Tag: ಮೊಮ್ಮಗ

  • ಮೊಮ್ಮಗನ ಶಿಕ್ಷಣದ ಭವಿಷ್ಯದ ಕನಸು ಕಾಣುತ್ತಿರುವ ಅಜ್ಜಿಗೆ ನೆರವು ಬೇಕಿದೆ

    ಮೊಮ್ಮಗನ ಶಿಕ್ಷಣದ ಭವಿಷ್ಯದ ಕನಸು ಕಾಣುತ್ತಿರುವ ಅಜ್ಜಿಗೆ ನೆರವು ಬೇಕಿದೆ

    ಹಾಸನ: ಕುಡಿತದ ಚಟಕ್ಕೆ ಬಿದ್ದವರು ಮನ, ಮನೆಯನ್ನು ಮಾರಿಕೊಳ್ಳುವರು ಎಂಬ ಮಾತಿದೆ. ಆ ಮಾತಿಗೆ ಪೂರಕವಂತೆ ಈ ವರದಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಹೌದು ಹಾಸನ ಜಲ್ಲೆ ಶೆಟ್ಟಿ ಹಳ್ಳಿ ಗ್ರಾಮದ ವೃದ್ಧಾಶ್ರಮದಲ್ಲಿರುವ ವೃದ್ಧೆಯ ಕರುಣಾಜನಕ ಕಥೆ ಇದು.

    ಹಾಸನದ ನಿವಾಸಿಯಾಗಿರುವ ಜಯಲಕ್ಷ್ಮಮ್ಮ ಆಸ್ತಿ ಪಾಸ್ತಿ ಹೊಂದಿದ್ದ ಐಶ್ವರ್ಯವಂತ, ಗಂಡ ಮತ್ತು ಮಗನೊಂದಿಗೆ ಸುಖ ಸಂಸಾರದ ಜೀವನ ನಡೆಸುತ್ತಿದ್ದರು. ಗಂಡ ತೀರಿಹೋದ ನಂತರ ಮಗನಿಗೆ ಆಸರೆಯಾಗಿದ್ದರು. ಮಗನಿಗೆ ಮದುವೆ ಮಾಡಿ ಮಗ ಮತ್ತು ಸೊಸೆ, ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ಮಗ ನವೀನ್ ಬರೋಬ್ಬರಿ 40 ಆಟೋಗಳ ಮಾಲೀಕನಾಗಿದ್ದ. ಆದರೆ ಕುಡಿತದ ಚಟಕ್ಕೆ ಬಿದ್ದು ಆಸ್ತಿ ಮನೆಯನ್ನು ಮಾರಿಬಿಟ್ಟ. ಮಗನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ಬೆಂಗಳೂರಿನಲ್ಲಿ ರೈಲಿಗೆ ತಲೆಕೊಟ್ಟಿದ್ದಾರೆ.

    Hassana belaku Jayalakshmamma 2

    ಆದರೆ ಮಗ ಎರಡನೇ ಮದ್ವೆಯಾಗಿ ವೃದ್ಧೆ ತಾಯಿಯ ತಾಳಿಯನ್ನು ಕಸಿದುಕೊಂಡು ಕುಡಿತಕ್ಕೆ ಮಾರಿಕೊಂಡು ಬಳಿಕ ಸ್ವತಃ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಗನ ಸಾವನ್ನು ಕಂಡು ವೃದ್ಧೆ ಜಯಲಕ್ಷ್ಮಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕೆಲದಿನಗಳ ಕಾಲ ಕೋಮಾದಲ್ಲಿದ್ದು ಮರಳಿ ಪ್ರಜ್ಞೆ ಪಡೆದುಕೊಂಡಿದ್ದಾರೆ. ಮಗನ ಎರಡನೇ ಪತ್ನಿ ಮನೆಯೂ ಸಹ ತವರು ಸೇರಿದ್ದು, ಸದ್ಯ ಅಜ್ಜಿ ಮೊಮ್ಮಗ ಇಬ್ಬರು ಬೀದಿ ಪಾಲಾಗಿದ್ದಾರೆ.

