Tag: ಡಿ.ಕೆ.ಶಿವಕುಮಾರ್

  • ಹೇಮಾವತಿ ಲಿಂಕ್ ಕೆನಾಲ್ ಸಭೆ ಮುಂದೂಡಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಹೇಮಾವತಿ ಲಿಂಕ್ ಕೆನಾಲ್ ಸಭೆ ಮುಂದೂಡಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

    – ಕೇಂದ್ರ ಸಚಿವ ಸೋಮಣ್ಣ ಮನವಿ ಮೇರೆಗೆ ಜು.4-5ಕ್ಕೆ ಮುಂದೂಡಿಕೆ

    ಬೆಂಗಳೂರು: ಕೇಂದ್ರ ಸಚಿವ ಸೋಮಣ್ಣ (V.Somanna) ಅವರ ಮನವಿ ಮೇರೆಗೆ ಇದೇ ತಿಂಗಳು 30ರಂದು ನಡೆಯಬೇಕಿದ್ದ ಹೇಮಾವತಿ ಲಿಂಕ್ ಕೆನಾಲ್ (Hemavathi Link Canal) ಸಭೆಯನ್ನು ಜುಲೈ 4-5ಕ್ಕೆ ಮುಂದೂಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K.Shivakumar) ತಿಳಿಸಿದರು.

    ಸದಾಶಿವನಗರ ನಿವಾಸದ ಬಳಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಶಿವಕುಮಾರ್ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸೋಮಣ್ಣ ಅವರು ಸ್ಥಳೀಯ ಸಂಸದರೂ ಆಗಿರುವ ಕಾರಣ ಅವರಿಗೆ ಅನುಕೂಲವಾಗುವಂತೆ ಸಭೆ ಮುಂದೂಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮನಗರ-ತುಮಕೂರು ಮಧ್ಯೆ ಹೇಮಾವತಿ ಕಲಹ – ಸರ್ವಪಕ್ಷ ಸಭೆ ಕರೆಯಲು ಬಿಜೆಪಿ ಆಗ್ರಹ

    Hemavathi Express Canal Link 2

    ಎತ್ತಿನಹೊಳೆ ಯೋಜನೆ ಗುತ್ತಿಗೆದಾರರ ಸಭೆ ಮುಂದೂಡಿಕೆ
    ಇಂದು ತುಮಕೂರಿನಲ್ಲಿ ಯೋಜನೆ ಕಾಮಗಾರಿಯ ಗುತ್ತಿಗೆದಾರರ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಪರಮೇಶ್ವರ್ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಈ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಸಭೆ ನಾಳೆ ಅಥವಾ ನಾಡಿದ್ದು ನಡೆಯಲಿದೆ ಎಂದು ಹೇಳಿದರು.

    ಆದ್ಯತೆ ಮೇರೆಗೆ ಎತ್ತಿನಹೊಳೆ ಯೋಜನೆಯನ್ನು ನಿಗದಿತ ಸಮಯದ ಒಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ನಿರ್ದೇಶನ ನೀಡಿದ್ದಾರೆ. ಹೀಗಾಗಿ, ಈ ಯೋಜನೆ ಕಾಮಗಾರಿ ಪರಿಶೀಲನೆ ಮಾಡಲಾಗುತ್ತಿದೆ. ಈ ಯೋಜನೆಗೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ಪರಿಶೀಲನೆ ಮಾಡಲು ನಾನು ತುಮಕೂರಿಗೆ ಭೇಟಿ ನೀಡಿದ್ದೇನೆ ಎಂದರು. ಇದನ್ನೂ ಓದಿ: ಭುಗಿಲೆದ್ದ ರೈತರ ಆಕ್ರೋಶ – ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ತಾತ್ಕಾಲಿಕ ಸ್ಥಗಿತ

    ನಾನು ಈಗಾಗಲೇ ದೊಡ್ಡಬಳ್ಳಾಪುರ, ಕೊರಟಗೆರೆಗೆ ಭೇಟಿ ನೀಡಿದ್ದೇನೆ. ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಈ ಭಾಗದಲ್ಲಿ ನೀರನ್ನು ಯಾವ ರೀತಿ ಸಂಗ್ರಹಿಸುವುದು ಎಂಬ ತಾಂತ್ರಿಕ ಸಾಧ್ಯತೆಗಳ ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಸ್ಥಳೀಯ ನಾಯಕರು, ಗ್ರಾಮಸ್ಥರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಸಾರ್ವಜನಿಕರು ತಮ್ಮ ನೋವು ಹೇಳಿಕೊಂಡಿದ್ದಾರೆ. ಒಂದು ಕಡೆ ಅಣೆಕಟ್ಟು ನಿರ್ಮಾಣ ಮಾಡಬೇಕೆ, ಎರಡು ಕಡೆ ಮಾಡಬೇಕೆ ಅಥವಾ ಜನರ ಸಲಹೆಯಂತೆ ಕೆರೆಗಳನ್ನು ಬಳಸಿಕೊಂಡು ನೀರು ಸಂಗ್ರಹಿಸಬಹುದೇ ಎಂಬ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಕದನ – ಇಬ್ಬರು ಸ್ವಾಮೀಜಿಗಳು ಸೇರಿ ನೂರಾರು ರೈತರ ವಿರುದ್ಧ FIR

  • ವಾರಕ್ಕೆ 3 ದಿನ ಕಾವೇರಿ ಆರತಿ – 10,000 ಆಸನಗಳ ವ್ಯವಸ್ಥೆ, 70% ಉಚಿತ, 30% ಟಿಕೆಟ್: ಡಿಕೆಶಿ

    ಬೆಂಗಳೂರು: ವಾರಕ್ಕೆ ಮೂರು ದಿನ ಕಾವೇರಿ ಆರತಿ ನಡೆಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ.

    ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಚಿವರು, ಶಾಸಕರು, ರೈತ ಮುಖಂಡರ ಜೊತೆ ಸಭೆ ನಡೆಸಿ ಕಾವೇರಿ ಆರತಿ ಬಗ್ಗೆ ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಪ್ರಯತ್ನ ವಿಫಲ ಆಗಬಹುದು, ಪ್ರಾರ್ಥನೆ ವಿಫಲ ಆಗಲ್ಲ. ಕೆಆರ್‌ಎಸ್‌ನಲ್ಲಿ ಹೊಸ ರೂಪ ಕೊಡಲು ಪ್ರಾರಂಭ ಮಾಡಿದ್ದೇವೆ. ವಾರಕ್ಕೆ ಮೂರು ದಿನ ಕಾವೇರಿ ಆರತಿ ನಡೆಯಲಿದೆ. 10 ಸಾವಿರ ಆಸನಗಳ ವ್ಯವಸ್ಥೆ ಮಾಡುತ್ತೇವೆ. ಇದರಲ್ಲಿ 70% ಆಸನಗಳು ಉಚಿತ, 30% ಟಿಕೆಟ್ ಮಾಡ್ತೀವಿ ಎಂದು ಹೇಳಿದರು.ಇದನ್ನೂ ಓದಿ: ಶಿವಮೊಗ್ಗ | ಕುಡಿದು ಅಂಬುಲೆನ್ಸ್ ಚಾಲನೆ – ಚಾಲಕನಿಗೆ 13,000 ದಂಡ!

