Tag: ಮರುನಾಮಕರಣ

  • ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

    ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡುತ್ತೇವೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಚುನಾವಣಾ ಪ್ರಚಾರ ನಿಮಿತ್ತ ತೆಲಂಗಾಣದ ಘೋಶ್‍ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದಿಗೆ ಈ ಮೊದಲು ಭಾಗ್ಯನಗರ ಎಂದೇ ಹೆಸರಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ  ಭಾರತದ ಮೇಲೆ ದಾಳಿ ನಡೆಸಿದ್ದ ಕಿಲ್ ಕುತುಬ್ ಶಾ ಈ ನಗರವನ್ನು ಹೈದರಾಬಾದ್ ಎಂದು ಬದಲಾಯಿಸಿದ್ದ. ಅಲ್ಲದೇ ಅದೇ ವೇಳೆ ಕುತುಬ್ ಹಿಂದೂಗಳ ಮೇಲೆಯೂ ದಾಳಿ ನಡೆಸಿ, ದೇವಾಲಯಗಳನ್ನೆಲ್ಲಾ ನಾಶ ಮಾಡಿದ್ದ. ಹೀಗಾಗಿ ಹೈದರಾಬಾದ್‍ಗೆ ಪುನಃ ಭಾಗ್ಯನಗರವನ್ನಾಗಿ ಮಾಡುತ್ತೇವೆಂದು ಘೋಷಿಸಿದ್ದಾರೆ.

    Raja Singh Yogi Facebook

    ಕಳೆದ ತಿಂಗಳು ಘೋಶ್‍ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಕೂಡ ಇದೇ ಹೇಳಿಕೆ ನೀಡಿದ್ದರು. ಅಲ್ಲದೇ ಸಿಕಂದರಬಾದ್ ಹಾಗೂ ಕರೀಂನಗರ ಜಿಲ್ಲೆಗಳ ಹೆಸರನ್ನು ಸಹ ಬದಲಾಯಿಸುವ ಕುರಿತು ಮಾತನಾಡಿದ್ದರು.

    ಯೋಗಿ ಆದಿತ್ಯನಾಥ್ ಈಗಾಗಲೇ ಉತ್ತರಪ್ರದೇಶದಲ್ಲಿನ ಫೈಜಾಬಾದ್ ನಗರವನ್ನು ಅಯೋಧ್ಯೆಯೆಂದು ಹಾಗೂ ಅಲಹಾಬಾದ್ ಜಿಲ್ಲೆಗೆ ಪ್ರಯಾಗ್‍ರಾಜ್ ಎಂದು ಮರುನಾಮಕರಣ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರು ರಸ್ತೆಗಳಿಗೆ ಮಸೀದಿ, ಮುಸ್ಲಿಮರ ಹೆಸರು!

    ಬೆಂಗಳೂರು ರಸ್ತೆಗಳಿಗೆ ಮಸೀದಿ, ಮುಸ್ಲಿಮರ ಹೆಸರು!

    – ಪಾಲಿಕೆ ಸದಸ್ಯ ಅಜ್ಮಲ್ ಬೇಗ್‍ರಿಂದ ಬಿಬಿಎಂಪಿಗೆ ಮನವಿ
    – ಕರೆ ಮಾಡಿದ್ರೆ ಮೊಬೈಲ್ ಈಗ ಸ್ವಿಚ್ ಆಫ್

    ಬೆಂಗಳೂರು: ಅಲ್ಪಸಂಖ್ಯಾತ ಮತದಾರರನ್ನು ಓಲೈಸಲು ಬಾಪೂಜಿನಗರದ ಬಿಬಿಎಂಪಿ ಪಾಲಿಕೆ ಸದಸ್ಯ ಅಜ್ಮಲ್ ಬೇಗ್ ಬೆಂಗಳೂರಿನ ರಸ್ತೆಗಳಿಗೆ ಮುಸ್ಲಿಂ ಸಮುದಾಯ ಹೆಸರನ್ನು ಮರುನಾಮಕರಣ ಮಾಡಲು ಹೊರಟಿದ್ದಾರೆ.