    ಸದ್ಯ ಸ್ವಂತ ಇರಲು ಮನೆ ಇಲ್ಲ, ತಿನ್ನಲೂ ಊಟ ಇಲ್ಲದ ಪರಿಸ್ಥಿತಿಯಲ್ಲಿರುವ ಅಜ್ಜಿ ಜಯಲಕ್ಷಮ್ಮ ಸ್ಥಳೀಯರ ಸಹಾಯದಿಂದ ಮೊಮ್ಮಗನಿಗೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. 4ನೇ ತರಗತಿಯಲ್ಲಿ ಓದುತ್ತಿದ್ದ ಪ್ರಜ್ವಲ್‍ಗೆ ಪರೀಕ್ಷಾ ಶುಲ್ಕ ಕಟ್ಟಿಲ್ಲವೆಂದು ಶಾಲೆಯವರು ಪರೀಕ್ಷೆಗೆ ಕೂರಿಸದೆ ಹೊರ ಹಾಕಿದ್ದರು. ಇದರಿಂದ ಈಗ ದಾರಿ ಕಾಣದೇ ಕಂಗಾಲಾಗಿರುವ ಅಜ್ಜಿ, ಮೊಮ್ಮಗನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿ ತಾನೂ ಕೂಡ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

    ಇಷ್ಟೆಲ್ಲ ಕಷ್ಟಗಳ ನಡುವೆ ಶಿಕ್ಷಣದ ಮಹತ್ವ ಅರಿತಿರುವ ಈ ಅಜ್ಜಿ ನನಗೆ ಏನೂ ಬೇಡ ನಾನು ಅನಾಥಾಶ್ರಮದಲ್ಲಿ ಜೀವಿಸುತ್ತೇನೆ. ನನ್ನ ಮೊಮ್ಮಗ ಪ್ರಜ್ವಲ್‍ಗೆ ವಿದ್ಯಾಭ್ಯಾಸ ಕೊಡಿಸಿ ಅವನ ಭವಿಷ್ಯ ಪ್ರಜ್ವಲಿಸುವಂತೆ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    Hassana belaku Jayalakshmamma 1

  • ತಾಯಿಯ ಸಾವಿನ ದುಃಖದಲ್ಲಿಯೂ ಮತ ಚಲಾಯಿಸಿದ ಮಗ!

    ತಾಯಿಯ ಸಾವಿನ ದುಃಖದಲ್ಲಿಯೂ ಮತ ಚಲಾಯಿಸಿದ ಮಗ!

    ಯಾದಗಿರಿ: ಮನೆಯಲ್ಲಿ ತಾಯಿ ಮೃತಪಟ್ಟರು ಮಗ ಹಾಗೂ ಮೊಮ್ಮಗ ಮತದಾನ ಚಲಾಯಿಸಿರುವ ಘಟನೆ ಶಹಾಪುರ ವಿಧಾನಸಭೆ ಕ್ಷೇತ್ರದ ನಗನೂರ ಗ್ರಾಮದಲ್ಲಿ ನಡೆದಿದೆ.

    ಸೋಮಣ್ಣ ಎಂಬವರ ತಾಯಿ ಗುರುಸಿದ್ದವ್ವ ಇಂದು ಬೆಳಗಿನ ಜಾವ ಸಾವನಪ್ಪಿದ್ರು. ಮನೆಯಲ್ಲಿ ತಾಯಿಯ ಮೃತದೇಹ ಇಟ್ಟು ಮತದಾನ ಹಕ್ಕು ಚಲಾಯಸಬೇಕು ಎಂದು ಸೋಮಣ್ಣ ಹಾಗೂ ಮಗ ಶರಣು ತಮ್ಮ ವೋಟ್ ಮಾಡಿದ್ದಾರೆ.

    ನಗನೂರನ 123 ಸಂಖ್ಯೆಯ ಮತಗಟ್ಟೆಗೆ ಬಂದು ಮಗ ಮತ್ತು ಮೊಮ್ಮಗ ಮತವನ್ನು ಚಲಾಯಿಸಿದ್ದಾರೆ. ಮತ ಚಲಾಯಿಸಿದ ನಂತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

  • ತುಮಕೂರಿನ ತಿಪಟೂರಿನಲ್ಲಿ ಪೈಶಾಚಿಕ ಕೃತ್ಯ- ಅಜ್ಜಿಯ ಮೇಲೆ ಸ್ವಂತ ಮೊಮ್ಮಗನಿಂದಲೇ ಅತ್ಯಾಚಾರ

    ತುಮಕೂರಿನ ತಿಪಟೂರಿನಲ್ಲಿ ಪೈಶಾಚಿಕ ಕೃತ್ಯ- ಅಜ್ಜಿಯ ಮೇಲೆ ಸ್ವಂತ ಮೊಮ್ಮಗನಿಂದಲೇ ಅತ್ಯಾಚಾರ

    ತುಮಕೂರು: ಮೊಮ್ಮಗನೇ ತನ್ನ ಸ್ವಂತ ಅಜ್ಜಿಯ ಮೇಲೆ ಅತ್ಯಾಚಾರವೆಸಗಿರೋ ಪೈಶಾಚಿಕ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

    ತಂದೆಯ ತಾಯಿಯಾದ 58 ವರ್ಷದ ವೃದ್ಧೆಯ ಮೇಲೆ ಪಾಪಿ ಮೊಮ್ಮಗ ಅತ್ಯಾಚಾರ ಮಾಡಿದ್ದಾನೆ. 19 ವರ್ಷದ ಕೀರ್ತಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಅಜ್ಜಿಯ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದಾನೆ.

