Tag: ಮಂಗಳೂರು

  • ಭಾಷಣ ಮಧ್ಯೆ ಆಝಾನ್‍- ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು ಅಂದ್ರು ಈಶ್ವರಪ್ಪ  

    ಭಾಷಣ ಮಧ್ಯೆ ಆಝಾನ್‍- ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು ಅಂದ್ರು ಈಶ್ವರಪ್ಪ  

    ಮಂಗಳೂರು: ಕಾವೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಷಣ ಮಧ್ಯೆ ಆರಂಭವಾದ ಆಝಾನ್‍ಗೆ ಮಾಜಿ ಸಚಿವ ಈಶ್ವರಪ್ಪ (K.S Eshwarappa) ಸಿಡಿಮಿಡಿಯಾಗಿದ್ದಾರೆ.

    KS ESHWARAPPA 1

    ಈಶ್ವರಪ್ಪ ಭಾಷಣ ಮಾಡ್ತಿದ್ದಾಗ ಸ್ಥಳೀಯ ಮಸೀದಿಯಿಂದ ಆಝಾನ್ (Azan) ಕೇಳಿಬಂತು. ಇದಕ್ಕೆ ಸಿಟ್ಟಾದ ಈಶರಪ್ಪ ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಅಂತ ಹೇಳಿದ್ರು.

    ಸುಪ್ರೀಂ ಕೋರ್ಟ್ (Supremecourt) ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ. ಇದರಲ್ಲೇನು ಅನುಮಾನ ಬೇಡ. ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆಹ್ವಾನ ನೀಡಿಲ್ಲ ಯಾಕೆ: ಮೋದಿ ವಿರುದ್ಧ ಸುರೇಶ್‌ ಕಿಡಿ

    KS ESHWARAPPA

    ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂಥಹ ದೇಶ ಭಾರತ ಮಾತ್ರ. ಆದರೆ ಮೈಕ್ ಹಿಡ್ಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಆಝಾನ್ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  • ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ

    ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ

    ಮಂಗಳೂರು (Mangalore) ಮೂಲದ ನಟಿಯೊಬ್ಬರ (Actress) ತಾಯಿ (Mother) ಬಳಿ ವ್ಯಕ್ತಿಯೊಬ್ಬ ಹಣ ಪೀಕಿದ ಘಟನೆ ಮಂಗಳೂರಿನ ಪಾಂಡೇಶ್ವರ (Pandeshwar) ಮಹಿಳಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ಯೂನಿಫಾರಂನಲ್ಲೇ ಬಂದಿದ್ದ ವ್ಯಕ್ತಿಯೊಬ್ಬ ‘ತಾನು ಪೊಲೀಸ್. ನೀವು ಹಣ ಕೊಡದೇ ಇದ್ದರೆ ನಿಮ್ಮ ಮನೆಯ ಮೇಲೆ ದಾಳಿ ಮಾಡಲಾಗುತ್ತದೆ’ ಎಂದು ನಟಿಯ ತಾಯಿಗೆ ಹೆದರಿಸಿ ಅವರಿಂದ 38 ಸಾವಿರ ರೂಪಾಯಿ ವಸೂಲಿ ಮಾಡಿಕೊಂಡಿದ್ದಾನೆ. ಈ ಕುರಿತು ನಟಿಯ ತಾಯಿ ದೂರು ಕೂಡ ನೀಡಿದ್ದಾರೆ.

    MANGALURU PANDESHWARA POLICE STATION

    ನಟಿಯ ತಾಯಿಯ ಮನೆಗೆ ಬಂದಿದ್ದ ವ್ಯಕ್ತಿಯು ತನ್ನನ್ನು ತಾನು ಮಹಿಳಾ ಠಾಣೆ ಪೊಲೀಸ್ ಶಿವರಾಜ್ ದೇವಾಡಿಗ ಅಂತ ಪರಿಚಯ ಮಾಡಿಕೊಂಡಿದ್ದಾನೆ. ಸಾಹೇಬ್ರು ಈಗ ರೈಡ್ ಮಾಡ್ತಾರೆ. ಗೂಗಲ್ ಪೇ ಮಾಡಿದ್ರೆ ರೈಡ್ ಮಾಡಲ್ಲ ಎಂದು ಬೆದರಿಕೆ ಹಾಕಿದ್ದಾನೆ. ತನ್ನ ನಂಬರಿನಿಂದ ಕರೆ ಮಾಡಿ ಅದೇ ನಂಬರ್ ಗೆ ಆನ್ ಲೈನ್ ಹಣ ಹಾಕಿಸಿಕೊಂಡಿದ್ದಾನೆ. ಸಾಹೇಬ್ರ ಜೊತೆ ಸಹಕರಿಸಿದ್ರೆ ದಂಧೆಗೆ ತೊಂದರೆ ಆಗಲ್ಲ ಅಂತಾ ಹೇಳಿದ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ನಟಿಯ ತಾಯಿ. ಇದನ್ನೂ ಓದಿಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್

