Monday, 18th June 2018

Recent News

ರೊಮ್ಯಾಂಟಿಕ್ ಸೀನ್‍ಗಳಲ್ಲಿ ನಟಿಸಲ್ಲ ಎಂದ ಐಶ್ವರ್ಯ ರೈ ಬಚ್ಚನ್!

ಮುಂಬೈ: ಐಶ್ವರ್ಯ ರೈ ಬಚ್ಚನ್ ಈಗ ಅನಿಲ್ ಕಪೂರ್ ಜೊತೆ `ಫೆನ್ನಿ ಖಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ನಟಿಸುತ್ತಿದ್ದು ಐಶ್ವರ್ಯ ಜೊತೆ ರೊಮಾನ್ಸ್ ಮಾಡಲಿದ್ದಾರೆ.

ಆರಂಭದಲ್ಲಿ ಫೆನ್ನಿ ಖಾನ್ ಚಿತ್ರದಲ್ಲಿ ಐಶ್ವರ್ಯ ರೈ ರೊಮ್ಯಾಂಟಿಕ್ ಸೀನ್‍ನಲ್ಲಿ ನಟಿಸಲು ನಿರಾಕರಿಸಿದ್ದರು. ನಂತರ ಐಶ್ ಚಿತ್ರದ ಕೆಲವು ಭಾಗಗಳಲ್ಲಿ ಎಷ್ಟು ಬೇಕೊ ಅಷ್ಟು ರೊಮ್ಯಾಂಟಿಕ್ ಸೀನ್‍ಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿತ್ರದ ದೃಶ್ಯಕ್ಕೆ ಹೇಗೆ ನಟಿಸಬೇಕು ಎನ್ನುವ ವಿಚಾರಕ್ಕೆ ಐಶ್ವರ್ಯ ಸ್ವಯಂ ನಿರ್ಬಂಧ ಹೇರಿದ್ದಾರೆ. ಆದರೆ ಈಗ ಈ ಚಿತ್ರದ ಕೆಲವು ದೃಶ್ಯಗಳಲ್ಲಿ ರೊಮ್ಯಾಂಟಿಕ್ ಆಗಿ ನಟಿಸಲು ಒಪ್ಪಿಕೊಂಡಿದ್ದಾರೆ.

ಈ ಮೊದಲು ಕರಣ್ ಜೋಹರ್ ನಿರ್ದೇಶಿಸಿದ್ದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ರಣ್‍ಬೀರ್ ಕಪೂರ್ ಜೊತೆ ಐಶ್ವರ್ಯ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ದೃಶ್ಯ ನೋಡಿದ ಜನರು ನಾನಾ ರೀತಿಯಲ್ಲಿ ಮಾತನಾಡಿದ್ದರು. ಈಗ ಮತ್ತೆ ವಿವಾದಕ್ಕೆ ಕಾರಣವಾಗಬಾರದು ಎನ್ನುವ ಕಾರಣಕ್ಕೆ ರೊಮ್ಯಾಂಟಿಕ್ ಸೀನ್‍ಗಳಲ್ಲಿ ಹೆಚ್ಚಾಗಿ ನಟಿಸದೇ ಇರುವ ತೀರ್ಮಾನ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *