ಕೇಂದ್ರದ ಬಳಿಕ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ರೂಪಾಯಿ ಇಳಿಕೆ..?

Public TV
Public TV - Digital Head
5 Min Read

ನವದೆಹಲಿ: ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಹಾದಿಯನ್ನೇ ಹಿಡಿದಿದ್ದು, ಇಂಧನಗಳ ಮೇಲಿನ ವ್ಯಾಟ್ ಇಳಿಕೆ ಮಾಡುತ್ತಿವೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರ ದೀಪಾವಳಿ ಹಬ್ಬದ ಖುಷಿಯನ್ನು ದುಪ್ಪಟ್ಟುಗೊಳಿಸಿವೆ.

PM MODI

ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮೇಲೆ ಐದು ರೂಪಾಯಿ ಮತ್ತು ಡೀಸೆಲ್ ಮೇಲೆ ಹತ್ತು ರೂಪಾಯಿ ಅಬಕಾರಿ ಸುಂಕವನ್ನು ಇಳಿಸುತ್ತಿರುವುದಾಗಿ ಘೋಷಿಸಿತು. ಈ ನಿರ್ಧಾರದ ಬೆನ್ನಲ್ಲೇ ಹಲವು ರಾಜ್ಯಗಳು ವ್ಯಾಟ್ ಕಡಿತದ ನಿರ್ಧಾರ ಪ್ರಕಟಿಸುತ್ತಿವೆ. ಈವರೆಗೂ ಯಾವ್ಯಾವ ರಾಜ್ಯಗಳು ಎಷ್ಟೆಷ್ಟು ವ್ಯಾಟ್ ಕಡಿತಗೊಳಿಸಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಗೋವಾ: ನರೇಂದ್ರ ಮೋದಿ ಅವರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸುವ ಮೂಲಕ ಎಲ್ಲಾ ಭಾರತೀಯರಿಗೆ ದೀಪಾವಳಿಯ ಉಡುಗೊರೆಯನ್ನು ನೀಡಿದ್ದಾರೆ. ಈ ಖುಷಿಯನ್ನು ಗೋವಾ ಸರ್ಕಾರ ಹೆಚ್ಚು ಮಾಡುತ್ತಿದ್ದು, ಪೆಟ್ರೋಲ್ ಮೇಲೆ 7 ರೂಪಾಯಿ ಮತ್ತು ಡೀಸೆಲ್ ಮೇಲೆ 7 ರೂಪಾಯಿ ವ್ಯಾಟ್ ಕಡಿಮೆ ಮಾಡಲಾಗುವುದು. ಇದರಿಂದಾಗಿ ಡೀಸೆಲ್ ಬೆಲೆಯನ್ನು ರೂ. 17 ರಷ್ಟು ಕಡಿಮೆ ಮಾಡುತ್ತಿದೆ. ಲೀಟರ್ ಮತ್ತು ಪೆಟ್ರೋಲ್ ಪ್ರತಿ ಲೀಟರ್‌ಗೆ 12 ರೂ. ಕಡಿಮೆಯಾಗಲಿದೆ ಎಂದು ಸಿಎಂ ಪ್ರಮೋದ್‌ ಸಾವಂತ್ ಟ್ವೀಟ್ ಮಾಡಿದ್ದಾರೆ. ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅಸ್ಸಾಂ: ಮೋದಿ ಟ್ವೀಟ್ ಮಾಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ತಮ್ಮ ರಾಜ್ಯ ಸರ್ಕಾರದ ನಿರ್ಧಾರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಏಳು ರೂಪಾಯಿ ಕಡಿಮೆ ಮಾಡುತ್ತಿರುವುದಾಗಿ ಹೇಳಿದರು. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

ಗುಜರಾತ್: ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡುವ ಸಂಬಂಧ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕಚೇರಿಯ ಹೇಳಿಕೆ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ರಾಜ್ಯದಲ್ಲಿ ಪೆಟ್ರೋಲ್/ಡೀಸೆಲ್ ಮೇಲಿನ ವ್ಯಾಟ್  ಲೀಟರ್ ಗೆ 7 ರೂಪಾಯಿಗಳಷ್ಟು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

ತ್ರಿಪುರ: ನರೇಂದ್ರ ಮೋದಿ ಸರ್ಕಾರ ನಿರ್ಧಾರ ಸ್ವಾಗತಿಸಿದ ಸಿಎಂ ಬಿಪ್ಲಬ್ ಕುಮಾರ್ ದೇಬ್, ಕೇಂದ್ರದ ಹಾದಿಯಲ್ಲೆ ರಾಜ್ಯ ಸರ್ಕಾರವು ಇಂಧನಗಳ ಬೆಲೆ ಕಡಿಮೆ ಮಾಡಲಿದ್ದು ಏಳು ರೂಪಾಯಿ ವ್ಯಾಟ್ ಇಳಿಕೆ ಮಾಡುತ್ತಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಸರ್ಕಾರದ ನಿರ್ಧಾರದ ಬಳಿಕ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ  ಲೀಟರ್ ಗೆ ಕ್ರಮವಾಗಿ 98.33 ಮತ್ತು 85.63 ರೂಪಾಯಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.

ಮಣಿಪುರ: ಕೇಂದ್ರದ ಬಳಿಕ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು, “ಈ ದೀಪಾವಳಿಯಂದು ಈ ರಾಷ್ಟ್ರದ ಜನರಿಗೆ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದು, ರಾಜ್ಯ ಸರ್ಕಾರವೂ ಮಣಿಪುರದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ತಕ್ಷಣವೇ ಜಾರಿಗೆ ಬರುವಂತೆ ತಲಾ 7 ರೂಪಾಯಿಯಷ್ಟು ಕಡಿಮೆ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮಾದಪ್ಪನ ಬೆಟ್ಟದಲ್ಲಿ ಸರಳವಾಗಿ ನಡೆದ ಹಾಲರುವೆ ಉತ್ಸವ

ಕರ್ನಾಟಕ: ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡಾ ಪೆಟ್ರೋಲ್ ಡಿಸೇಲ್ ಮೇಲೆ ಏಳು ರೂಪಾಯಿ ವ್ಯಾಟ್ ಕಡಿತಗೊಳಿಸುವುದಾಗಿ ಘೋಷಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 2,100 ಕೋಟಿ ರೂಪಾಯಿಗಳ ನಷ್ಟವಾಗಲಿದೆ ಎಂದು ಹೇಳಿದ್ದಾರೆ.

ಹರ್ಯಾಣ: ಹರ್ಯಾಣ ಸರ್ಕಾರ ವಿಶೇಷ ಎನ್ನುವಂತ ನಿರ್ಧಾರ ಪ್ರಕಟಿಸಿದೆ. ಎಲ್ಲ ರಾಜ್ಯಗಳು ಏಳು ರೂಪಾಯಿಯಷ್ಟು ವ್ಯಾಟ್ ಕಡಿಮೆ ಮಾಡಿದರೆ ಸಿಎಂ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲೆ 12 ರೂಪಾಯಿ ಕಡಿಮೆ ಮಾಡಿದೆ.

Share This Article