Tag: ಮಾರ್ಸ್‌ ಆರ್ಬಿಟರ್‌ ಮಿಷನ್‌

  • 8 ವರ್ಷದ ಸುದೀರ್ಘ ಪಯಣ ಕೊನೆಗೊಳಿಸಿದ ಮಂಗಳಯಾನ

    8 ವರ್ಷದ ಸುದೀರ್ಘ ಪಯಣ ಕೊನೆಗೊಳಿಸಿದ ಮಂಗಳಯಾನ

    ಅಮರಾವತಿ: `ಮಂಗಳಯಾನ’ದ ಕಕ್ಷೆಗಾಮಿ (Mars Orbiter Mission) ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣೆ ಆರಂಭಿಸಿದ 8 ವರ್ಷಗಳ ಬಳಿಕ ಇಂಧನ ಖಾಲಿಯಾಗಿದೆ. ಅದರ ಬ್ಯಾಟರಿ ಸುರಕ್ಷಿತ ಮಿತಿಯನ್ನು ಮೀರಿದ್ದು, ದೇಶದ ಚೊಚ್ಚಲ ಉಪಗ್ರಹ ಮಿಷನ್ ಮಂಗಳಯಾನ (Mangalyan) ತನ್ನ ಸುದೀರ್ಘ ಪಯಣವನ್ನು ಪೂರ್ಣಗೊಳಿಸಿದೆ.

    MANGALYAN 2

    ಸುಮಾರು 450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ (MOM) ಅನ್ನು 2013ರ ನವೆಂಬರ್ 5ರಂದು ಶ್ರೀಹರಿಕೋಟದಿಂದ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ  ಉಡಾವಣೆ ಮಾಡಲಾಗಿತ್ತು. 2014 ಸೆಪ್ಟೆಂಬರ್ 24ರಂದು ಮಿಷನ್ ಮಾರ್ಸ್ ಆರ್ಬಿಟರ್ ಮಿಷನ್ ಮಂಗಳ ಕಕ್ಷೆಗೆ ಸೇರಿತು. ಸದ್ಯ ಉಪಗ್ರಹದಲ್ಲಿ ಇಂಧನ ಹಾಗೂ ಬ್ಯಾಟರಿ ಖಾಲಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೂಲಗಳು ತಿಳಿಸಿವೆ ಎನ್ನಲಾಗಿದೆ. ಆದರೆ ಇಸ್ರೋದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ISRO ROCKET

    ಭಾರತದ `ಮಂಗಳಯಾನ’ ಉಪಗ್ರಹವು 8 ವರ್ಷ ಪೂರ್ಣಗೊಳಿಸಿದೆ. ಆರು ತಿಂಗಳ ಅವಧಿಗೆ ಕಾರ್ಯ ನಿರ್ವಹಿಸಲು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ತನ್ನ ಅವಧಿ ಮೀರಿ ಕಾರ್ಯನಿರ್ವಹಿಸಿದೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ಮಂಗಳ ಗ್ರಹದಲ್ಲಿನ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿ ಇರಬಹುದಾದ ಸೂಕ್ಷ್ಮ ಜೀವ ಕಣಗಳು, ಜೀವಿಗಳ ಹುಟ್ಟಿಗೆ ಕಾರಣವಾಗುವ ಮಿಥೇನ್ ಅನಿಲ ಇದೆಯೇ ಎಂಬುದನ್ನು ಪತ್ತೆ ಹಚ್ಚುವುದು ಮಾರ್ಸ್ ಆರ್ಬಿಟ್ ಮಿಷನ್ ಯೋಜನೆಯ ಮೂಲ ಉದ್ದೇಶವಾಗಿತ್ತು. ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದೆ. ಇಸ್ರೋ ಕೈಗೊಂಡಿದ್ದ ಅಂತರ ಗ್ರಹಯಾನ ಯೋಜನೆಗಳಲ್ಲಿ ಮಂಗಳಯಾನ ಅತ್ಯಂತ ಕಡಿಮೆ ವೆಚ್ಚದ್ದು.

    Chandrayana 02

    ಮಾರ್ಸ್ ಆರ್ಬಿಟರ್ ಮಾರ್ಸ್ ಕಲರ್ ಕ್ಯಾಮೆರಾ (MCC), ಥರ್ಮಲ್ ಇನ್ಫ್ರಾರೆಡ್ ಇಮೇಜಿಂಗ್ ಸ್ಪೆಕ್ಟ್ರೋಮೀಟರ್ (TIS), ಮೀಥೇನ್ ಸೆನ್ಸಾರ್ ಫಾರ್ ಮಾರ್ಸ್ (MSM), ಮಾರ್ಸ್ ಎಕ್ಸೋಸ್ಫಿರಿಕ್ ನ್ಯೂಟ್ರಲ್ ಕಾಂಪೋಸಿಷನ್ ವಿಶ್ಲೇಷಕ (MENCA) ಮತ್ತು ಲೈಮನ್ ಆಲ್ಫಾ ಫೋಟೋಮೀಟರ್ (LAP) ಗಳನ್ನು ಒಳಗೊಂಡಿದೆ. ಈ ಮೂಲಕ ದತ್ತಾಂಶವನ್ನು ಕಳುಹಿಸುತ್ತದೆ.

    Live Tv
    [brid partner=56869869 player=32851 video=960834 autoplay=true]