    ಕೆಆರ್‌ಎಸ್‌ಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಬೇಕು, ಕಾವೇರಿಗೆ ನಮನ ಸಲ್ಲಿಸಲು ಸಾಕಷ್ಟು ಸಲಹೆಗಳು ಬಂದಿವೆ. ತಾಯಿ ಕಾವೇರಿಗೆ ಜಾತಿ, ಧರ್ಮ, ಬಣ್ಣ ಇಲ್ಲ, ಎಲ್ಲರ ಆಸ್ತಿ ಕಾವೇರಿ. ಕೆಲ ರೈತರು ಆತಂಕ ವ್ಯಕ್ತಪಡಿಸಿದರು. ಗೌರವಿಸಿ ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಡ್ಯಾಂಗೆ ತೊಂದರೆ ಆಗಬಹುದು ಎಂಬ ಆತಂಕ ರೈತರಿಗಿದೆ. ಆ ರೀತಿ ಆಗಲ್ಲ. ಕಾವೇರಿ ಆರತಿ ಯಾವ ರೀತಿ ನಡೆಯಲಿದೆ ಎಂಬುದನ್ನು ಇನ್ನೆರಡು ದಿನದಲ್ಲಿ ಬಿಡುಗಡೆ ಮಾಡುತ್ತೇನೆ. ಮೈಸೂರು, ಮಂಡ್ಯ, ಕೊಡಗು, ಮಂಗಳೂರು ಸಂಸ್ಕೃತಿಯನ್ನೂ ಸೇರಿಸುತ್ತೇವೆ. ಸ್ಥಳೀಯರಿಗೆ ಮಾತ್ರ ಆದ್ಯತೆ ಕೊಡಬೇಕು ಎಂದು ಸೂಚಿಸಿದ್ದೇವೆ ಎಂದು ಹೇಳಿದರು.

    ಇನ್ನೂ ಹೆಚ್‌ಡಿಕೆಗೆ (HD Kumaraswamy) ತಿರುಗೇಟು ನೀಡಿದ ಅವರು, ಕುಮಾರಣ್ಣನೇ ಡಿಸ್ನಿಲ್ಯಾಂಡ್ ಮಾಡಬೇಕು ಎಂದು ನಮಗೆ ಹೇಳಿದ್ದರು. ನೀನು ಚೆನ್ನಾಗಿ ಬೆಳೆಯುತ್ತಿಯಾ ಅಂದರೆ ಅಪಸ್ವರ ಇದ್ದೇ ಇರುತ್ತದೆ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಪ್ಲ್ಯಾನ್ ಮಂಜೂರಾತಿ ಇಲ್ಲದೆ ಮನೆ ಕಟ್ಟಿ ಕರೆಂಟ್ ಸಂಪರ್ಕ ಇಲ್ಲದವರಿಗೆ ಡಿಕೆಶಿ ಗುಡ್‌ನ್ಯೂಸ್

  • ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳುವಷ್ಟು ದಾರಿದ್ರ್ಯ ನನಗೆ ಬಂದಿಲ್ಲ – ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

    ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳುವಷ್ಟು ದಾರಿದ್ರ್ಯ ನನಗೆ ಬಂದಿಲ್ಲ – ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

    ಬೆಂಗಳೂರು: ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳವಷ್ಟು ದಾರಿದ್ರ್ಯ ನನಗಿನ್ನೂ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy), ಡಿಸಿಎಂ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    2028ಕ್ಕೆ ಜೆಡಿಎಸ್-ಬಿಜೆಪಿ (JDS – BJP) ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಅಂತಾ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ರು. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: RSS ಮುಖಂಡನ ಮನೆ ಮೇಲೆ ಮಧ್ಯರಾತ್ರಿ ದಾಳಿ – ಕಾರಣ ಕೇಳಿ ದ.ಕ. ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

    ಹೌದು. ಇಂದು ಬೆಳಗ್ಗೆ ತಮ್ಮ ಜೆಪಿನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ನನಗೆ ಅವ್ರಿಂದ ಬಟ್ಟೆ ತೆಗೆದುಕೊಳ್ಳೋ‌ ದರಿದ್ರ ಬಂದಿಲ್ಲ. ಅದು ಜನರ ದುಡ್ಡನ್ನ ಲೂಟಿ ಮಾಡಿ ಪಾಪದಿಂದ ಸಂಪಾದನೆ ಮಾಡ್ತಿರೋ ಪಾಪದ ಹಣ. ಪಾಪದ ಹಣದಿಂದ ಬಟ್ಟೆ ತೆಗೆದುಕೊಳ್ಳೋ ದರಿದ್ರ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

    ನನಗೆ ಬಟ್ಟೆ ಬೇಕು ಅಂದ್ರೆ ನನ್ನ ಜನರೇ ಕೊಡಿಸ್ತಾರೆ ಅಂತಾ ಡಿಕೆ ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಬುಡಕ್ಕೆ ಮತ್ತೊಂದು ಭ್ರಷ್ಟಾಚಾರ ಬಾಂಬ್‌; ಜಮೀರ್ ಪಿಎ – ಬಿ.ಆರ್ ಪಾಟೀಲ್‌ರದ್ದು ಎನ್ನಲಾದ ಆಡಿಯೋ ವೈರಲ್‌

  • ನಂದಿನಿ ನಮ್ಮ ಸಂಸ್ಥೆ, ‘ನಮ್ಮ ಮೆಟ್ರೋ’ದಲ್ಲಿ ಮಳಿಗೆ ಹಾಕಲು ಅವಕಾಶ ಕೊಡ್ತೀವಿ: ಡಿಕೆಶಿ

    ನಂದಿನಿ ನಮ್ಮ ಸಂಸ್ಥೆ, ‘ನಮ್ಮ ಮೆಟ್ರೋ’ದಲ್ಲಿ ಮಳಿಗೆ ಹಾಕಲು ಅವಕಾಶ ಕೊಡ್ತೀವಿ: ಡಿಕೆಶಿ

    ಬೆಂಗಳೂರು: ನಂದಿನಿ ನಮ್ಮ ಸಂಸ್ಥೆ, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕುವುದಕ್ಕೆ ನಂದಿನಿಗೆ (Nandini Milk) ಅವಕಾಶ ಕೊಡೋದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.

    ನಮ್ಮ ಮೆಟ್ರೋ ಮಳಿಗೆಯಲ್ಲಿ ಅಮುಲ್‌ಗೆ ಜಾಗ ಕೊಟ್ಟು ನಂದಿನಿಗೆ ಜಾಗ ಕೊಡದ ವಿಚಾರದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕಲು ನಾವು ಟೆಂಡರ್ ಕರೆದಿದ್ದೆವು. ನಂದಿನಿ ಅವರು ಭಾಗಿಯಾಗಿರಲಿಲ್ಲ. ಅಮುಲ್ ಅವರು ಟೆಂಡರ್‌ನಲ್ಲಿ ಭಾಗವಹಿಸಿದ್ರು. ಅವರಿಗೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ಅವರು ಹಾಕಿದ್ರು. ಅವರಿಗೂ ಅವಕಾಶ ಕೊಡ್ತೀವಿ ಎಂದರು. ಇದನ್ನೂ ಓದಿ: ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    Metro Nandini Shop

    ಅಮುಲ್ ಅವರು 10 ಕಡೆ ಕೇಳಿದ್ರು. ನಾವು ಎರಡು ಕಡೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ನಮ್ಮ ಸಂಸ್ಥೆ ಅವರು ಮುಂದೆ ಬಂದರೆ ಅವರಿಗೂ ಕೊಡ್ತೀವಿ. ಅದು ನಮ್ಮ ಸಂಸ್ಥೆ. ಕಡಿಮೆ ದರಕ್ಕೂ ಬೇಕಾದ್ರು ಕೊಡ್ತೀವಿ. ವಿರೋಧ ಮಾಡೋರು ಪ್ರಚಾರಕ್ಕೆ ಮಾಡ್ತಿದ್ದಾರೆ, ಮಾಡಲಿ ಎಂದು ಟಾಂಗ್‌ ಕೊಟ್ಟರು.

    ಕರ್ನಾಟಕದ ಬ್ರ್ಯಾಂಡ್‌ ನಂದಿನಿಯನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ (Amul) ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ (Namma Metro) ಮುಂದಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು BMRCL ಒಪ್ಪಿದೆ. ಇದನ್ನೂ ಓದಿ: ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

  • ನಾವಿರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ: ಡಿ.ಕೆ ಶಿವಕುಮಾರ್

    ನಾವಿರುವವರೆಗೂ ಎಸ್ಕಾಂಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ: ಡಿ.ಕೆ ಶಿವಕುಮಾರ್

    ಬೆಂಗಳೂರು: ನಾನು, ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರದಲ್ಲಿರುವವರೆಗೂ ರಾಜ್ಯದಲ್ಲಿರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಭರವಸೆ ನೀಡಿದ್ದಾರೆ.

    ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಸರಣ ನಿಗಮ ನೌಕರರ ಸಂಘದ 60ನೇ ವಜ್ರ ಮಹೋತ್ಸವ ಸಂಭ್ರಮ ಹಾಗೂ ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಇಂಧನ ಸಚಿವನಾದ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಎಸ್ಕಾಂಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲೂ ಖಾಸಗಿಯವರಿಗೆ ನೀಡಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌‌ ಒಡೆಯರ್‌ ಮನವಿ

    ಆಗ ನಾನು ನಮ್ಮ ನೌಕರರು, ಇಂಜಿನಿಯರ್‌ಗಳು, ವ್ಯವಸ್ಥಾಪಕ ಮಂಡಳಿಯವರು ಬಹಳ ಶಕ್ತಿಶಾಲಿಯಾಗಿದ್ದು, ಎಸ್ಕಾಂಗಳನ್ನು (Eskom) ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದೆ. ರಾಜ್ಯದಲ್ಲಿ ಈ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರು ಇರುವವರೆಗೂ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾಳಿ ಮಾಡಿ ಇಸ್ರೇಲ್‌ ದೊಡ್ಡ ತಪ್ಪು ಮಾಡಿದೆ, ನಾವು ಶರಣಾಗಲ್ಲ: ಟ್ರಂಪ್‌ಗೆ ಖಮೇನಿ ವಾರ್ನಿಂಗ್‌

    ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ, 19ರಿಂದ 20% ಟ್ರಾನ್ಸ್ಮಿಷನ್ ನಷ್ಟ ಆಗುತ್ತಿತ್ತು. ನಾವು ಅದನ್ನು 10%ಗೆ ಇಳಿಸಿದ್ದೇವೆ. ಇದು ದೇಶಕ್ಕೆ ಮಾದರಿ. ಬೇರೆ ರಾಜ್ಯಗಳಲ್ಲಿ ಇಂದಿಗೂ 17ರಿಂದ 18% ನಷ್ಟವಾಗುತ್ತಿದೆ. ನಿಮ್ಮೆಲ್ಲರ ಶ್ರಮದಿಂದ ಇಂದು ಈ ಇಂಧನ ಇಲಾಖೆ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಜಾರ್ಜ್ ಅವರು ಈ ಇಲಾಖೆಯ ಜವಾಬ್ದಾರಿ ತೆಗೆದುಕೊಂಡು ಪಾರದರ್ಶಕವಾಗಿ ಬಹಳ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ನಾವು ಈ ಹಿಂದೆ ಅನೇಕ ಕ್ರಾಂತಿಕಾರಕ ತೀರ್ಮಾನ ಮಾಡಿದ್ದೆವು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ

    ದೀಪ ಜಗತ್ತನ್ನೇ ಬೆಳಗುತ್ತದೆ. ಈ ದೀಪಕ್ಕೆ ಬೆಳಕು ಪೂರೈಸುತ್ತಿರುವವರು ನೀವು. ದೀಪದ ಬೆಳಕು ಎಲ್ಲರಿಗೂ ಕಾಣುತ್ತದೆ. ಆದರೆ ಅದರ ಹಿಂದೆ ಇರುವ ಎಣ್ಣೆ ಹಾಗೂ ಬತ್ತಿ ಯಾರಿಗೂ ಕಾಣುವುದಿಲ್ಲ. ಅದೇ ರೀತಿ ಇಂಧನ ಇಲಾಖೆ ನೌಕರರ ಶ್ರಮದಿಂದ ಇಡೀ ಸಮಾಜಕ್ಕೆ ಬೆಳಕು ನೀಡಲಾಗುತ್ತಿದೆ. ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಬಂದಾಗಿನಿಂದ ನೀವು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದೀರಿ ಎಂದಿದ್ದಾರೆ. ಇದನ್ನೂ ಓದಿ: ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ – ಕಾರ್ಮಿಕ ಸಂಘಟನೆಗಳ ವಿರೋಧ

    ಪ್ರೀತಿ ವಿಶ್ವಾಸ ಎಂಬುದು ಮರದಲ್ಲೂ ಸಿಗುವುದಿಲ್ಲ, ಮಾರುಕಟ್ಟೆಯಲ್ಲೂ ಸಿಗುವುದಿಲ್ಲ. ಕೇವಲ ಜನರ ಹೃದಯದಲ್ಲಿ ಮಾತ್ರ ಸಿಗುತ್ತದೆ. ನಾವು ನಿಮಗಾಗಿ ಮಾಡಿದ ಸೇವೆ, ತೀರ್ಮಾನವನ್ನು ನೀವು ಸ್ಮರಿಸಿ, ನಮ್ಮ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಸರ್ಕಾರದ ಪರವಾಗಿ ನಮಿಸುತ್ತೇನೆ. ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರದಲ್ಲಿ ನಾನು ನಾಲ್ಕೂವರೆ ವರ್ಷ ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೆ. ನಾನು ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ, ಇದರ ಜವಾಬ್ದಾರಿ ಹೊತ್ತವರೆಲ್ಲರೂ ವಿಫಲರಾಗಿದ್ದಾರೆ. ನೀವು ಯಾಕೆ ಇದರ ಜವಾಬ್ದಾರಿ ವಹಿಸಿಕೊಂಡಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ನಾನು ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ ಎಂದು ಹೇಳಿದ್ದೆ. ಕಷ್ಟದ ಜವಾಬ್ದಾರಿ ವಹಿಸಿಕೊಂಡು ಅದನ್ನು ಸರಿಪಡಿಸುವುದೇ ನಾಯಕನ ಗುಣ ಎಂದು ಹೇಳಿದ್ದಾರೆ.

    ಪಾರದರ್ಶಕವಾಗಿ 24 ಸಾವಿರ ಸಿಬ್ಬಂದಿ ನೇಮಕ
    ನಾನು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ರಾಜ್ಯದಲ್ಲಿ 11 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಇಲಾಖೆ ಜವಾಬ್ದಾರಿ ಬಿಡುವಾಗ ರಾಜ್ಯದಲ್ಲಿ 23 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಇಲಾಖೆಯಲ್ಲಿ ಒಂದು ರೂಪಾಯಿ ಲಂಚ ಪಡೆಯದೇ, ಪಾರದರ್ಶಕವಾಗಿ 24 ಸಾವಿರ ನೌಕರರನ್ನು ನೇಮಕಾತಿ ಮಾಡಿದೆ. ಈ ಹಿಂದೆ ಇದ್ದ ವಿದ್ಯುತ್ ಶಕ್ತಿ ಮಂತ್ರಿಗಳು ನೇಮಕಾತಿಗೆ ವಸೂಲಿ ಮಾಡುತ್ತಿದ್ದರು. ನಾನು ಅದನ್ನು ತಪ್ಪಿಸಿ, ನಿಮ್ಮ ಮನೆ ಬಾಗಿಲಿಗೆ ನೌಕರಿಯನ್ನು ಕೊಟ್ಟ ತೃಪ್ತಿ ನನಗಿದೆ ಎಂದಿದ್ದಾರೆ.

    ಇಲಾಖೆಯ ನೌಕರರು ಇಂದಿರಾ ಗಾಂಧಿ ಅವರನ್ನು ಸ್ಮರಿಸಬೇಕು. ನಿಮ್ಮ ಇಲಾಖೆಗೆ ಹೊಸ ರೂಪ ಕೊಟ್ಟಾಗ ನೌಕರರ ಸಂಘದ ಪದಾಧಿಕಾರಿಗಳು, ಇಂಜಿನಿಯರ್ ಪದಾಧಿಕಾರಿಗಳು ವ್ಯವಸ್ಥಾಪಕ ಮಂಡಳಿಯಲ್ಲಿ ಇರಬೇಕು ಎಂದು ಆದೇಶ ಕೊಟ್ಟಿದ್ದರು. ಇಂದು ಬಲರಾಮ್, ಶಿವಣ್ಣ ಅವರು ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಜತೆ ಕೂತು ನಿಮ್ಮ ಭವಿಷ್ಯದ ಬಗ್ಗೆ ತೀರ್ಮಾನ ಮಾಡುವಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿದರು. ಇಂತಹ ತೀರ್ಮಾನ ಮಾಡಿದವರನ್ನು ನೀವು ಸ್ಮರಿಸಿಕೊಳ್ಳಬೇಕು. ನಾನು ಸಚಿವನಾಗಿ ಬಂದಾಗ 7 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿತ್ತು. ಅದನ್ನು 5 ವರ್ಷಕ್ಕೆ ಇಳಿಸಿ, ಒಂದೇ ಬಾರಿಗೆ 26%ನಷ್ಟು ವೇತನ ಏರಿಕೆ ಮಾಡಲಾಯಿತು. ಇದನ್ನು ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಅರೆಸ್ಟ್