    ಉತ್ತರ ಪ್ರದೇಶದ ಯೋಗಿ ಅದಿತ್ಯನಾಥ್ ಸರ್ಕಾರ ಅಲಹಾಬಾದ್ ಬದಲು ಪ್ರಯಾಗ್‍ರಾಜ್ ಹೆಸರನ್ನು ಮರುನಾಮಕರಣ ಮಾಡಿದ ಬೆನ್ನಲ್ಲೇ ಅಜ್ಮಲ್ ಬೇಗ್ ಅವರು ನಗರದ ರಸ್ತೆಗಳಿಗೂ ಮುಸ್ಲಿಮರ ಹೆಸರನ್ನು ಇಡುವಂತೆ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರೆ.

    bapujinagar 2

    ಯಾವ ರಸ್ತೆಗೆ ಯಾವ ಹೆಸರು?
    ಖಾದ್ರಿ ಶಾಮಣ್ಣ ಅಂಡರ್ ಪಾಸ್ ನ ಪೈಪ್ ಲೈನ್ ರಸ್ತೆಗೆ ಗಫೂರ್ ರಸ್ತೆ, ಸುನ್ನಿ ಚೌಕದಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರಸ್ತೆಗೆ ಸುಬಾನಿಯಾ ಮಸೀದಿ ಹೆಸರು, ಸಂತೋಷ್ ಟೆಂಟ್ ನಿಂದ ಶೋಭಾ ಟೆಂಟ್ ವರೆಗಿನ ರಸ್ತೆಗೆ ಜಾಮೀಯಾ ಮಸೀದಿ ಹೆಸರು, ಶಾಮಣ್ಣ ಗಾರ್ಡನ್ 6ನೇ ಕ್ರಾಸ್ ರಸೆಗೆ ಖುದಾದತ್ ಮಸೀದಿ ಹೆಸರು, ಬಾಪೂಜಿನಗರ 1ನೇ ಮುಖ್ಯ ರಸ್ತೆಗೆ ಹೀರಾ ಮಸೀದಿ ಎಂದು ನಾಮಕರಣ ಮಾಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರೆ.

    bapujinagar 3

    4 ತಿಂಗಳ ಹಿಂದೆ ಅಂದರೆ ಆಗಸ್ಟ್ 28ರಂದು ಅಜ್ಮಲ್ ಅವರು ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾಪವನ್ನು ಇರಿಸಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಅಜ್ಮಲ್ ಅವರ ಈ ಮನವಿಗೆ ವಿಪಕ್ಷ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಹಾಗೂ ಬಿಜೆಪಿ ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಮುಂದಿನ ಕೌನ್ಸಿಲ್ ಸಭೆಯಲ್ಲಿ ಮತ್ತೆ ಈ ಮನವಿಯ ಅರ್ಜಿಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

    ಯಾಕೆ ಮರುನಾಮಕರಣಕ್ಕೆ ಮುಂದಾಗಿದ್ದೀರಿ ಎಂದು ಪ್ರಶ್ನೆ ಕೇಳಿದ್ದಕ್ಕೆ ಸಮುದಾಯದವರು ಒತ್ತಾಯ ಮಾಡಿದ್ದಕ್ಕೆ ಅರ್ಜಿ ಸಲ್ಲಿಸಿದ್ದೇನೆ ವಿನಃ ನನ್ನ ಸ್ವಾರ್ಥಕ್ಕಾಗಿ ನಾನು ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದರು. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿ ಸಂಪರ್ಕಿಸಲು ಯತ್ನಿಸಿದಾಗ ಅಜ್ಮಲ್ ಬೇಗ್ ಬೆ ಮೊಬೈಲ್ ಸ್ವಿಚ್ ಆಫ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 70 ಜನರ ತುಂಬು ಕುಟುಂಬದಿಂದ 100ರ ಅಜ್ಜಿಗೆ ಮರುನಾಮಕರಣ!

    70 ಜನರ ತುಂಬು ಕುಟುಂಬದಿಂದ 100ರ ಅಜ್ಜಿಗೆ ಮರುನಾಮಕರಣ!