    mangaluru dakshina kannada pandeshwar police station

    ‘ಬಂದವನು ಖಾಕಿ ಪ್ಯಾಂಟ್, ಖಾಕಿ ಶೂ ಹಾಕಿದ್ದ. ಅವನು ಪೊಲೀಸ್ ಹೌದಾ ಅಥವಾ ಅಲ್ಲವೊ ಅನ್ನೋದು ಇನ್ನು ಗೊತ್ತಾಗಿಲ್ಲ. ಆದ್ರೆ ಬಂದವನು ಪೊಲೀಸ್ ಹಾಗೆ ಇದ್ದ. ಹೊಸ ಕಮಿಷನರ್ ಬಂದಿದ್ದಾರೆ ಅವರ ಟೇಬಲ್ ಮೇಲೆ ಫೈಲ್ ಇದೆ, ಸಿಸಿಟಿವಿ ಆಫ್ ಮಾಡಿಸಿ ಫೈಲ್ ತಗಿಯೋಕೆ 10 ಸಾವಿರ ಸಿಬ್ಬಂದಿಗೆ ಕೊಡಬೇಕು. ಕಮಿಷನರ್ ಕಚೇರಿಯ 22 ಸಿಬ್ಬಂದಿಗೆ ಹಣ ನೀಡಬೇಕೆಂದು ಹೇಳಿದ’ ಎಂದಿದ್ದಾರೆ ಆ ಮಹಿಳೆ.

  • ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

    ಕುಕ್ಕರ್ ಬಾಂಬ್ ಸ್ಫೋಟ ಕೇಸ್ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

    ಬೆಂಗಳೂರು: ಕದ್ರಿ ದೇವಸ್ಥಾನವೇ (Kadri Temple) ಮಂಗಳೂರು (Mangaluru) ಕುಕ್ಕರ್ ಸ್ಫೋಟ (Cooker Bomb Blast) ಪ್ರಕರಣದ ಆರೋಪಿ ಶಾರೀಕ್‍ನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಮಂಗಳೂರಿನ ಪಂಪ್‍ವೆಲ್, ರೈಲ್ವೇ ನಿಲ್ದಾಣ, ಆರ್‌ಎಸ್‌ಎಸ್ ಕಚೇರಿ ಶಾರೀಕ್‍ನ (Shariq) ಟಾರ್ಗೆಟ್ ಆಗಿರಬಹುದು ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ ಈಗ ಕದ್ರಿ ದೇವಸ್ಥಾನವೇ ಆತನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ರಾಷ್ಟ್ರೀಯ ತನಿಖಾ ದಳದ (NIA) ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    Mangaluru Blast Case The Shariq cooker bomb capable of blowing up the bus FSL Investigation report 1

    ಎರಡೂವರೆ ತಿಂಗಳ ಚಿಕಿತ್ಸೆಯ ಬಳಿಕ ಶಾರೀಕ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾರ್ಚ್ 6 ರಂದು ಬಿಡುಗಡೆಯಾಗಿದ್ದ. ಸದ್ಯ ಎನ್‍ಐಎ ಕಸ್ಟಡಿಯಲ್ಲಿರುವ ಶಾರೀಕ್‍ನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್‍ನಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ದೆ ಎಂಬ ವಿಚಾರವನ್ನು ಶಾರೀಕ್ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಈಗ ಎನ್‍ಐಎ (NIA) ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಲು ಸಿದ್ದತೆ ನಡೆಸಿದ್ದಾರೆ. ಅದರ ಜೊತೆಯಲ್ಲಿ ಜೈಲಿನಲ್ಲಿರೋ ಮತ್ತಿಬ್ಬರು ಶಂಕಿತ ಉಗ್ರ ಮಾಜ್ ಹಾಗೂ ಯಾಸಿರ್‍ನನ್ನು ಕಸ್ಟಡಿಗೆ ಪಡೆಯುವ ನಿರ್ಧಾರ ಮಾಡಿದ್ದಾರೆ.