    ಈ ಬಗ್ಗೆ ವೃದ್ಧೆ ಮೊಮ್ಮೊಗನ ವಿರುದ್ಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕೀರ್ತಿಯನ್ನು ಬಂಧಿಸಿದ್ದಾರೆ.

    ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    tmk 1 1

  • ಕಬೋರ್ಡ್ ನಲ್ಲಿ ಅಜ್ಜಿಯ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಕಬೋರ್ಡ್ ನಲ್ಲಿ ಅಜ್ಜಿಯ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಬೆಂಗಳೂರು: ಯುವಕನೊಬ್ಬ ತನ್ನ ಅಜ್ಜಿಯನ್ನ ಕೊಲೆಗೈದು ಹೆಣವನ್ನ ಕಬೋರ್ಡ್ ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ.

    ತಂದುಕೊಟ್ಟ ಊಟ ತಿಂದಿಲ್ಲ ಅಂತ ಮೊಮ್ಮಗ ಅಜ್ಜಿಯನ್ನ ಕೊಂದಿದ್ದ ಎಂಬ ವಿಷಯ ಬಹಿರಂಗವಾಗಿದೆ. ತಂದು ಕೊಟ್ಟ ಊಟ ಬಿಸಾಡಿದಕ್ಕೆ ಮೊಮ್ಮಗ ರಾಡಿನಿಂದ ಹೊಡೆದು ಅಜ್ಜಿಯನ್ನ ಕೊಲೆಗೈದಿದ್ದ. ಏಳು ತಿಂಗಳ ಕಾಲ ಶವ ಇದ್ದ ರೂಂನಲ್ಲೇ ಮಲಗುತ್ತಿದ್ದ. ನಂತರ ವಾಸನೆ ಬಂದಿದ್ದಕ್ಕೆ ಮನೆ ಖಾಲಿ ಮಾಡಿದ್ದ ಎಂದು ತಿಳಿದುಬಂದಿದೆ.

    ಆಗಸ್ಟ್ ನಲ್ಲಿ ಅಜ್ಜಿಯನ್ನ ಕೊಲೆ ಮಾಡಿ ಕಬೋರ್ಡ್‍ನಲ್ಲಿ ಇಟ್ಟಿದ್ದ. ಫೆಬ್ರವರಿಯಲ್ಲಿ ವಾಸನೆ ಬಂದ ಬಳಿಕ ಮನೆ ಬಿಡೋ ಚಿಂತನೆ ಮಾಡಿದ್ದ. ಕೊಲೆ ಮಾಡಿದ ಸಂಜಯ್ ಸ್ನೇಹಿತನಿಂದ ಈ ಮಾಹಿತಿ ಬಹಿರಂಗವಾಗಿದೆ. ಸದ್ಯ ಸಂಜಯ್ ಮತ್ತು ಆತನ ತಾಯಿ ಶಶಿಕಲಾಗಾಗಿ ಕೆಂಗೇರಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

    kengeri murder 7

    ಕೆಂಗೇರಿಯಲ್ಲಿ ನವೀನ್ ಎಂಬವರ ಬಾಡಿಗೆ ಮನೆಯಲ್ಲಿ ಸಂಜಯ್ ವಾಸವಿದ್ದ. ಮನೆಯಲ್ಲಿ ತಾಯಿ, ಮಗ ಹಾಗೂ ಅಜ್ಜಿ ಮೂರು ಜನ ವಾಸವಿದ್ರು. ಆದ್ರೆ ಫೆಬ್ರವರಿಯಲ್ಲಿ ಸಂಜಯ್ ನವೀನ್‍ರಿಂದಲೇ 50 ಸಾವಿರ ರೂ. ಸಾಲ ಪಡೆದು ಊರಿಗೆ ಹೋಗ್ತಿದ್ದೇನೆಂದು ಹೇಳಿ ತನ್ನ ತಾಯಿ ಶಶಿಕಲಾ ಜೊತೆ ತಲೆಮರೆಸಿಕೊಂಡಿದ್ದ. ಪರಾರಿಯಾದ ಬಳಿಕ ಮತ್ತೆ ಮನೆಯ ಕಡೆ ಸಂಜಯ್ ಕುಟುಂಬ ಹಿಂತಿರುಗಿರಲಿಲ್ಲ.