    ಯಾದಗಿರಿ: ವಯಸ್ಸಾದ ಹೆತ್ತವರನ್ನು ದೂರವಿಡುವ ಇಂತಹ ಅಧುನಿಕ ಯುಗದಲ್ಲಿ ವೃದ್ಧೆಯಾದ ತನ್ನ ತಾಯಿ ಶತ ದಿನ ಪೂರೈಸಿದ ಹಿನ್ನಲೆಯಲ್ಲಿ ಹೆತ್ತಮ್ಮನನ್ನು ಮಕ್ಕಳು, ಮಮ್ಮಕ್ಕಳು ಸೇರಿ ಮರು ನಾಮಕಾರಣ ಮಾಡಿದ ಅಪರೂಪದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ದುಪ್ಪಲ್ಲಿ ಗ್ರಾಮದ ಕಾಳಪ್ಪ ಹಾಗೂ ವೆಂಕಣ್ಣ ಅವರು ತನ್ನ ತಾಯಿ ನಾಗಮ್ಮ ವಿಶ್ವಕರ್ಮ ಶತ ದಿನ ಪೂರೈಸಿದಕ್ಕೆ ದುಪ್ಪಲ್ಲಿ ಗ್ರಾಮದ ತಮ್ಮ ಮನೆಯಲ್ಲಿ ಮರುನಾಮಕರಣ ಮಾಡಿ ಸಂಭ್ರಮಿಸಿದ್ದಾರೆ. ಅಜ್ಜಿ ಹಾಗೂ ಮರಿ ಮಮ್ಮಗನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದಾರೆ.

    ನಾಗಮ್ಮ ವಿಶ್ವಕರ್ಮ ಅವರು ಶುಕ್ರವಾರ ಅಂದ್ರೆ ನಿನ್ನೆ ನೂರು ವರ್ಷ ವಯಸ್ಸು ಪೂರ್ಣಗೊಳಿಸಿದ್ದಾರೆ. ಜನ್ಮದಾತೆಯ ತೊಟ್ಟಿಲು ಕಾರ್ಯಕ್ರಮ ಮಾಡಿ, ಹೆತ್ತಬ್ಬೆಯ ಪಾದ ಪೂಜೆ ಮಾಡಿ ಬಳಿಕ ಮರು ನಾಮಕರಣ ಮಾಡಿದ್ದಾರೆ. ತನ್ನ ಮರಿಮಮ್ಮಗನ ಜೊತೆ ಮರು ನಾಮಕರಣ ಮಾಡಿದ್ದು ಅಜ್ಜಿ ನಾಗಮ್ಮಗೆ ಖುಷಿ ಕೊಟ್ಟಿದೆ.

    ಮರಿ ಮೊಮ್ಮಗನಿಗೆ ಅನಿರುದ್ಧ ಎಂದು ನಾಮಕರಣ ಮಾಡಿದ್ದು ನಾಗಮ್ಮರಿಗೆ ಭಾಗ್ಯವಂತಿ ಎಂದು ಮರು ನಾಮಕರಣ ಮಾಡಿದ್ದಾರೆ. 20 ಪುತ್ರರು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಸೇರಿ 70 ಸದಸ್ಯರ ತುಂಬು ಕುಟುಂಬದೊಂದಿಗೆ ಅಜ್ಜಿ ಮರುನಾಮಕರಣ ಮಾಡಿಕೊಂಡಿದ್ದಾರೆ.

    YDG 1

     

  • 50 ವರ್ಷ ಇತಿಹಾಸವಿರೋ ಬೆಂಗ್ಳೂರಿನ ಈ ರಸ್ತೆಗೆ ತಂದೆಯ ಹೆಸರಿಡಲು ಮುಂದಾದ ಮೇಯರ್

    50 ವರ್ಷ ಇತಿಹಾಸವಿರೋ ಬೆಂಗ್ಳೂರಿನ ಈ ರಸ್ತೆಗೆ ತಂದೆಯ ಹೆಸರಿಡಲು ಮುಂದಾದ ಮೇಯರ್

    – ಪದ್ಮಾವತಿ ವಿರುದ್ಧ ಸಹಿ ಸಂಗ್ರಹ ಅಭಿಯಾನ

    ಬೆಂಗಳೂರು: 50 ವರ್ಷ ಇತಿಹಾಸವಿರೋ ಬೆಂಗಳೂರಿನ ರಸ್ತೆಗೆ ಮೇಯರ್ ಪದ್ಮಾವತಿ ತಮ್ಮ ತಂದೆಯ ಹೆಸರನ್ನ ನಾಮಕರಣ ಮಾಡಲು ಮುಂದಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯರು ಮೇಯರ್ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