    Kadri Manjunatha Temple 2

    ಮಂಗಳೂರು ಪ್ರಕರಣದ ವಿಚಾರಣೆಯ ಬಳಿಕ ಶಾರೀಖ್‍ನನ್ನು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಸಲಿದೆ. ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಇದುವರೆಗೂ ಎಂಟು ಜನರನ್ನು ಬಂಧಿಸಿರೋ ಎನ್‍ಐಎ ತಂಡ ವಿಚಾರಣೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಿದೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಶಾರೀಖ್ ಕೈವಾಡದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾರೀಖ್‍ಗೂ ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಸಂಬಂಧ ವಿಚಾರಣೆ ನಡೆಯಲಿದೆ. ನಂತರ ಮಾಜ್ ಹಾಗೂ ಯಾಸಿರ್‍ನನ್ನು ಭೇಟಿ ಮಾಡಿಸಲು ನಿರ್ಧರಿಸಿದೆ.

    ತನಿಖೆಯಲ್ಲಿ ಬೇರೆ ಬೇರೆ ಸ್ನೇಹಿತರ ಹೆಸರು, ವಿಳಾಸ ಬಳಸಿ ಅಮೆಜಾನ್ ಮೂಲಕ ಸ್ಪೋಟಕ ಕಚ್ಚ ವಸ್ತು ಖರೀದಿಸಿದ್ದಾಗಿ ತಿಳಿದು ಬಂದಿದೆ. ಆರೋಪಿ ಬಳಿ ಸಿಕ್ಕ ಪ್ರೇಮ್ ರಾಜ್ ಹೆಸರಿನ ನಕಲಿ ಆಧಾರ್ ಕಾರ್ಡ್ ವಿಳಾಸ ಸಹ ಸ್ಪೋಟಕ ಸಾಮಗ್ರಿ ಖರೀದಿಗೆ ಬಳಕೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

    ಅಮೇಜಾನ್ (Amazon) ಡೆಲಿವರಿ ಕೊಟ್ಟ ಬಳಿಕ ಸ್ಪೋಟಕ ವಸ್ತುಗಳು ನಾಲ್ಕೈದು ಕೈ ಬದಲಾಯಿಸಿ ಕೊನೆಗೆ ಶಾರೀಖ್‍ನನ್ನು ತಲುಪುತ್ತಿದ್ದ ವಿಚಾರವೂ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ

  • ಮಂಗಳೂರು ಕುಕ್ಕರ್‌ ಸ್ಫೋಟ ಕೇಸ್‌ – ಎರಡೂವರೆ ತಿಂಗಳ ಬಳಿಕ ಶಾರೀಕ್ ಡಿಸ್ಚಾರ್ಜ್‌

    ಮಂಗಳೂರು ಕುಕ್ಕರ್‌ ಸ್ಫೋಟ ಕೇಸ್‌ – ಎರಡೂವರೆ ತಿಂಗಳ ಬಳಿಕ ಶಾರೀಕ್ ಡಿಸ್ಚಾರ್ಜ್‌

    ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Mangaluru Cooker Bomb Blast) ಪ್ರಕರಣದ ಪ್ರಮುಖ ಆರೋಪಿ ಉಗ್ರ ಶಾರೀಕ್ (Mohammed Shariq) ಎರಡೂವರೆ ತಿಂಗಳ ಸತತ ಚಿಕಿತ್ಸೆ ನಂತರ  ಸೋಮವಾರ ಬಿಡುಗಡೆಯಾಗಿದ್ದಾನೆ.

    ಗಂಭೀರವಾಗಿ ಗಾಯಗೊಂಡಿದ್ದ ಉಗ್ರ ಶಾರೀಕ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ ಸ್ಫೋಟದ ವೇಳೆ ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ

    MANGALURU SHARIQ 3

    ಸತತ ಎರಡೂವರೆ ತಿಂಗಳು ಚಿಕಿತ್ಸೆ ಪಡೆದ ಶಾರೀಕ್, ಇಂದು ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖವಾಗಿ ಡಿಸಾರ್ಜ್‌ ಆಗಿದ್ದಾನೆ. ಆಸ್ಪತ್ರೆಯಿಂದ ನೇರವಾಗಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಹತ್ತು ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದ್ದಾರೆ.