    ರೈತರಿಂದ ಭೂಮಿ ಖರೀದಿಸದೇ ಸೋಲಾರ್ ಪಾರ್ಕ್ ನಿರ್ಮಾಣ
    ಪವನ ಶಕ್ತಿ, ಸೌರಶಕ್ತಿ, ಬೆಂಗಳೂರು ನಗರದಲ್ಲಿ ಅನಿಲ ಉತ್ಪಾದನೆ ವಿಚಾರವಾಗಿ ನಾವು ಅನೇಕ ತೀರ್ಮಾನ ಮಾಡಿದ್ದೆವು. ಅದರ ಪರಿಣಾಮವಾಗಿ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಂಡವಾಳ ಹೂಡಿಕೆದಾರರು ಆಸಕ್ತಿ ತೋರಿದ್ದರು. ಪಂಪ್ ಸ್ಟೋರೇಜ್ ಪವರ್ ಅನ್ನು ಹೊಸದಾಗಿ ಆರಂಭಿಸುತ್ತಿದ್ದು, ಸವದತ್ತಿ ಹಾಗೂ ವರಾಹಿಯಲ್ಲಿ ನಿರ್ಮಿಸಲು ಮುಂದಾಗಿದ್ದೇವೆ ಎಂದು ವಿವರಿಸಿದ್ದಾರೆ.

    ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡಲು ಪ್ರತಿ ತಾಲೂಕಿನಲ್ಲಿ 20ರಿಂದ 50 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲು ತೀರ್ಮಾನ ಮಾಡಿದ್ದೇವೆ. ಇನ್ನು ಪಾವಗಡ ಸೌರಶಕ್ತಿ ಉತ್ಪಾದನಾ ಕೇಂದ್ರ ಸ್ಥಾಪಿಸುವಾಗ ಅಲ್ಲಿನ ಕೃಷಿ ಭೂಮಿ ಬೆಲೆ ಕೇವಲ 50,000 ರೂ. ಇತ್ತು. ಆದರೂ ರೈತರಿಂದ ಭೂಮಿ ಖರೀದಿ ಮಾಡದೇ ಪ್ರತಿ ವರ್ಷ ಅವರಿಗೆ ಪ್ರತಿ ಎಕ್ರೆ 18,000 ರೂ. ಬಾಡಿಗೆ ನೀಡಿ ಈ ಯೋಜನೆಯನ್ನು ಜಾರಿ ಮಾಡಿದ್ದೇವೆ. ಈಗ ಅವರಿಗೆ ವರ್ಷಕ್ಕೆ 26ರಿಂದ 27,000 ರೂ. ಬಾಡಿಗೆ ಬರುತ್ತಿದೆ. ಈಗಲೂ ಅಲ್ಲಿನ ರೈತರು ಈ ಜಾಗದ ಮಾಲೀಕರೇ ಆಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಪ್ಪತಗುಡ್ಡದ 322 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ – ಕೇಂದ್ರದಿಂದ ಅಧಿಸೂಚನೆ

    ನಮ್ಮ ಈ ಯೋಜನೆ ವಿಶ್ವಕ್ಕೆ ಮಾದರಿಯಾಗಿತ್ತು. ಕೇಂದ್ರ ಸರ್ಕಾರವು ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿದೆ. ಮನುಷ್ಯನ ಹುಟ್ಟು ಆಕಸ್ಮಿತ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಾನು ಈ ಇಲಾಖೆ ಮಂತ್ರಿಯಾಗಿ ಜವಾಬ್ದಾರಿ ವಹಿಸಿದ ನಂತರ ನನ್ನ ಬದುಕಿನಲ್ಲಿ ದೊಡ್ಡ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗಿದ್ದೇನೆ ಎಂಬ ಆತ್ಮತೃಪ್ತಿಯಿದೆ. ನಿಮ್ಮೆಲ್ಲರ ಪ್ರಯತ್ನ, ಸಹಕಾರ, ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ.

    ಮನಸ್ಸು ಮಾಡಿದರೆ ಮೇಲಕ್ಕೂ ಏರಿಸಬಹುದು, ಕೆಳಕ್ಕೂ ಬೀಳಿಸಬಹುದು
    ನಮ್ಮ ರಾಜ್ಯದಲ್ಲಿ 35 ಲಕ್ಷ ಐಪಿ ಸೆಟ್, 2 ಲಕ್ಷ ಗ್ರಾಹಕರಿದ್ದಾರೆ. ಈ ಎಲ್ಲಾ ಗ್ರಾಹಕರ ಸಂಪರ್ಕ ನಿಮ್ಮ ಜೊತೆಗೆ ಇದೆ. ನೀವು ಮನಸ್ಸು ಮಾಡಿದರೆ, ಡಿ.ಕೆ ಶಿವಕುಮಾರ್ ಅವರನ್ನು ಮೇಲಕ್ಕೆ ಏರಿಸಬಹುದು, ಕೆಳಕ್ಕೆ ಇಳಿಸಲೂಬಹುದು. ಈ ವಿಚಾರದಲ್ಲಿ ನನಗೆ ನಿಮ್ಮ ಮೇಲೆ ವಿಶ್ವಾಸವಿದೆ. ನಿಮಗೂ ಉಪಕಾರ ಸ್ಮರಣೆ ಇರಬೇಕು. ಇಲ್ಲಿ ನೀವು ನನಗೆ ಜೈಕಾರ ಹಾಕಿದರೆ ಸಾಲದು, ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಕೂರಿಸಬೇಕು. ಆ ಜವಾಬ್ದಾರಿ ನಿಮ್ಮದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಇಸ್ರೇಲ್ ತಯಾರಿ

    ಗಡಿಯಲ್ಲಿ ಸೈನಿಕ, ಶಾಲೆಯಲ್ಲಿ ಶಿಕ್ಷಕ, ಕಾರ್ಖಾನೆಯಲ್ಲಿ ಕಾರ್ಮಿಕ, ಹೊಲದಲ್ಲಿ ಕೃಷಿಕ ಇರುತ್ತಾನೆ. ಇವರು ನಮ್ಮ ಕೈಯ ನಾಲ್ಕು ಬೆರಳುಗಳಾದರೆ, ನಮ್ಮ ಇಂಧನ ಇಲಾಖೆ ನೌಕರರು ಹೆಬ್ಬೆಟ್ಟಿನಂತೆ ಐದನೇ ಬೆರಳಾಗಿದ್ದಾರೆ. ನೀವು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಾನು ಕಾಂಗ್ರೆಸ್ ಅಧ್ಯಕ್ಷನಾಗಿ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ನಿಮಗೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೆವು. ಅದರಲ್ಲಿ ನಾವು ಮೊದಲು ಘೋಷಣೆ ಮಾಡಿದ್ದು, 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು. ಆ ಮೂಲಕ ಇಂತಹ ಯೋಜನೆ ಕೊಟ್ಟ ಮೊದಲ ರಾಜ್ಯ ಕರ್ನಾಟಕವಾಯಿತು. ಇಂದು ರಾಜ್ಯದಲ್ಲಿ 1.60 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ನೀಡಲಾಗಿದೆ. ಇದೆಲ್ಲವೂ ನಿಮ್ಮ ಸಹಕಾರದಿಂದ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

    ನಿಮ್ಮ ಬೇಡಿಕೆಗಳು ನಮ್ಮ ಗಮನದಲ್ಲಿವೆ. ಒಪಿಎಸ್ ಕೂಡ ನಮ್ಮ ಪ್ರಣಾಳಿಕೆಯಲ್ಲಿದೆ. ಆ ಬಗ್ಗೆ ಚಿಂತೆ ಮಾಡಬೇಡಿ. ಈ ಹಿಂದೆ ಬಡ್ತಿ ವಿಚಾರ ಬಂದಾಗ ನಾನು ಒಂದೇ ದಿನ ತೀರ್ಮಾನ ಮಾಡಿದ್ದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ನಿಮ್ಮ ಬದುಕಿಗಾಗಿ ಕೆಲಸ ಮಾಡುತ್ತದೆ. ಐಪಿಎಸ್ ಅಧಿಕಾರಿಗೆ ಎಷ್ಟು ವೇತನ ಬರುತ್ತದೋ, ಅಷ್ಟೇ ವೇತನ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಮುಖ್ಯ ಇಂಜಿನಿಯರ್‌ಗಳಿಗೂ ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಜತೆಗಿರಲಿ ಎಂದು ಹೇಳಿದ್ದಾರೆ.

  • ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ

    ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ

    – ಬಿಜೆಪಿಯವ್ರು ಹೆಣದ ಮೇಲೆ ರಾಜಕೀಯ ಮಾಡ್ತಾರೆ ಎಂದ ಡಿಸಿಎಂ

    ಬೆಂಗಳೂರು: ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

    ಚಿನ್ನಸ್ವಾಮಿ ಕಾಲ್ತುಳಿತದ (Chinnaswamy Stampede) ವಿಚಾರವಾಗಿ ಬಿಜೆಪಿ (BJP) ಹೋರಾಟ ಮಾಡಿರೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಕೂಡ ಹೆಗಲು ಮೇಲೆ ಹೊರೋಣ. ನೋಡೋಣ ಏನಾಗುತ್ತೆ. ಹೆಣದ ಮೇಲೆ ರಾಜಕೀಯ ಬಿಟ್ಟು, ಅವ್ರೇನು ಮಾಡಿದ್ದಾರೆ? ಯಾವ ಸಾಮಾಜಿಕ ಕಾರ್ಯಕರ್ತರು ಸಹಕಾರ ನೀಡೋದಿಲ್ಲ. ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಾವು ಅನೇಕ ಪ್ರಕರಣಗಳನ್ನು ಕೇಳುತ್ತೇವೆ. ಗಂಗಾಧರ ಪ್ರಕರಣದ ಬಗ್ಗೆ ನಾವು ಕೇಳುತ್ತೇವೆ. ನಾನು ಅಹಮದಾಬಾದ್‌ಗೆ ಹೋಗಿದ್ದೆ. ನಾನು ಕೇಂದ್ರ ಸರ್ಕಾರವನ್ನ ಯಾವತ್ತೂ ದೂಷಿಸಿಲ್ಲ. ದೇವಾಲಯದಲ್ಲಿ ಕಾಲ್ತುಳಿತ ಆಗಿದೆ. ಅನೇಕ ಕಡೆ ಕಾಲ್ತುಳಿತ ಆಗಿದೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಾಡೆಲ್ ಹತ್ಯೆ ಕೇಸ್ – ಗಂಡನ ಬಿಟ್ಟಿದ್ದ ರೂಪದರ್ಶಿಗೆ ನನ್ನ ಮದುವೆಯಾಗು ಅಂತ ಪೀಡಿಸ್ತಿದ್ದ 2 ಮಕ್ಕಳ ತಂದೆ

    ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ವಿಧಾನಸೌಧದಲ್ಲಿ ಪರಿಸರ ನಡಿಗೆ ಕಾರ್ಯಕ್ರಮವನ್ನ ಸರ್ಕಾರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಬಹಳ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನೀವೆಲ್ಲರೂ ನಮ್ಮ ದೇಶವನ್ನು ರಕ್ಷಣೆ ಮಾಡಲು ಬಂದಿದ್ದೀರಿ. ನಮ್ಮ ಮಕ್ಕಳು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ನಾವು ನಿಮ್ಮೆಲ್ಲರಿಗೂ ವಿಧಾನಸೌಧ ಪ್ರವೇಶಕ್ಕೆ ಅವಕಾಶ ಕೊಟ್ಟಿದ್ದೇವೆ. ವಿಧಾನಸೌಧಕ್ಕೆ ಭೇಟಿ ನೀಡಿ ಎಂದಿದ್ದಾರೆ. ಇದನ್ನೂ ಓದಿ: ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

    ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕ್ರಾಂತಿಕಾರಿ ಹೋರಾಟ ಮಾಡಿ
    ಒಳ್ಳೆಯ ಆಲೋಚನೆಗಳಿಂದ ಭವಿಷ್ಯ ನಿರ್ಮಾಣ ಮಾಡಿಕೊಂಡು, ದೇಶಕ್ಕೆ, ರಾಜ್ಯಕ್ಕೆ ಏನು ಆಗಬೇಕು ಅನ್ನೋದನ್ನ ಚಿಂತನೆ ಮಾಡಬೇಕು. ಇವತ್ತು ಪರಿಸರ ನಾಶ ಆಗದಂತೆ ನಾವು ಹೆಜ್ಜೆ ಹಾಕಲು ಬಂದಿದ್ದೇವೆ. ಇದು ಬರೀ ಸರ್ಕಾರದ ಕಾರ್ಯಕ್ರಮ ಅಲ್ಲ, ನಿಮ್ಮ ಕಾರ್ಯಕ್ರಮವಾಗಿದೆ. ಎಲ್ಲಾ ಶಾಲೆಗಳಲ್ಲಿ ಎನ್ವಿರಾನ್ಮೆಂಟ್ ಕ್ಲಬ್ ಮಾಡಲು ಆದೇಶ ನೀಡಿದ್ದೇವೆ. ವಿದ್ಯಾಥಿಗಳು ಪರಿಸರದ ಬಗ್ಗೆ ಕ್ರಾಂತಿಕಾರಿ ಹೋರಾಟ ಮಾಡಿ ಎಂದು ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

    ಈ ವರ್ಷದ ಪರಿಸರ ದಿನದ ಮೂಲ ಸಂದೇಶ ಪ್ಲಾಸ್ಟಿಕ್ ನಿಷೇಧ ಮಾಡುವುದು. ಅಲ್ಲದೇ ನೀರು, ಗಾಳಿ ಹಾಗೂ ಪರಿಸರವನ್ನು ಕಾಪಾಡಿಕೊಳ್ಳುವುದು. ಪ್ರತಿಯೊಂದು ವಿದ್ಯಾರ್ಥಿಗಳು ಮರಗಳನ್ನು ದತ್ತು ಪಡೆದುಕೊಳ್ಳಬೇಕು. ಈಗಾಗಲೇ 50 ಸಾವಿರ ಮಕ್ಕಳು ದತ್ತು ಪಡೆದುಕೊಂಡಿದ್ದಾರೆ. ಹಸಿರು ಕಾಪಾಡಬೇಕು. ಪರಿಸರ ಇಲ್ಲ ಅಂದ್ರೆ ಏನೂ ಇಲ್ಲ ಎಂದು ಹೇಳಿದ್ದಾರೆ..

  • ಅಹಮದಾಬಾದ್ ವಿಮಾನ ಪತನ ದುರಾದೃಷ್ಟಕರ ಘಟನೆ: ಡಿ.ಕೆ ಶಿವಕುಮಾರ್

    ಅಹಮದಾಬಾದ್ ವಿಮಾನ ಪತನ ದುರಾದೃಷ್ಟಕರ ಘಟನೆ: ಡಿ.ಕೆ ಶಿವಕುಮಾರ್

    ಬೆಂಗಳೂರು: ಅಹಮದಾಬಾದ್ ವಿಮಾನ ಪತನ (Air India Flight Crash) ದುರಾದೃಷ್ಟಕರ ಘಟನೆಯಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈ ಬಗ್ಗೆ ಮಾತನಾಡಿದ ಅವರು, ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ ವಿಮಾನ ಪತನ ಆಗಿದೆ. ಈ ಘಟನೆ ನಡೆದಿರುವುದು ನನಗೆ ಆಶ್ಚರ್ಯ ತರಿಸಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ವಿಮಾನಗಳು ಉತ್ತಮವಾಗಿ ಸಂಚಾರ ಆಗ್ತಿತ್ತು. ನಾನು ಕೆಲ ದೃಶ್ಯಗಳನ್ನ ನೋಡಿದ್ದೇನೆ. ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

    ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ದೇಶದಲ್ಲಿ ಹೆಚ್ಚು ಸಾವು ಆಗಬಾರದು. ದುರಂತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

    ವಿಮಾನ ಪತನ ಯಾಕೆ ಆಗಿದೆ ಅನ್ನೋದನ್ನ ಸಿವಿಲ್ ಏವಿಯೇಷನ್ ಅವರು ಕಂಡುಹಿಡಿಯುತ್ತಾರೆ. ಇದು ಬಹಳ ದುರಾದೃಷ್ಟಕರ ಘಟನೆ. ನಮ್ಮೆಲ್ಲಾ ಕರ್ನಾಟಕ ಸರ್ಕಾರದ ಹಾಗೂ ನಮ್ಮ ಪಕ್ಷದ ಪ್ರಾರ್ಥನೆ ಅವರ ಮೇಲೆ ಇದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

  • ಬೆಂಗಳೂರು ಕಾಲ್ತುಳಿತಕ್ಕೆ ರಾಹುಲ್ ಗಾಂಧಿ ಅತೃಪ್ತಿ – ಕ್ರೆಡಿಟ್ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನ?