    padmavathi

    ಮೇಯರ್ ಪದ್ಮಾವತಿ ಅವರು ರಾಜಾಜಿನಗರದ ರಾಮಮಂದಿರ ವಾರ್ಡ್‍ನ ರಸ್ತೆಗೆ ಮರುನಾಮಕರಣ ಮಾಡಲು ಮುಂದಾಗಿದ್ದಾರೆ. ಸುಮಾರು 40 ರಿಂದ 50 ವರ್ಷ ಇತಿಹಾಸವಿರೋ ರಾಮಮಂದಿರ ವಾರ್ಡ್‍ನ 10ನೇ ಮುಖ್ಯರಸ್ತೆಗೆ ಹೊಸ ಹೆಸರು ನಾಮಕರಣ ಮಾಡಲು ಸಿದ್ಧತೆಯಲ್ಲಿದ್ದಾರೆ.

    ಈಗಾಗ್ಲೇ ರಾಮಮಂದಿರ ರಸ್ತೆ ಅಂತ ಫೇಮಸ್ ಆಗಿರೋ ಈ 10ನೇ ಮುಖ್ಯರಸ್ತೆಗೆ ಮೇಯರ್ ಪದ್ಮಾವತಿ ತಮ್ಮ ತಂದೆ ಗೋಪಾಲ್ ಅವ್ರ ಹೆಸರಿಡಲು ಮುಂದಾಗಿದ್ದಾರೆ. ಈ ನಾಮಕರಣ ಪ್ರಕ್ರಿಯೆಗೆ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ram madir road 1

    ram madir road

    ಪದ್ಮಾವತಿ ಅವರ ನಡೆ ವಿರೋಧಿಸಿ `ಬೃಹತ್ ಬೆಂಗಳೂರು ನಗರ ನಾಗರೀಕರ ಹಕ್ಕು ಹೋರಾಟ ವೇದಿಕೆ’ ಸಹಿ ಸಂಗ್ರಹ ಮಾಡಿದೆ. ಗೋಪಾಲ್ ರಸ್ತೆ ಅಂತ ಹೆಸರಿಡೋ ಬದಲು ಶ್ರೀ ಕೈಲಾಸ ವೈಕುಂಠ ದೇವಸ್ಥಾನ ರಸ್ತೆ ಅಂತ ನಾಮಕರಣ ಮಾಡಲಿ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.

    ಮೇಯರ್ ಪದ್ಮಾವತಿ ರಸ್ತೆ ನಾಮಕರಣಕ್ಕೆ ಮುಂದಾಗಿರೋದು ಇದೇ ಮೊದಲಲ್ಲ. ಚಾಮರಾಜಪೇಟೆಯ ಮೊದಲನೇ ಮುಖ್ಯರಸ್ತೆಗೆ ಕರ್ನಾಟಕ ಏಕಿಕರಣಕ್ಕೆ ಶ್ರಮಿಸಿದ ಆಲೂರು ವೆಂಕಟರಾಯರ ಹೆಸರನ್ನ ಇಡಲಾಗಿತ್ತು. ಈ ರಸ್ತೆಗೆ ಟಿಪ್ಪುಸುಲ್ತಾನ್ ರಸ್ತೆ ಅಂತ ಮರುನಾಮಕರಣಕ್ಕೆ ಮೇಯರ್ ಮುಂದಾಗಿದ್ದರು ಎಂದು ಹೇಳಲಾಗಿದೆ.

    ram madir road 3

    ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ರಸ್ತೆ ಮರುನಾಮಕರಣ ಕೈಬಿಟ್ಟ ಪದ್ಮಾವತಿ ಅವರು ಈಗ ಅವರ ತಂದೆ ಗೋಪಾಲ್ ಅವರ ಹೆಸರನ್ನ ರಾಮಮಂದಿರದ ಮುಖ್ಯರಸ್ತೆಗೆ ಇಡಲು ಮುಂದಾಗಿದ್ದಾರೆ.