    kengeri murder

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮನೆಯ ಅಗ್ರಿಮೆಂಟ್ ಮುಗಿದ ಬಳಿಕ ಮಾಲೀಕ ನವೀನ್ ಮನೆಯೊಳಗೆ ಹೋಗಿದ್ರು. ನಂತರ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ರು. ನಂತರ ಪೊಲೀಸರು ಪರಿಶೀಲನೆ ನಡೆಸಿದಾಗ ರೂಮಿನಲ್ಲಿದ್ದ ಡ್ರಂನ ಒಳಗಿದ್ದ ಮತ್ತೊಂದು ಡ್ರಂನಲ್ಲಿ ರಕ್ತದ ಕಲೆಯ ಬಟ್ಟೆಗಳು ಪತ್ತೆಯಾಗಿತ್ತು. ಕಬೋರ್ಡ್ ಒಳಗಿನ ಕೆಳಗಿನ ಭಾಗದಲ್ಲಿ ಕೊಳೆತ ದೇಹ ಪತ್ತೆಯಾಗಿತ್ತು. ಕಬೋರ್ಡ್ ತೆಗೆದು ನೋಡಿದಾಗ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಶವ ಅಜ್ಜಿಯದೇ ಎಂಬುದು ದೃಢವಾಗಿತ್ತು. ಶಿವಮೊಗ್ಗದಲ್ಲಿ ಇರುವ ಅಜ್ಜಿಯ ಸಂಬಂಧಿಕರಿಗೆ ಪೊಲೀಸರು ಈ ಬಗ್ಗೆ ವಿಷಯ ಮುಟ್ಟಿಸಿದ್ರು. ಆದ್ರೆ ಶವ ಸಂಸ್ಕಾರಕ್ಕೂ ಅಜ್ಜಿಯ ಶವ ಬೇಡ ಎಂದು ಸಂಬಂಧಿಕರು ಹೇಳಿದ್ರು.

    kengeri murder 2

    ಕೊಲೆ ಮಾಡಿದ ಬಳಿಕ ಕಾಲೇಜು, ಕೆಲಸ ಯಾವುದೇ ಪ್ರದೇಶದಲ್ಲೂ ಸಂಜಯ್ ಪತ್ತೆಯಾಗಿಲ್ಲವಾದ್ದರಿಂದ ಸಂಜಯ್‍ನೇ ಕೊಲೆ ಮಾಡಿ ನಾಪತ್ತೆಯಾಗಿರೋದು ದೃಢವಾಗಿತ್ತು. ಓದುತ್ತಿದ್ದ ಕಾಲೇಜಿನಲ್ಲೂ ಸಂಜಯ್ ಎರಡೆರಡು ವಿಳಾಸ ಬದಲು ಮಾಡಿದ್ದ. ಕುಟುಂಬದ ಕಷ್ಟ ಹೇಳಿ ಹಣ ಪಡೆದು ಮೋಸ ಮಾಡೋದು ಇವನ ಖಯಾಲಿಯಾಗಿತ್ತು. ಮನೆಯ ಮಾಲೀಕ ನವೀನ್‍ಗೆ ಐವತ್ತು ಸಾವಿರ ರೂ. ಮೋಸ ಮಾಡಿದ್ದು, ಕೆಲಸ ಮಾಡುವ ಜಾಗದಲ್ಲಿಯೂ ಮೋಸ ಮಾಡಿದ್ದ. ಮನೆಯಲ್ಲಿ ಕಷ್ಟ ಅಂತ ಹೇಳಿ ಗಿರಿನಗರದ ಕೃಷ್ಣಮೂರ್ತಿ ಎಂಬವರಿಂದ ಒಂದೂವರೆ ಲಕ್ಷ ರೂ. ಹಣ ಪಡೆದು ಪರಾರಿಯಾಗಿದಾನೆ. ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ಕೃಷ್ಣಮೂರ್ತಿ ಠಾಣೆಗೆ ಬಂದಾಗ ಸಂಜಯ್‍ನ ಮೋಸ ಬಯಲಾಗಿದೆ.

    kengeri murder 1

    kengeri murder 3

    kengeri murder 4

    kengeri murder 5

    kengeri murder 6