    ಮಂಗಳವಾರದಿಂದ ಅಧಿಕೃತವಾಗಿ ಸ್ಫೋಟದ ಬಗ್ಗೆ ಎನ್‌ಐಎ ಅಧಿಕಾರಿಗಳು ವಿಚಾರಣೆ ಶುರು ಮಾಡಲಿದ್ದಾರೆ. ವಿಚಾರಣೆ ನಂತರ ಮಂಗಳೂರು ಸೇರಿದಂತೆ ವಿವಿಧ ಜಾಗಗಳಲ್ಲಿ ಸ್ಥಳ ಮಹಜರು ಮಾಡಿ ಮತ್ತಷ್ಟು ತನಿಖೆ ಚುರುಕುಗೊಳಿಸಲು ಸಿದ್ಧತೆ ನಡೆದಿದೆ.

  • ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ

    ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ

    ನವದೆಹಲಿ: ಕೊಯಮತ್ತೂರು (Coimbatore) ಹಾಗೂ ಮಂಗಳೂರು (Mangaluru) ಸ್ಫೋಟದಲ್ಲಿ ನಮ್ಮ ಉಗ್ರರೇ ಭಾಗಿಯಾಗಿದ್ದು, ದಕ್ಷಿಣ ಭಾರತದಲ್ಲೂ (South India) ನಮ್ಮವರು ನೆಲೆಸಿದ್ದಾರೆ ಎಂಬ ಸ್ಫೋಟಕ ವಿಷಯವನ್ನು ಐಎಸ್‍ಕೆಪಿ ಒಪ್ಪಿಕೊಂಡಿದೆ.

    ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ISKP) ಎಂಬ ಉಗ್ರ ಸಂಘಟನೆ ತನ್ನ ವಾಯ್ಸ್‌ ಆಫ್ ಖುರಾಸನ್ ನಿಯತಕಾಲಿಕೆಯಲ್ಲಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಲ್ ಅಜೈಮ್ ಮೀಡಿಯಾ ಫೌಂಡೇಶನ್‍ನ ಇಂಗ್ಲೀಷ್‍ನಲ್ಲಿರುವ 68 ಪುಟಗಳ ವಾಯ್ಸ್‌ ಆಫ್ ಖುರಾಸನ್‌ ಪ್ರಚಾರದ ನಿಯತಕಾಲಿಕವನ್ನು ಬಿಡುಗಡೆ ಮಾಡಿದೆ.

    Tamil Nadu Coimbatore cylinder blast 3

    ನಿಯತಕಾಲಿಕೆಯಲ್ಲಿ ಏನಿದೆ?: ಕಳೆದ ವರ್ಷ ಅ. 23ರಂದು ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟ ಮತ್ತು ನ. 19ರಂದು ಮಂಗಳೂರಿನ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಫೋಟವನ್ನು ಐಎಸ್-ಸಂಯೋಜಿತ ಉಗ್ರರು ನಡೆಸಿದ್ದರು ಎಂದು ಉಲ್ಲೇಖಿಸಿದೆ.

    ತಮಿಳುನಾಡಿನ ಕೊಯಮತ್ತೂರು ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ನಮ್ಮ ದಾಳಿಯಾಗಿದ್ದು, ಅಲ್ಲಿ ನಮ್ಮ ಸಹೋದರರು ನಮ್ಮ ಧರ್ಮದ ಗೌರವಕ್ಕಾಗಿ ಸೇಡು ತೀರಿಸಿಕೊಂಡರು ಎಂದು ಹೇಳಿದೆ. (ನಿಯತಕಾಲಿಕೆಯಲ್ಲಿ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆಯಲಾಗಿದೆ)

    mangaluru cooker blast case

    ಹಿಂದೂಗಳು, ಬಿಜೆಪಿ ಹಾಗೂ ಭಾರತೀಯ ಸೇನೆ ವಿರುದ್ಧ ಕಿಡಿಕಾರಿದೆ. ದಕ್ಷಿಣ ಭಾರತದಲ್ಲಿ ತನ್ನ ಮುಜಾಹಿದ್ದೀನ್‍ಗಳನ್ನು ಅವರ ವಿರುದ್ಧ ಯುದ್ಧ ಮಾಡಲು ಪ್ರಚೋದಿಸುತ್ತದೆ ಎಂದು ತಿಳಿಸಿದೆ. ಆದರೆ ಇದರಲ್ಲಿ ದಕ್ಷಿಣ ಭಾರತದಲ್ಲಿ ಯಾವ ರಾಜ್ಯದಲ್ಲಿ ಮುಜಾಹಿದ್ದೀನ್‍ಗಳು ಸಕ್ರಿಯರಾಗಿದ್ದಾರೆ ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾ.9 ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಡಿಕೆಶಿ

    ಏನಿದು ವಾಯ್ಸ್‌ ಆಫ್ ಖುರಾಸನ್?: ಇದು ಮಧ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಐಸಿಸ್ ಚಟುವಟಿಕೆಯನ್ನು ಉತ್ತೇಜಿಸುವ ನಿಯತಕಾಲಿಕೆಯಾಗಿದೆ. ಇದು ದಾಳಿ ನಡೆಸಲು ಪ್ರಪಂಚದಾದ್ಯಂತ ಉಗ್ರರನ್ನು ಪ್ರಚೋದಿಸುತ್ತದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ

  • ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

    ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

    ಬೆಂಗಳೂರು: ಕರಾವಳಿಯಲ್ಲಿ ಇಂದಿನಿಂದ ಗರಿಷ್ಠ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‍ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ (Weather Bureau) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ನೀಡಿದ್ದ ಬಿಸಿ ಗಾಳಿ ಎಚ್ಚರಿಕೆಯನ್ನು ಇಲಾಖೆ ಹಿಂಪಡೆದಿದೆ.

    ಕರಾವಳಿಯಲ್ಲಿ (Coastal Area) ಉಷ್ಣ ಅಲೆಯ ಪ್ರಭಾವ ಕಳೆದ ಎರಡು ದಿನದಿಂದ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಉಂಟಾಗುವ ಹೀಟ್ ವೇವ್ (Heatwave) ಆಗಿರದೆ, ತಾಪಮಾನದ ದಿಢೀರ್ ಏರಿಕೆಯ ಪರಿಣಾಮ ಎಂದು ಇಲಾಖೆ ಎಚ್ಚರಿಸಿತ್ತು. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    heat wave 1 e1581043150986

     

    ಸಾಮಾನ್ಯವಾಗಿ ಏಪ್ರಿಲ್ -ಮೇ ತಿಂಗಳಲ್ಲಿ ಉಷ್ಣ ಅಲೆಯ ಪ್ರಮಾಣ ಹೆಚ್ಚಾಗಿ ತಾಪಮಾನ ಏರಿಕೆ ಕಾರಣವಾಗುತ್ತಿತ್ತು. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಒಂದು ತಿಂಗಳ ಮುಂಚೆಯೇ ಆ ವಾತಾವರಣ ಉಂಟಾಗಿ ಇಲಾಖೆ ಉಷ್ಣ ಅಲೆಯ ಅಲರ್ಟ್ ನೀಡಿತ್ತು. ಆದರೆ ಉಷ್ಣಾಂಶ ಎರಡು ದಿನಗಳಿಗೆ ಸೀಮಿತಗೊಂಡು ಕಡಿಮೆಯಾಗಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಉಷ್ಣ ಅಲೆಯ ಪರಿಣಾಮ ಶನಿವಾರ ಉಷ್ಣತೆಯ ಅನುಭವ ಹೆಚ್ಚಾಗಿತ್ತು. ಮಂಗಳೂರಿನಲ್ಲಿ (Mangaluru) ಗರಿಷ್ಠ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ (Celsius) ದಾಖಲಾಗಿದೆ. ಇದನ್ನೂ ಓದಿ: ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?

  • ಕಾಲಿನಲ್ಲಿ ಬಲವಿಲ್ಲದಿದ್ದರೂ ಮಂಗಳೂರಿನ ಯಶಸ್ವಿ ಫುಡ್ ಡೆಲಿವರಿ ಬಾಯ್!

    ಕಾಲಿನಲ್ಲಿ ಬಲವಿಲ್ಲದಿದ್ದರೂ ಮಂಗಳೂರಿನ ಯಶಸ್ವಿ ಫುಡ್ ಡೆಲಿವರಿ ಬಾಯ್!

