ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸದಿದ್ರೆ ಆಹೋರಾತ್ರಿ ಧರಣಿ: ಭಾ.ಮ.ಹರೀಶ್

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಅಧಿಕಾರಾವಧಿ ಮುಗಿದು 9 ತಿಂಗಳಾದರೂ ಇನ್ನೂ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ನಿರ್ಮಾಪಕ ಭಾ.ಮ.ಹರೀಶ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಮೇ 25ರ ಒಳಗಡೆ ಚುನಾವಣೆ ಪ್ರಕ್ರಿಯೆ ಆರಂಭಿಸದಿದ್ದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳದಲ್ಲಿ ಕುರಿತು ಹೋರಾಟ ಮಾಡುವುದಾಗಿ ಭಾ.ಮ.ಹರೀಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಈ ಕುರಿತು ಕನ್ನಡ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆ ಮಾತು-ಕಥೆ ನಡೆಸಿದ್ದು ಹಲವರ ಬೆಂಬಲ ಕೂಡ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಚಿತ್ರ ಮಂಡಳಿ ಫೇಸ್‍ಬುಕ್ ಪೇಜ್ ನಲ್ಲಿ ಪೋಸ್ಟ್ ಪ್ರಕಟವಾಗಿದ್ದು, ಅದರ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸುವಂತೆ ಆಗ್ರಹಿಸಿ ಮಂಡಳಿ ಮಾಜಿ ಕಾರ್ಯದರ್ಶಿ ಭಾ.ಮ.ಹರೀಶ್ ನೇತೃತ್ವದ ಬಣ ಆಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸಬೇಕಿತ್ತು .ಆದರೆ ಯಾವುದೋ ನೆಪವೊಡ್ಡಿ ಪ್ರಸ್ತುತ ವಾಣಿಜ್ಯಮಂಡಳಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರು ಚುನಾವಣೆಯನ್ನು ಆರು ತಿಂಗಳುಗಳ ಕಾಲ ಮುಂದೂಡಿದ್ದರು. ಈಗ ಇದೇ ಜೂನ್ ನಲ್ಲಿ ನಡೆಯಬೇಕಿರುವ ಚುನಾವಣೆಯನ್ನೂ ಕೂಡ ಅವರು ಮುಂದೂಡುವ ಯತ್ನದಲ್ಲಿದ್ದಾರೆ. ಹಾಗಾಗಿ ಚುನಾವಣೆ ನಡೆಸುವ ಪ್ರಕ್ರಿಯೆ ನಡೆಯಬೇಕು ಎಂದು ಭಾ.ಮ.ಹರೀಶ್ ನೇತೃತ್ವದ ನಿರ್ಮಾಪಕರ ತಂಡ ಒತ್ತಾಯಿಸಿದೆ.

ಜಯಸಿಂಹ ಮುಸುರಿ, ದಿನೇಶ್ ಗಾಂಧಿ, ನಂಧಿಹಾಳ್, ರಾಜೇಶ್ ಬ್ರಹಾವರ್, ಬಿ.ಆರ್.ಕೇಶವ ಸೇರಿದಂತೆ ಇತರ ನಿರ್ಮಾಪಕರ ತಂಡವು ಇದೇ ತಿಂಗಳ 25 ರಿಂದ ವಾಣಿಜ್ಯ ಮಂಡಳಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಭಾ.ಮ.ಹರೀಶ್ ನೇತೃತ್ವದ ನಿರ್ಮಾಪಕರ ತಂಡ ತಿಳಿಸಿದೆ.

You might also like More from author

Leave A Reply

Your email address will not be published.

badge