    ಬೆಂಗಳೂರು ಕಾಲ್ತುಳಿತಕ್ಕೆ ರಾಹುಲ್ ಗಾಂಧಿ ಅತೃಪ್ತಿ – ಕ್ರೆಡಿಟ್ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನ?

    – ವಿಧಾನಸೌಧ ಕಾರ್ಯಕ್ರಮ ಆಯೋಜಿಸಿದ್ದೇ ಸರ್ಕಾರ; ರಾಜಭವನ
    – 2 ದಿನದಲ್ಲಿ ವರದಿ ಕೊಡಲು ಹೈಕೋರ್ಟ್ ಕಟ್ಟಾಜ್ಞೆ

    ನವದೆಹಲಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಭೀಕರ ಕಾಲ್ತುಳಿತ ಪ್ರಕರಣ (Stampede Case), ಸರ್ಕಾರ ನಿರ್ವಹಿಸಿದ ಬಗೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಭೇಟಿಯಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ವರದಿ ಕೊಟ್ಟಿದ್ದಾರೆ.

    ಕ್ರೆಡಿಟ್ ಕ್ಲೈಮ್‌ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನವೇ ಘಟನೆಗೆ ಕಾರಣ ಆಗಿದೆ. ನಮ್ಮ ಜವಾಬ್ದಾರಿಯೂ ಇದೆ ಎಂದು ಸಿಎಂ-ಡಿಸಿಎಂ ತಪ್ಪೊಪ್ಪಿಕೊಂಡಿದ್ದಾರೆ ಅನ್ನೋದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಹೈಕಮಾಂಡ್‌ಗೆ ಸಿದ್ದರಾಮಯ್ಯ ರಿಪೋರ್ಟ್‌ ಏನು?
    ಆರ್‌ಸಿಬಿಗೆ ಅತಿ ಹೆಚ್ಚು ಫ್ಯಾನ್ (RCB Fans) ಫಾಲೋವರ್ಸ್ ಇದ್ದಾರೆ. 18 ವರ್ಷದ ನಂತರ ಕಪ್ ಗೆದ್ದಿದ್ದರಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ್ದ ಸಂಭ್ರಮವಿತ್ತು. ಫ್ರಾಂಚೈಸಿಯೊಂದರ ಗೆಲುವಷ್ಟೇ ಅಂತ ಪರಿಗಣಿಸಿ ಸುಮ್ಮನಾಗುವ ಪರಿಸ್ಥಿತಿ ಇರಲಿಲ್ಲ. ಸರ್ಕಾರ ಸುಮ್ಮನಿದ್ದರೆ ಸರ್ಕಾರಕ್ಕೆ ಅದೇ ನೆಗೆಟಿವ್ ಆಗುವ ಸಾಧ್ಯತೆ ಇತ್ತು. ಯುವ ಸಮುದಾಯದ ಪಾಲಿಗೆ ಸರ್ಕಾರವೂ ನಮ್ಮ ಜೊತೆಗೆ ಕೈಜೋಡಿಸಿತು ಎಂಬ ಖುಷಿ ಇರುತ್ತಿತ್ತು. ಹಾಗಾಗಿ, ಆರ್‌ಸಿಬಿ ಆಟಗಾರರ ಸನ್ಮಾನಕ್ಕೆ ಸರ್ಕಾರ ಮುಂದಾಯಿತು. ಇದು ಸಹಜವಾಗಿಯೇ ಸರ್ಕಾರದ ಇಮೇಜ್ ಹೆಚ್ಚಳಕ್ಕೂ ಸಹಕಾರಿ ಆಗ್ತಿತ್ತು. ಕಾಲ್ತುಳಿತಕ್ಕೆ ಪೊಲೀಸರ ವೈಫಲ್ಯವೇ ಕಾರಣ, ಸರಿಯಾದ ಸಿದ್ಧತೆ ಮಾಡದ ಕಾರಣ ಅಧಿಕಾರಿಗಳ ಅಮಾನತು ಆಗಿದೆ. ಘಟನೆ ಗೊತ್ತಾಗುತ್ತಿದ್ದಂತೆ ನಾನೇ ಆಸ್ಪತ್ರೆಗೆ ಹೋಗಿ ಪರಿಸ್ಥಿತಿ ನಿಭಾಯಿಸಲು ಸೂಚಿಸಿದ್ದೇನೆ. ಮಾಹಿತಿ ಇಲ್ಲದ ಕಾರಣ ಡಿಸಿಎಂ ಕ್ರೀಡಾಂಗಣಕ್ಕೆ ಹೋಗಿದ್ದಾರೆ ಎಂದು ಸಿಎಂ ರಾಹುಲ್‌ ಗಾಂಧಿ ಅವರಿಗೆ ರಿಪೋರ್ಟ್‌ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

    ಡಿಕೆಶಿ ವರದಿ ಏನು…?
    ಕಾಲ್ತುಳಿತಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ವಿಧಾನಸೌಧ ಮುಂದೆ ಅಹಿತಕರ ಘಟನೆ ನಡೆದಿಲ್ಲ. ನಿರೀಕ್ಷೆಗೂ ಮೀರಿದ ಜನ ಸೇರಿದ್ದಕ್ಕೆ ಸಮಸ್ಯೆ ಆಯ್ತು. ಪೂರ್ವ ಸಿದ್ಧತೆ ಮಾಡದೇ ಇರೋದು ಘಟನೆಗೆ ಕಾರಣ.. ಗೌರವ ಉದ್ದೇಶದಿಂದ ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ್ದು, ಸ್ಟೇಡಿಯಂ ಸಂಭ್ರಮಾಚರಣೆ ವೇಳೆ ಸಾವಾಗಿರುವ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ನಾನು ಸಮಾರಂಭದಲ್ಲಿ ಭಾಗಿಯಾಗಿದ್ದೆ. ದುರಂತ ಗೊತ್ತಾದ ಕೂಡಲೇ ಬೇಗ ಮುಗಿಸಲು ತಿಳಿಸಿದೆ. ಸ್ಟೇಡಿಯಂ ಒಳಗೆ ಸಾವಿರಾರು ಅಭಿಮಾನಿಗಳಿದ್ದರು. ಕಾರ್ಯಕ್ರಮ ಮಾಡದಿದ್ರೆ ಆಕ್ರೋಶ ಜಾಸ್ತಿ ಆಗ್ತಿತ್ತು. ಕೂಡಲೇ ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿದ್ದೇವೆ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ.