    ಮಂಗಳೂರು: ಕಾಲಿನಲ್ಲಿ ಬಲವಿಲ್ಲದ ಅಂಗವಿಕಲರೊಬ್ಬರು ಯಶಸ್ವಿ ಫುಡ್ ಡೆಲಿವರಿ ಬಾಯ್ (Food Delivery Boy)  ಆಗಿ ಕಾರ್ಯನಿರ್ವಹಿಸುತ್ತಾ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

    MNG PARASHURAM 1

    ಅಂಗಾಂಗ ಸರಿ ಇದ್ದವರನ್ನೂ ಮೀರಿಸುವಂತೆ ದುಡಿದು ಸಾಧನೆ ಮಾಡುತ್ತಿರುವ ಇವರ ಹೆಸರು ಪರಶುರಾಮ (Parashurama). ಇವರ ಹೆತ್ತವರು ಮೂಲತಃ ಬಿಜಾಪುರದವರಾಗಿದ್ದು (Vijayapura) , ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಸ್ಕೀಮ್ ಒಂದರಲ್ಲಿ ದೊರೆತ ದ್ವಿಚಕ್ರ ವಾಹನ ಇವರ ಸ್ವಾವಲಂಬಿ ಬದುಕಿಗೆ ಸಾಥ್ ನೀಡಿತು. ಬಳಿಕ ಪರಶುರಾಮ ಸ್ವಿಗ್ಗಿ (Swiggy) ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇದೀಗ ಯಶಸ್ವಿ ಫಡ್ ಡೆಲಿವರಿ ಬಾಯ್ ಆಗಿ ಸಮಾಜಕ್ಕೆ ಹಾಗೂ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಇದನ್ನೂ ಓದಿ: ಮರಿಯಪ್ಪನ ಪಾಳ್ಯದಲ್ಲಿ ಸಿಲಿಂಡರ್ ದುರಂತ- 13 ಜನರಿಗೆ ಗಾಯ

    MNG parashuram 2

    ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಪರಶುರಾಮ ಜ್ವರಕ್ಕೆ ತುತ್ತಾದರು. ಇದಕ್ಕೆ ವೈದ್ಯರೊಬ್ಬರು ನೀಡಿದ ಇಂಜೆಕ್ಷನ್‌ನಿಂದಾಗಿ ಇವರ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಮತ್ತೊಂದು ಕಾಲಿನಲ್ಲಿ ಸ್ವಲ್ಪ ಬಲವಿದ್ದರೂ ಜೀವನ ಪರ್ಯಂತ ಅಂಗವೈಕಲ್ಯಕ್ಕೆ (Disability) ತುತ್ತಾದರು. 9ನೇ ತರಗತಿಯವರೆಗೆ ಶಿಕ್ಷಣ ಪಡೆದ ಇವರು ಮನೆಯಲ್ಲಿ ಕಡು ಬಡತನವಿದ್ದರಿಂದ ಭಿಕ್ಷಾಟನೆಗೆ (Begging) ಇಳಿದಿದ್ದರು. ನಂತರ ಭಿಕ್ಷೆ ಬೇಡುವ ಕಾಯಕ ಇವರಿಗೆ ಹಿಂಸೆಯೆನಿಸಿ ಒಬ್ಬರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ದುಡಿಯಲಾರಂಭಿಸಿದ್ದರು. ಬಳಿಕ ದೈಹಿಕ ನ್ಯೂನ್ಯತೆಗೆ ಸೆಡ್ಡು ಹೊಡೆದು ಭಿಕ್ಷಾಟನೆ ಬಿಟ್ಟು ಪ್ರಸ್ತುತ ಫುಡ್ ಡೆಲಿವರಿ ಬಾಯ್ ಆಗಿದ್ದಾರೆ. ಇದನ್ನೂ ಓದಿ: ನಟ ಶಾರುಖ್ ಮನೆಗೆ ನುಗ್ಗಿದ ಫ್ಯಾನ್ಸ್ ವಿರುದ್ಧ ದಾಖಾಲಾಯ್ತು ಕೇಸ್

    mng parashurama

    ಕಷ್ಟವನ್ನು ಎದುರಿಸುವ ಛಲವೊಂದಿದ್ದರೆ ಎಂತಹ ಬರಸಿಡಿಲು ಎದುರಾದರೂ ಅದನ್ನು ಜಯಿಸಬಹುದು ಎನ್ನುವುದಕ್ಕೆ ಮಂಗಳೂರಿನ (Mangaluru) ಪರಶುರಾಮ ಉತ್ತಮ ಉದಾಹರಣೆ. ಕೈಕಾಲು ಸರಿ ಇದ್ದೂ ಭಿಕ್ಷಾಟನೆ ಮಾಡುವವರು ಇವರನ್ನು ನೋಡಿ ಕಲಿತುಕೊಳ್ಳಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

  • ಮಂಗಳೂರು ಜ್ಯುವೆಲ್ಲರಿ ಶಾಪ್‍ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್

    ಮಂಗಳೂರು ಜ್ಯುವೆಲ್ಲರಿ ಶಾಪ್‍ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್

    ಮಂಗಳೂರು: ನಗರದಲ್ಲಿ ಜ್ಯುವೆಲ್ಲರಿ ಶಾಪ್‍ (Mangalore Jewellary Shop) ಗೆ ನುಗ್ಗಿ ಸಿಬ್ಬಂದಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

    MANGALURU MURDER 1

    ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಬಂಧಿತ ಆರೋಪಿ. ಕೊಲೆ ಪ್ರಕರಣ ನಡೆದ ತಿಂಗಳ ಬಳಿಕ ಆರೋಪಿಯನ್ನು ಕಾಸರಗೋಡಿ (Kasaragodu) ನಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲ್ಲರಿಗೆ ನುಗ್ಗಿ ವ್ಯಕ್ತಿಯ ಕೊಲೆ- ರಕ್ತದ ಮಡುವಿನಲ್ಲಿ ನರಳುತ್ತಿದ್ರೂ ಕ್ಯಾರೇ ಅನ್ನದೆ ದೋಚಿದ ಕಳ್ಳರು

    MANGALURU MURDER 3

    ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಡಿವೈಎಸ್‍ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಆರೋಪಿಯನ್ನು ಮಂಗಳೂರಿಗೆ ಕರೆತರಲಾಗಿದೆ. ಇದನ್ನೂ ಓದಿ: 40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

    MANGALURU MURDER 2

    ಕೊಲೆ ಪ್ರಕರಣ: ಫೆ.3ರಂದು ಮಂಗಳೂರಿನ ಹಂಪನಕಟ್ಟೆ(Hampanakatte) ಯ ಮಂಗಳೂರು ಜ್ಯುವೆಲ್ಲರಿ ಹೆಸರಿನ ಶಾಪ್ ನಲ್ಲಿ ಅತ್ತಾವರ ನಿವಾಸಿ ರಾಘವೇಂದ್ರ(50) ಹತ್ಯೆ ಮಾಡಲಾಗಿತ್ತು. ಮಾಲೀಕ ಕೇಶವ ಆಚಾರ್ಯ ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಬರ್ಬರ ಕೊಲೆ ನಡೆದಿತ್ತು. ಘಟನೆ ನಡೆದ ದಿನವೇ ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣ ಮಿಸ್ಸಿಂಗ್ ಆಗಿದ್ದು, ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಬೆಕ್ಕು ಕಿಡ್ನ್ಯಾಪ್ ಮಾಡಿ ಮಂಗಳೂರಿಗೆ ಕಳುಹಿಸಿದ್ದರು: ಪತ್ತೆಯಾಯ್ತು ದೀಪಿಕಾ ದಾಸ್ ಶ್ಯಾಡೋ

    ಬೆಕ್ಕು ಕಿಡ್ನ್ಯಾಪ್ ಮಾಡಿ ಮಂಗಳೂರಿಗೆ ಕಳುಹಿಸಿದ್ದರು: ಪತ್ತೆಯಾಯ್ತು ದೀಪಿಕಾ ದಾಸ್ ಶ್ಯಾಡೋ

    ಕಿರುತೆರೆ ನಟಿಯ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ (Deepika Das) ಮೊನ್ನೆಯಷ್ಟೇ ತಮ್ಮ ಮನೆಯ ಬೆಕ್ಕು (cat) ಶ್ಯಾಡೋ (Shadow) ಕಾಣಿಯಾಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಪ್ರಕಟಿಸಿದ್ದರು. ಇದೀಗ ಬೆಕ್ಕು ಪತ್ತೆಯಾಗಿದೆ. ಅದು ಮಂಗಳೂರಿನಲ್ಲಿ (Mangalore) ಎನ್ನುವುದು ವಿಶೇಷ. ಬೆಂಗಳೂರಿನಿಂದ ಮಂಗಳೂರಿಗೆ ಅದು ಹೇಗೆ ಹೋಯಿತು? ಸದ್ಯಕ್ಕೆ ಸಸ್ಪೆನ್ಸ್.

