Tag: ರಾಘವ ಚೆಡ್ಡಾ

  • ಪರಿಣಿತಿ ಪ್ರೆಗ್ನೆಂಟ್: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆದ ನಟಿ

    ಪರಿಣಿತಿ ಪ್ರೆಗ್ನೆಂಟ್: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆದ ನಟಿ

    ಬಾಲಿವುಡ್ ನ ಖ್ಯಾತ ನಟಿ ಪರಿಣಿತಿ ಚೋಪ್ರಾ ಪ್ರೆಗ್ನೆಂಟ್ (Pregnant) ಆಗಿರುವ ವಿಚಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಕುರಿತಂತೆ ಅವರ ತಂಡ ಸ್ಪಷ್ಟನೆ ನೀಡಿದ್ದರೂ, ಮತ್ತೆ ಮತ್ತೆ ಸುದ್ದಿ ಆಗುತ್ತಲೇ ಇತ್ತು. ಈ ಕುರಿತಂತೆ ಸ್ವತಃ ಪರಿಣಿತಿಯೇ ಸ್ಪಷ್ಟನೆ ನೀಡಿದ್ದಾರೆ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರ ವಿರುದ್ಧ ಗರಂ ಆಗಿದ್ದಾರೆ.

    parineeti chopra

    ಪರಿಣಿತಿ ಚೋಪ್ರಾ (Parineeti Chopra) ಅವರು ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಮದುವೆಯಾಗಿ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪರಿಣಿತಿ ನಟನೆಯ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಈ ನಡುವೆ ಸುಳ್ಳು ಸುದ್ದಿ ಹಬ್ಬಿರುವುದು ಅವರಿಗೆ ಬೇಸರ ತರಿಸಿದೆ.

    Parineeti Chopra Raghav Chadha

    ಕೆಲ ದಿನಗಳಿಂದ ಪರಿಣಿತಿ ಚೋಪ್ರಾ ಪ್ರೆಗ್ನೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ ಲೂಸ್ ಟಾಪ್ ಧರಿಸಿ ಪರಿಣಿತಿ ಕಾಣಿಸಿಕೊಂಡಿದ್ದರು. ಈ ಸುದ್ದಿಗೆ ಪರಿಣಿತಿ ಲುಕ್ ಮತ್ತಷ್ಟು ಪುಷ್ಠಿ ನೀಡಿತ್ತು.

     

    ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಾಗ ಬಿಳಿ ಶರ್ಟ್ಸ್ ಮತ್ತು ಶಾಟ್ಸ್ ಅನ್ನು ನಟಿ ಧರಿಸಿದ್ದರು. ಡ್ರೆಸ್ ತುಂಬಾ ಲೂಸ್ ಆಗಿತ್ತು. ನಿಧಾನವಾಗಿ ನಡೆಯುತ್ತಾ ಪಾಪರಾಜಿಗಳಿಗೆ ನಟಿ ಸ್ಮೈಲ್ ಮಾಡಿದ್ದರು. ಪರಿಣಿತಿ ಲುಕ್ ನೋಡಿದ್ರೆ ಪ್ರೆಗ್ನೆಂಟ್ ಎಂದೇ ಹೇಳಲಾಗಿತ್ತು. ನಟಿ ಪ್ರೆಗ್ನೆಂಟ್ ಆದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.