    ಕೊನೆಗೂ ಮೌನ ಮುರಿದ ರಾಜಭವನ
    ವಿಧಾನಸೌಧ ಗ್ರ್ಯಾಂಡ್‌ ಸ್ಟೆಪ್ಸ್ ಮೇಲೆ ಆರ್‌ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಹ್ವಾನಿಸಿದ್ಯಾರು..? ನಮಗೆ ಗೊತ್ತಿಲ್ಲ ಅವರನ್ನೇ ಕೇಳಿ ಅಂತ ಸಿಎಂ, ಡಿಸಿಎಂ ಹೇಳಿದ್ದರು. ಇದೀಗ, ರಾಜಭವನ ಖುದ್ದು ವಿವಾದಕ್ಕೆ ತೆರೆ ಎಳೆದಿದೆ. ಸರ್ಕಾರದ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಿದ್ದರು. ಆರ್‌ಸಿಬಿ ಆಟಗಾರರಿಗೆ ರಾಜಭವನದಲ್ಲೇ ಸನ್ಮಾನಿಸಲು ರಾಜ್ಯಪಾಲರು ಬಯಸಿದ್ದರು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ರಾಜ್ಯಪಾಲರು ಮಾಹಿತಿ ಕೊಟ್ಟಿದ್ದರು. ಆದ್ರೆ, ಸಿಎಂ ಸಿದ್ದರಾಮಯ್ಯ ಖುದ್ದು ರಾಜ್ಯಪಾಲರಿಗೆ ಕರೆ ಮಾಡಿ.. ವಿಧಾನಸೌಧದ ಬಳಿಯೇ ನಾವು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದೇವೆ. ನೀವು ಕೂಡ ಇದರಲ್ಲಿ ಭಾಗವಹಿಸಿ ಎಂದು ಆಹ್ವಾನವಿತ್ತಿದ್ದರಂತೆ. ಸಿಎಂ ಕರೆಯೋಲೆ ಮೇಲೆಯೇ ಗವರ್ನರ್ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿ ಆಗಿದ್ರು ಅಂತ ರಾಜಭವನ ಸ್ಪಷ್ಟಪಡಿಸಿದೆ.

    ಈ ಮೂಲಕ, ವಿಧಾನಸೌಧ ಕಾರ್ಯಕ್ರಮವನ್ನು ಆಯೋಜಿಸಿದ್ದೇ ಸರ್ಕಾರ ಅಂತ ದೃಢಪಟ್ಟಿದೆ. ಈ ಮಧ್ಯೆ, ಕಾಂಗ್ರೆಸ್ ಶಾಸಕ ಗಣಿಗ ರವಿ ಮಾತಾಡಿ, ಕೆಎಸ್‌ಸಿಎ, ಆರ್‌ಸಿಬಿ ಅವರು ಸಿಎಂ ಬಳಿ ಬಂದು 18 ವರ್ಷ ಬಳಿಕ ಗೆದ್ದಿದ್ದೇವೆ. ವಿಧಾನಸೌಧ ಮುಂದೆ ಸನ್ಮಾನ ಮಾಡಿ ಎಂದು ಕೇಳಿಕೊಂಡರು. ಅದಕ್ಕೆ ಸಿಎಂ ಅವರು ಒಪ್ಪಿಕೊಂಡಿದ್ದಾರೆ. ಭದ್ರತೆಯನ್ನು ಕಾಪಾಡಿಕೊಳ್ಳಬೇಕಾಗಿದ್ದು ಪೊಲೀಸ್ ಇಲಾಖೆಯದ್ದು. ಬಲವಂತವಾಗಿ ಯಾರಿಗೂ ಸನ್ಮಾನ ಮಾಡಿಲ್ಲ ಅಂದಿದ್ದಾರೆ.

    2 ದಿನದಲ್ಲಿ ವರದಿ ಕೊಡಲು ಹೈಕೋರ್ಟ್ ಕಟ್ಟಾಜ್ಞೆ
    ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಇವತ್ತು ಕೂಡ ವಿಚಾರಣೆ ನಡೆದಿದೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ವರದಿ ಸಲ್ಲಿಕೆಗೆ ಎಜಿ ಶಶಿಕಿರಣ್ ಶೆಟ್ಟಿ 1 ತಿಂಗಳ ಕಾಲಾವಕಾಶ ಕೋರಿದ್ರು. ಇದಕ್ಕೆ ಅವಕಾಶ ಕೊಡದ ಹೈಕೋರ್ಟ್, ಜೂನ್ 12ಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಸೂಚನೆ ಕೊಟ್ಟಿದೆ. ಅಲ್ಲದೇ ವಿಕ್ಟರಿ ಪರೇಡ್ ಬಗ್ಗೆ ಯಾರು.. ಯಾವಾಗ.. ನಿರ್ಧಾರ ತೆಗೆದುಕೊಂಡಿದ್ದರು..? ಸಾರ್ವಜನಿಕರು/ಜನಸಂದಣಿ ನಿಯಂತ್ರಣಕ್ಕೆ ಏನು ಕ್ರಮ ಆಗಿತ್ತು..? ಗಾಯಾಗಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಎಷ್ಟು ಸಮಯ ಬೇಕಾಯಿತು..? 50 ಸಾವಿರಕ್ಕಿಂತ ಮೇಲ್ಪಟ್ಟು ಸೇರುವ ಜನಸಂದಣಿಗೆ ಎಸ್‌ಓಪಿ ಮಾಡಲಾಗಿತ್ತಾ..? ಅಂತಲೂ ಪ್ರಶ್ನೆ ಮಾಡಿದ್ದು, ನಾಡಿದ್ದು ವರದಿ ಸಲ್ಲಿಸುವಂತೆ ಸೂಚಿಸಿದೆ.

  • ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗುತ್ತಾ- ಸತೀಶ್ ಜಾರಕಿಹೊಳಿಗೆ ತುರ್ತು ಬುಲಾವ್ ನೀಡಿದ್ಯಾಕೆ?

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗುತ್ತಾ- ಸತೀಶ್ ಜಾರಕಿಹೊಳಿಗೆ ತುರ್ತು ಬುಲಾವ್ ನೀಡಿದ್ಯಾಕೆ?

    – ದೆಹಲಿಯಲ್ಲಿ ಸಿಎಂ, ಡಿಸಿಎಂ; ಡಿಕೆಶಿಗೆ ಕಾದಿದ್ಯಾ ಶಾಕ್?

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಿಂದಾಗಿ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ತೀವ್ರ ಟೀಕೆಗೆ ಒಳಗಾಗಿದೆ. ಈ ಹೊತ್ತಿನಲ್ಲೇ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ.

    ಹೈಕಮಾಂಡ್ ಬುಲಾವ್ ಹಿನ್ನೆಲೆ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ದೆಹಲಿಗೆ ಭೇಟಿ ನೀಡಿದ್ದಾರೆ. ತುರ್ತು ಬುಲಾವ್ ಕಾರಣಕ್ಕೆ ಸತೀಶ್ ಜಾರಕಿಹೊಳಿ (Satish Jarkiholi) ಕೂಡ ದೆಹಲಿಯಲ್ಲಿದ್ದಾರೆ. ಇದು ಹಲವಾರು ಕುತೂಹಲ ಮೂಡಿಸಿದೆ. ಹೈಕಮಾಂಡ್ ದೊಡ್ಡ ನಿರ್ಧಾರ ಕೈಗೊಳ್ಳಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ನಡೆಯುತ್ತಾ ಮೇಜರ್‌ ಸರ್ಜರಿ? – 10 ಸಚಿವರಿಗೆ ಕೊಕ್‌ ಸಾಧ್ಯತೆ

    DK Shivakumar

    ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟಕ್ಕೂ ಮೇಜರ್ ಸರ್ಜರಿ ಬೀಳಲಿದೆ ಎನ್ನಲಾಗುತ್ತಿದೆ. ಸಂಪುಟದ 6ರಿಂದ 10 ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆಯೂ ಮಾತು ಕೇಳಿಬಂದಿದೆ.

    ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೂ ಮುನ್ನ ಸಿಎಂ ಮತ್ತು ಡಿಸಿಎಂ ಕರ್ನಾಟಕ ಭವನದಲ್ಲಿ ಸಭೆ ನಡೆಸಿದ್ದರು. ನಂತರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಹೈಕಮಾಂಡ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ಲ್ಯಾನ್ ಮಾಡಿದೆಯೇ ಎಂಬ ಪ್ರಶ್ನೆ ಮೂಡಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಜೊತೆಗೆ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಇದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕಿಡಿ

  • Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

    Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

    – ಕಾರ್ಯಕ್ರಮಕ್ಕೆ ಸಮಯಾವಕಾಶ ಕೇಳಿ ಜೂ.4ರಂದೇ ಪತ್ರ ಬರೆದಿದ್ದ ಡಿಸಿಪಿ

    ಬೆಂಗಳೂರು: ಆರ್‌ಸಿಬಿ (RCB) ವಿಜಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ (Stampede Case) ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಿಎಂ, ಡಿಸಿಎಂ, ಪರಮೇಶ್ವರ್ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿವೆ. ಈ ನಡುವೆ ಜೂನ್‌ ನಾಲ್ಕರಂದೇ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌದ ಭದ್ರತಾ ವಿಭಾಗದ ಡಿಸಿಪಿ ಬರೆದ ಪತ್ರ ಸಂಚಲನ ಮೂಡಿಸಿದೆ.‌ ಇದರಿಂದ ಪೊಲೀಸರು ಬೇಡವೆಂದರೂ ಸರ್ಕಾರ ಹಠಕ್ಕೆ ಬಿದ್ದು ಕಾರ್ಯಕ್ರಮ ಮಾಡಿಸಿತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

    Stampede 2

    ಹೌದು.. ಡಿಸಿಪಿ (Vidhan Soudha DCP) ಕರಿಬಸವನಗೌಡ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಸರ್ಕಾರದ ಮತ್ತೊಂದು ಭಂಡಾಟ ಬಯಲಾಗಿದೆ. ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ದೇಶಾದ್ಯಂತ ಇದೆ. ಆದ್ರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇರೋದ್ರಿಂದ ಬಂದೋಬಸ್ತ್‌ಗೆ ತೊಂದರೆಯಾಗಲಿದೆ ಅನ್ನೋ ಅಂಶವನ್ನೂ ಪತ್ರದಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಇದರ ಇನ್ನಷ್ಟು ಎಕ್ಸ್‌ಕ್ಲೂಸಿವ್‌ ಮಾಹಿತಿ ತಿಳಿಯು ಕುತೂಹಲ ನಿಮಗಿದ್ದರೆ ಮುಂದೆ ಓದಿ..

    Stampede 1

    ಭದ್ರತಾ ವಿಭಾಗದ ಡಿಸಿಪಿ ಬರೆದ ಪತ್ರದಲ್ಲಿ ಏನಿತ್ತು?
    ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೇಶಾದ್ಯಂತ ಇದ್ದು.. ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ, ಕಾರ್ಯಕ್ರಮವನ್ನು ಆತರುದಲ್ಲಿ ಆಯೋಜಿಸುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಧಾನಸೌಧಕ್ಕೆ ಆಗಮಿಸುವ ಸಾಧ್ಯತೆಯಿದೆ. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ/ಸಿಬ್ಬಂದಿಗಳ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

    Stampede 3

    ಜೂನ್‌ 4ರಂದು ಕಾರ್ಯಕ್ರಮವನ್ನು ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜನೆ ಮಾಡುತ್ತಿರುವುದರಿಂದ, ಸದರಿ ದಿನದಂದು ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶಿಸಲು ವಿತರಣೆ ಮಾಡುವ ಆನ್ ಲೈನ್ ಮತ್ತು ಆಫ್ ಲೈನ್ ಪಾಸುಗಳನ್ನು ಸಂಪೂರ್ಣವಾಗಿ ನಿರ್ಭಂದಿಸಲು ಕೋರಿದೆ.

    stampede in bengaluru rcb fans

    ರಾಯಲ್ ಚಾಲೆಂಜರ್ಸ್ ಬೆಂಗಳೂರು ರವರ ಸಮಾರಂಭ ಭವ್ಯ ಮೆಟ್ಟಿಲುಗಳ ಮುಂಭಾಗ ಜೂನ್‌ 4ರಂದು ಸಂಜೆ 4 ಗಂಟೆಗೆ ಆಯೋಜನೆಗೊಳ್ಳುತ್ತಿದ್ದು, ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ತಮ್ಮ ತಮ್ಮ ಕುಟುಂಬ ವರ್ಗದವರನ್ನು ಕರೆತರುವ ಸಾಧ್ಯತೆಗಳು ಹೆಚ್ಚಾಗಿದೆ. ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಕುಟುಂಬ ವರ್ಗದವರನ್ನು ಕರೆತರದಂತೆ ಆದೇಶ ನೀಡಲು ಮತ್ತು ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಅಂದು ಮಧ್ಯಾಹ್ನ ರಜೆ ಘೋಷಿಸಬೇಕು. ಸಚಿವಾಲಯದ ಅಧಿಕಾರಿ/ಸಿಬ್ಬಂದಿಗಳು ಕಾರ್ಯಕ್ರಮದ ಸ್ಥಳಕ್ಕೆ ಬರದಂತೆ ಸೂಚನೆ ಕಳುಹಿಸಬೇಕೆಂದು ಕೋರುತ್ತೇವೆ.

    ವಿಧಾನಸೌದ ಕಟ್ಟಡವು Vital Installation ಕಟ್ಟಡವಾಗಿದ್ದು, ಕಟ್ಟಡದ ಸುರಕ್ಷತೆಯ ಸಂಬಂಧ ವಿಧಾನಸೌಧ ಅವರಣದ ಮತ್ತು ಮುಂಭಾಗಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈ ಸನ್ಮಾನ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಕ್ರಿಕೆಟ್ ಆಗಮಿಸುತ್ತಿರುವುದರಿಂದ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿಯ ಅವಶ್ಯಕತೆ ಇರುತ್ತದೆ. ಈಗ ಇರುವ ಇರುವ ಭದ್ರತಾ ವ್ಯವಸ್ಥೆಯಲ್ಲಿ ವ್ಯತಯ ಉಂಟಾಗುವ ಸಾಧ್ಯತೆ ಇರುತ್ತದೆ.

    ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೊಡ್ಡದಾಗಿರುವುದರಿಂದ ಹೊರಗಡೆಯಿಂದ ಅಧಿಕಾರಿ/ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ತೆಗೆದುಕೊಳ್ಳಬೇಕಾಗಿದ್ದು, ಇದಕ್ಕೆ ಸಮಯದ ಅವಶ್ಯಕತೆ ಇದೆ. ಈ ರೀತಿಯ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರಿ ಪೊಲೀಸ್ ರೊಂದಿಗೆ co-ordination ಮಾಡಿಕೊಳ್ಳುವ ಅವಶ್ಯಕತೆ ಇದ್ದು, ಸಮಯವಕಾಶದ ಕೊರತೆ ಎನ್ನಿಸುತ್ತಿದೆ. ಅಲ್ಲದೇ ಇಂತಹ ಕಾರ್ಯಕ್ರಮಹಳಲ್ಲಿ ಡ್ರೋನ್‌ ಕ್ಯಾಮೆರಾ ಬಳಸುವ ಅವಶ್ಯಕತೆ ಇರುವುದರಿಂದ ಆಂಟಿ ಡ್ರೋನ್‌ ವ್ಯವಸ್ಥೆ ಅಳವಡಿಸುವ ಅವಶ್ಯಕತೆ ಇದೆ.

    ಮುಂದುವರಿದು… ವಿಧಾನಸೌಧ ಕಟ್ಟಡವು ಪಾರಂಪರಿಕ ಕಟ್ಟಡವಾಗುವುದರಿಂದ ಮತ್ತು Vital Installation ಕಟ್ಟಡದ ವ್ಯಾಪ್ತಿಗೆ ಒಳಪಡುವುದರಿಂದ, ಭದ್ರತೆಯ ದೃಷ್ಟಿಯಿಂದ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ, ನಿಯಮಗಳನುಸಾರ ಕಾರ್ಯಕ್ರಮ ನಡೆಸಲು ಸಮಯದ ಅವಶ್ಯಕತೆ ಇರುತ್ತದೆ. ಅದಾಗ್ಯೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳಲಾಗುವುದು ಎಂಬ ಅಭಿಪ್ರಾಯವನ್ನು ವರದಿಯನ್ನು ಸಲ್ಲಿಸಲಾಗಿದೆ ಎಂದು ಡಿಸಿಪಿ ಕರಿಬಸವನಗೌಡ ಅವರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ಬರೆದಿದ್ದಾರೆ.