    deepika das 3

    ತಮ್ಮ ಶ್ಯಾಡೋ ಅನ್ನು ಬೆಂಗಳೂರಿನಲ್ಲಿ ಕಿಡ್ನ್ಯಾಪ್ (Kidnap) ಮಾಡಿ ಮಂಗಳೂರಿಗೆ ಕಳುಹಿಸಿದ್ದರ ಬಗ್ಗೆ ಸ್ವತಃ ದೀಪಿಕಾ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಕದ್ದವರು ಯಾರು? ಮಂಗಳೂರಿಗೆ ಹೋಗಿದ್ದು ಹೇಗೆ? ಅದನ್ನು ಹುಡುಕಿದ ಕಥೆ ಏನು? ಹೀಗೆ ಎಲ್ಲವನ್ನೂ ಮುಂದಿನ ದಿನಗಳಲ್ಲಿ ಹೇಳಲಿದ್ದಾರಂತೆ ದೀಪಿಕಾ ದಾಸ್. ಸದ್ಯಕ್ಕೆ ಬೆಕ್ಕು ಸಿಕ್ಕಿದೆ. ಹಾಗಾಗಿ ಬಹುಮಾನ ಅವರಲ್ಲೇ ಉಳಿದಿದೆ. ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    deepika das 3

    ದೀಪಿಕಾ ದಾಸ್ ಅವರಿಗೆ ಬೆಕ್ಕು ಮತ್ತು ಶ್ವಾನ ಎಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಪ್ರಾಣಿಗಳು ಕೂಡ ಕುಟುಂಬದ ಸದಸ್ಯರಾಗಿದ್ದಾರೆ. ಮನೆಯವರಿಗೆ ಕೊಡುವಷ್ಟೇ ಪ್ರೀತಿಯನ್ನು ಬೆಕ್ಕಿ-ಶ್ವಾನಕ್ಕೆ ಕೊಡುತ್ತಿದ್ದಾರೆ. ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ಶ್ಯಾಡೋ (Shadow) ಕಾಣೆಯಾಗಿದ್ದರ ಬಗ್ಗೆ ಅವರು ತುಂಬಾನೇ ನೊಂದುಕೊಂಡಿದ್ದರು.

    deepika das 1 2

     ಫೆ.18ರಂದು ರಾತ್ರಿಯಿಂದ ವಿಶ್ವೇಶ್ವರಯ್ಯ ಲೇಔಟ್, 3ನೇ ಬ್ಲಾಕ್, ಉಲ್ಲಾಳು, ಬೆಂಗಳೂರಿನಲ್ಲಿ  ಶ್ಯಾಡೋ ಕಾಣೆಯಾಗಿತ್ತು ಎಂದು ನಟಿ ಅಳಲು ತೊಡಿಕೊಂಡಿದ್ದರು. ಈ ಕುರಿತು ಮಾಹಿತಿಯನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಶ್ಯಾಡೋ ಅನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡಲಾಗುವುದು ಎಂದು ಹತ್ತು ಸಾವಿರದಿಂದ ಹದಿನೈದು ಸಾವಿರ ರೂಪಾಯಿವರೆಗೂ  ಹಣವನ್ನು ಘೋಷಣೆ ಮಾಡಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಡಿದ ಅಮಲಿನಲ್ಲಿ ಯುವತಿ ಕುತಿದ್ದ ಸೀಟ್‌ ಮೇಲೆ ಮೂತ್ರ ವಿಸರ್ಜನೆ..ǃ

    ಕುಡಿದ ಅಮಲಿನಲ್ಲಿ ಯುವತಿ ಕುತಿದ್ದ ಸೀಟ್‌ ಮೇಲೆ ಮೂತ್ರ ವಿಸರ್ಜನೆ..ǃ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k