲ್ಲಿ ಸ್ಲಂ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಬಿಜೆಪಿ ನಾಯಕರು ಮತ ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಇದೇ ನಾಯಕರು ಕೊಳಗೇರಿಗಳಲ್ಲಿನ ಹೈಟೆಕ್ ಸೌಲಭ್ಯ ಹೊಂದಿರುವ ಮನೆಗಳಲ್ಲಿ ವಾಸ್ತವ್ಯ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಬಿಎಸ್...

ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಒಂದು ಮಾತು ಎತ್ತಲಿಲ್ಲ- ರಾಹುಲ್ ವಿರುದ್ಧ ಶೆಟ್ಟರ್ ವಾಗ್ದಾಳಿ

2 weeks ago

ಹುಬ್ಬಳ್ಳಿ: ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಮಾತನಾಡಿದ ತಮ್ಮ ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಮಾತು ಎತ್ತಲಿಲ್ಲ. ಈಗ ಕಾಂಗ್ರೆಸ್ ನವರ ನಾಟಕ ಗೊತ್ತಾಗುತ್ತೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ....

ಜೀನ್ಸ್ ಪ್ಯಾಂಟ್, ಚೂಡಿದಾರ ಬಿಟ್ಟು ಇಳಕಲ್ ಸೀರೆ ತೊಟ್ಟ ವಿದ್ಯಾರ್ಥಿನಿಯರು

2 weeks ago

ಧಾರವಾಡ: ಜೀನ್ಸ್ ಪ್ಯಾಂಟ್ ಹಾಗೂ ಚೂಡಿದಾರ ಹಾಕೋದನ್ನು ಬಿಟ್ಟು ಸ್ವಲ್ಪ ಡಿಫ್ರೆಂಟಾಗಿ ಡ್ರೆಸ್ಸಿಂಗ್ ಮಾಡಿಕೊಂಡು ಧಾರವಾಡ ನಗರದ ಜಿಗಳೂರ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಮಿಂಚಿದ್ದಾರೆ. ಕಾಲೇಜಿನಲ್ಲಿ ಶನಿವಾರ ಸಾಂಪ್ರದಾಯಿಕ ದಿನ ಆಚರಣೆ ಮಾಡಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯರೆಲ್ಲರೂ ಸೇರಿ ಚೂಡಿದಾರ ಹಾಗೂ ಜೀನ್ಸ್...