Tag: ನಟ ವಿವೇಕ್

  • ಸರಳವಾಗಿ ನಡೆಯಿತು ತಮಿಳು ನಟ ವಿವೇಕ್ ಪುತ್ರಿ ಮದುವೆ

    ಸರಳವಾಗಿ ನಡೆಯಿತು ತಮಿಳು ನಟ ವಿವೇಕ್ ಪುತ್ರಿ ಮದುವೆ

    ಕಾಲಿವುಡ್‌ನ (Kollywood) ಸೂಪರ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿರುವ ತಮಿಳಿನ ಹಾಸ್ಯ ನಟ ವಿವೇಕ್ (Actor Vivek) ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭರತ್ ಎಂಬುವವರ ಜೊತೆ ಸರಳವಾಗಿ ವಿವೇಕ್ ಪುತ್ರಿ ಮದುವೆಯಾಗಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ:ರುಚಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಓರ್ರಿ

    tejaswini vivek

    ಮಾ.28ರಂದು ಭರತ್ ಎಂಬುವವರ ಜೊತೆ ವಿವೇಕ್ ಪುತ್ರಿ ತೇಜಸ್ವಿನಿ ಚೆನ್ನೈನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ನಟ ವಿವೇಕ್ ಅವರು ಪರಿಸರ ಪ್ರೇಮಿಯಾಗಿದ್ದರು. ತಂದೆಯ ಆಸೆಯಂತೆಯೇ ಮದುವೆಯ ದಿನ ತೇಜಸ್ವಿನಿ (Tejaswini) ಗಿಡ ನೆಟ್ಟಿದ್ದಾರೆ. ಅದಷ್ಟೇ ಅಲ್ಲ, ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ವಿತರಿಸಿದ್ದಾರೆ. ಇದನ್ನೂ ಓದಿ:250 ಕೋಟಿ ಮೌಲ್ಯದ ಬಂಗಲೆಗೆ ಒಡತಿಯಾದ ರಣ್‌ಬೀರ್, ಆಲಿಯಾ ಭಟ್ ಪುತ್ರಿ

    viveke 1

    ವಿವೇಕ್ ಅವರು ಕೇವಲ ನಟನಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಪ್ರಗತಿಪರ ಚಿಂತನೆಗಳನ್ನ ಹಾಸ್ಯದ ಮೂಲಕ ಹೇಳುತ್ತಿದ್ದರು ವಿವೇಕ್. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಆತ್ಮೀಯರಾಗಿದ್ದ ಪದ್ಮಶ್ರೀ ಪುರಸ್ಕ್ರತ ನಟ ವಿವೇಕ್ ಹಸಿರನ್ನು ಬೆಳೆಸಬೇಕು. ಜನರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕಲಾಂ ಅವರು ಹೇಳುತ್ತಿದ್ದ ಮಾತನ್ನ ಗಂಭೀರವಾಗಿ ತೆಗೆದುಕೊಂಡು ತಮ್ಮ ಮಗನ ಹೆಸರಲ್ಲಿ ಸಾಯಿಪ್ರಸನ್ನ ಟ್ರಸ್ಟ್ ಸ್ಥಾಪಿಸಿ ಅದರಲ್ಲಿ ‘ಗ್ರೀನ್ ಕಲಾಂ’ ಎನ್ನುವ ಯೋಜನೆ ರೂಪಿಸಿದ್ದರು. ಗಿಡ ನೆಡಲು ಶುರು ಮಾಡಿದ್ದರು. ಅನೇಕ ಹಾನಿಗೊಳಗಾದ ಮರಗಳನ್ನು ಕೂಡ ರಕ್ಷಿಸಿದರು ವಿವೇಕ್.

    ಅಂದಹಾಗೆ, ವಿವೇಕ್ ಅವರು 1980ರಲ್ಲಿ ‘ಬಾಲಚಂದರ್’ (Balachandar) ಸಿನಿಮಾ ಮೂಲಕ ಕಾಲಿವುಡ್‌ಗೆ (Kollywood) ಎಂಟ್ರಿ ಕೊಟ್ಟರು. ನಿರ್ದೇಶಕ ಕೆ.ಬಾಲಚಂದರ್ ಅವರು ವಿವೇಕ್‌ರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ್ದರು.

  • ನಟ ವಿವೇಕ್‍ಗೆ ಉರುಳಾಗುತ್ತಾ ಸೌಜನ್ಯ ಜೊತೆಗಿನ ಲವ್?

    ನಟ ವಿವೇಕ್‍ಗೆ ಉರುಳಾಗುತ್ತಾ ಸೌಜನ್ಯ ಜೊತೆಗಿನ ಲವ್?

    ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಟ ವಿವೇಕ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಶುಕ್ರವಾರ ವಿಚಾರಣೆ ನಡೆಸಿದ್ದಲ್ಲದೆ ಇಂದು ಮತ್ತೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಸೌಜನ್ಯ ಜೊತೆಗಿನ ಲವ್ ವಿವೇಕ್‍ಗೆ ಮುಳುವಾಗುತ್ತಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

    ನಟಿ ಸೌಜನ್ಯ ಹಾಗೂ ಕಿರುತೆರೆ ನಟ ವಿವೇಕ್ ನಡುವೆ ಇದ್ದ ಲವ್ ವಿವೇಕ್‍ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಎಂಬ ಪ್ರಶ್ನೆ ಕಾಡುತ್ತಿದ್ದು, ಈ ಕುರಿತು ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ. ಇಬ್ಬರ ಸಂಬಂಧದ ಬಗ್ಗೆ ವಿವೇಕ್ ಗೆಳೆಯರಿಂದ ಕುಂಬಳಗೋಡು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಮುಂದುವರಿದ ಭಾಗವಾಗಿ ಇಬ್ಬರ ಫೋನ್ ಸಂಭಾಷಣೆ ಮಾಹಿತಿಯನ್ನು ಸಹ ಪಡೆಯಲಾಗುತ್ತಿದೆ. ಜೊತೆಗೆ ವಾಟ್ಸಪ್ ಚಾಟಿಂಗ್ ಬಗ್ಗೆ ಸಹ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಕೊಡವ ಸಂಪ್ರದಾಯದಂತೆ ನಟಿ ಸೌಜನ್ಯ ಅಂತ್ಯಕ್ರಿಯೆ

    ಆರು ತಿಂಗಳ ಹಿಂದಿನ, ಇಬ್ಬರ ನಡುವಿನ ಚಾಟಿಂಗ್, ಫೋನ್ ಕಾಲ್ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸರ ವಿಚಾರಣೆ ವೇಳೆ ನಟ ವಿವೇಕ್ ಹೇಳಿಕೆಗೂ ಮೊಬೈಲ್ ನಲ್ಲಿ ಸಿಕ್ಕ ಮಾಹಿತಿಗೂ ವ್ಯತ್ಯಾಸ ಕಂಡು ಬಂದರೆ ಆರೋಪಿ ವಿವೇಕ್‍ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.  ಇದನ್ನೂ ಓದಿ: ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ಈಗಾಗಲೇ ನಟ ವಿವೇಕ್ ಇಬ್ಬರ ಪ್ರೀತಿಯ ಬಗ್ಗೆ ಒಪ್ಪಿಕೊಂಡಿದ್ದಾನೆ. ಹೀಗಾಗಿ ಸೌಜನ್ಯ ಆತ್ಮಹತ್ಯೆ ಕೇಸ್‍ನಲ್ಲಿ ಲಾಕ್ ಆಗೋದು ಪಕ್ಕಾ ಏನ್ನುತ್ತಿವೆ ಪೊಲೀಸ್ ಮೂಲಗಳು. ಇದರ ಜೊತೆಗೆ ಸೌಜನ್ಯ ತಂದೆ ದೂರಿನಲ್ಲಿ ಹೇಳಿರುವ ಅಂಶಗಳ ಬಗ್ಗೆಯೂ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

    ಇಂದು ಮತ್ತೆ ವಿಚಾರಣೆಗೆ ನೋಟಿಸ್
    ನಟ ವಿವೇಕ್ ಹಾಗೂ ಮೇಕಪ್ ಮ್ಯಾನ್ ಮಹೇಶ್ ನನ್ನು ಶುಕ್ರವಾರ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಮರಳಿ ಕಳುಹಿಸಿದ್ದಾರೆ. ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಪೊಲೀಸರು ಕಳುಹಿಸಿದ್ದಾರೆ. ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಯಾವುದೇ ಸಾಕ್ಷ್ಯಗಳು ಪತ್ತೆ ಆಗಿಲ್ಲ. ಹೀಗಾಗಿ ನಟ ವಿವೇಕ್, ಮೇಕಪ್ ಮ್ಯಾನ್ ಮಹೇಶ್ ಬಂಧನ ಡೌಟ್ ಎಂದು ಸಹ ಹೇಳಲಾಗುತ್ತಿದೆ.

  • ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ

    ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ

    ಚೆನ್ನೈ: ತಮಿಳಿನ ಖ್ಯಾತ ಹ್ಯಾಸ ನಟ ವಿವೇಕ್ ಇಂದು ಬೆಳಗಿನ ಜಾವ ಸುಮಾರು 4.30ಕ್ಕೆ ನಿಧನರಾಗಿದ್ದಾರೆ,

    ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆರೋಗ್ಯ ಸ್ಥಿತಿ ಪರೀಕ್ಷಿಸಿದಾಗ ಹೃದಯಾಘಾತವಾಗಿರುವುದು ತಿಳಿದು ಬಂದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.

    Actor vivek 3

    ವೈದ್ಯರು ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    Actor vivek 2

    ವಿವೇಕ್ ಏಪ್ರಿಲ್ 15 ರಂದು ಅವರ ಸ್ನೇಹಿತನೊಂದಿಗೆ ಚೆನ್ನೈನ ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿವೇಕ್ ಅವರು, ಎಲ್ಲರೂ ಕೂಡ ಕೋವಿಡ್ -19 ಲಸಿಕೆಗಳನ್ನು ಪಡೆಯುವಂತೆ ಮನವಿ ಮಾಡಿದ್ದರು. ಹಾಗೆ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲಿಸಬೇಕೆಂದು ಜನರಿಗೆ ಕಿವಿಮಾತು ಹೇಳಿದ್ದರು.

    viveke

    ವಿವೇಕ್ ಅವರು ತಮಿಳಿನ ಬಹುಬೇಡಿಕೆಯ ಹಾಸ್ಯ ನಟರಾಗಿದ್ದು, ಈಗಾಗಲೇ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.