Sunday, 19th November 2017

Recent News

ಅಪಘಾತದಲ್ಲಿ ಗಾಯಗೊಂಡವರನ್ನ ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಜೆ.ಟಿ.ಪಾಟೀಲ್

ಬಾಗಲಕೋಟೆ: ಮಳೆಯ ಮಧ್ಯೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನ ಸಾಂತ್ವನಗೊಳಿಸಿ ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಅವರು ತಮ್ಮ ಕಾರಿನಲ್ಲಿ ಕೆರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನರನೂರ ಗ್ರಾಮದ ಬಳಿ ಸೋಮವಾರ ಸಂಜೆ 5.30ರ ವೇಳೆಯಲ್ಲಿ ಎರಡು ಬೈಕ್ ಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದರು. ಗಾಯಾಳುಗಳನ್ನ ಆಸ್ಪತ್ರೆಗೆ ಕೊಂಡೊಯ್ಯಲು ತಮ್ಮ ಕಾರು ನೀಡಿ ಬೇರೆ ಕಾರಿನಲ್ಲಿ ಹೋಗುವ ಮೂಲಕ ಜೆ.ಟಿ. ಪಾಟೀಲ್ ಮಾನವೀಯತೆ ಮೆರೆದಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ನರನೂರ ನಿವಾಸಿಗೆ ಕೆರೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಜೆ.ಟಿ. ಪಾಟೀಲ್ ಬೇರೆ ಕಾರಿನಲ್ಲಿ ನರನೂರ ಗ್ರಾಮದ ಭೂಮಿಪೂಜೆ ಕಾರ್ಯಕ್ರಮಕ್ಕೆ ತೆರಳಿದರು.

 

Leave a Reply

Your email address will not be published. Required fields are marked *