ಒಮ್ಮೆ ನೀವೂ ಟ್ರೈ ಮಾಡಿ ನೋಡಿ ಚಿಕನ್ ಸೀಕ್ ಕಬಾಬ್

By
2 Min Read

ನೀವು ಚಿಕನ್(Chicken) ಅನ್ನು ಅನೇಕ ವಿಧಾನದಲ್ಲಿ ಮಾಡಿ ಸವಿದಿರಬಹುದು. ಆದರೆ ಚಿಕನ್ ಸೀಕ್ ಕಬಾಬ್‌(Chicken Seekh Kebab)ನ ರುಚಿಯನ್ನು ಹೆಚ್ಚಿನವರು ನೋಡಿರಲಿಕ್ಕಿಲ್ಲ. ರೆಸ್ಟೊರೆಂಟ್‌ಗಳಲ್ಲಿ ನೀವು ನೋಡಿದ್ದರೂ ಮೆನೆಯಲ್ಲಿಯೇ ಮಾಡುವ ಪ್ರಯತ್ನ ಮಾಡಿರಲಿಕ್ಕಿಲ್ಲ. ತಂದೂರ್ ಅಥವಾ ಚಾರ್ಕೋಲ್ ಗ್ರಿಲ್ ಮೂಲಕ ಮಾಡುವ ಈ ರೆಸಿಪಿಯನ್ನು ಒಮ್ಮೆ ನೀವೂ ಕೂಡಾ ಟ್ರೈ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
ಸಣ್ಣಗೆ ಕಟ್‌ ಮಾಡಿದ ಕೋಳಿ ಮಾಂಸ – 1 ಕೆ.ಜಿ
ಮೊಟ್ಟೆ – 2
ಜೀರಿಗೆ ಪುಡಿ – 1 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 4 ಟೀಸ್ಪೂನ್
ಪುಡಿಮಾಡಿದ ಗೋಡಂಬಿ – 4 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಶುಂಠಿ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 4 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 5 ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಬೆಣ್ಣೆ – ಕಾಯಿಸಲು ಬೇಕಾಗುವಷ್ಟು ಇದನ್ನೂ ಓದಿ: ಚಿಕನ್ ಚೆಟ್ಟಿನಾಡ್ ಮಸಾಲಾ ಸಖತ್ ಟೇಸ್ಟಿ – ಯಾವತ್ತಾದ್ರೂ ಟ್ರೈ ಮಾಡಿದ್ದೀರಾ?

ಮಾಡುವ ವಿಧಾನ:
* ಒಂದು ಬಟ್ಟಲಿಗೆ ಮೊಟ್ಟೆಯನ್ನು ಒಡೆದು ಹಾಕಿ, ಅದಕ್ಕೆ ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ.
* ಕಟ್‌ ಮಾಡಿದ ಕೋಳಿ ಮಾಂಸವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ವಿಶ್ರಾಂತಿ ನೀಡಿ.
* ಈಗ ಗೋಡಂಬಿ, ಶುಂಠಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಗರಂ ಮಸಾಲಾ ಸೇರಿಸಿ ಮಿಶ್ರಣ ಮಾಡಿ.
* ಈಗ ತಯಾರಾದ ಮಿಶ್ರಣವನ್ನು 10 ಸಮ ಭಾಗಗಳಾಗಿ ಮಾಡಿ.
* ಮಾಂಸ ಬೇಯಿಸಲು ಬಳಸುವ ಮರದ ಅಥವಾ ಲೋಹದ ಕಡ್ಡಿಗಳಿಗೆ ಒಂದೊಂದೇ ಮಾಂಸದ ಮುದ್ದೆಯನ್ನು ರೋಲ್ ಮಾಡಿ. (ಕಡ್ಡಿಗಳ ಎರಡೂ ಅಂಚುಗಳಲ್ಲಿ ಹಿಡಿಯಲು ಸ್ವಲ್ಪ ಜಾಗ ಬಿಡಿ) ಇದನ್ನೂ ಓದಿ: ಒಮ್ಮೆ ಟ್ರೈ ಮಾಡಿ ಮೊಟ್ಟೆಯ ಪಲ್ಯ

* ಮಿಶ್ರಣವನ್ನು ಹಚ್ಚಿದ ಕಡ್ಡಿಗಳನ್ನು ಮಧ್ಯಮ ಉರಿಯಲ್ಲಿರುವ ತಂದೂರ್ ಅಥವಾ ಚಾರ್ಕೋಲ್ ಗ್ರಿಲ್‌ನಲ್ಲಿ ಸುಮಾರು 6 ನಿಮಿಷಗಳ ಕಾಲ ಹುರಿಯಿರಿ. ನಿಮ್ಮ ಬಳಿ ಗ್ರಿಲ್ ಇಲ್ಲ ಎಂದಾದರೆ ಒವನ್‌ನಲ್ಲಿಯೂ ಕಾಯಿಸಬಹುದು.
* ಚಿಕನ್ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಹಚ್ಚಿ ಸುತ್ತಲೂ ಕಾಯಿಸಿ.
* ಈಗ ಚಿಕನ್ ಸೀಕ್ ಕಬಾಬ್ ತಯಾರಾಗಿದ್ದು, ಅವುಗಳನ್ನು ಕಡ್ಡಿಗಳಿಂದ ಬೇರ್ಪಡಿಸಿ ಬಿಸಿಬಿಸಿಯಾಗಿ ಬಡಿಸಿ.

Live Tv
[brid partner=56869869 player=32851 video=960834 autoplay=true]

Share This Article
Exit mobile version