ರಾಜ್ಯದ ಹವಾಮಾನ ವರದಿ 25-10-2026

1 Min Read

ಮುಂಗಾರು ಕೊರತೆ ಎದುರಿಸಿದ್ದ ರಾಜ್ಯಕ್ಕೆ ಸದ್ಯ ಹಿಂಗಾರು ಕೊಂಚ ನೆಮ್ಮದಿ ತಂದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರದ ಕುಸಿತದ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಜೋರು ಮಳೆಯಾಗುವ ಸಾಧ್ಯತೆ ಇದೆ.

ವಾಯುಭಾರ ಕುಸಿತವೇ ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆ ಇದ್ದು, ಇಂದು ಅಥವಾ ನಾಳೆ ಆಂಧ್ರ ಗಡಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ಮಧ್ಯೆ ರಾಜ್ಯದ ದಕ್ಷಿಣ ಭಾಗಕ್ಕೆ ಮುಂದಿನ ಎರಡ್ಮೂರು ದಿನ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 31-24
ಶಿವಮೊಗ್ಗ: 29-19
ಬೆಳಗಾವಿ: 30-19
ಮೈಸೂರು: 25-20

ಮಂಡ್ಯ: 25-20
ಮಡಿಕೇರಿ: 25-19
ರಾಮನಗರ: 25-20
ಹಾಸನ: 25-18
ಚಾಮರಾಜನಗರ: 24-21

ಚಿಕ್ಕಬಳ್ಳಾಪುರ: 24-21
ಕೋಲಾರ: 24-19
ತುಮಕೂರು: 26-19
ಉಡುಪಿ: 32-24
ಕಾರವಾರ: 31-26

ಚಿಕ್ಕಮಗಳೂರು: 23-17
ದಾವಣಗೆರೆ: 30-19
ಹುಬ್ಬಳ್ಳಿ: 31-19
ಚಿತ್ರದುರ್ಗ: 28-19
ಹಾವೇರಿ: 31-19

ಬಳ್ಳಾರಿ: 32-20
ಗದಗ: 31-19
ಕೊಪ್ಪಳ: 32-20
ರಾಯಚೂರು: 34-20

ಯಾದಗಿರಿ: 34-19
ವಿಜಯಪುರ: 33-19
ಕಲಬುರಗಿ: 33-19
ಬಾಗಲಕೋಟೆ: 33-19

 

Share This Article
Exit mobile version