ಸ್ಟಂಟ್ ಮಾಡಲು ಹೋಗಿ ಗಡ್ಡ, ಬಾಯಿಗೆ ಬೆಂಕಿ – ವ್ಯಕ್ತಿ ವೀಡಿಯೋ ವೈರಲ್

By
1 Min Read

ಬೆಂಕಿ ಜೊತೆಗೆ ಆಟವಾಡುವುದನ್ನು ನೋಡುವುದು ಬಹಳ ಸುಲಭ. ಆದರೆ ಬೆಂಕಿ ಜೊತೆ ಸರಸವಾಡುವುದಕ್ಕಿಂತ ಅತ್ಯಂತ ಅಪಾಯಕಾರಿ ಮತ್ತೊಂದಿಲ್ಲ. ಬೆಂಕಿ ಜೊತೆ ಆಟವಾಡುವಾಗ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ, ಅಪಾಯ ಖಂಡಿತ. ಇದಕ್ಕೆ ಸಾಕ್ಷಿ ಎಂಬಂತೆ ವ್ಯಕ್ತಿಯೊಬ್ಬ ಬೆಂಕಿಯಲ್ಲಿ ಪೆಟ್ರೋಲ್‌ ತುಂಬಿಕೊಂಡು ಸ್ಟಂಟ್ (Petrol) ಮಾಡುತ್ತಿದ್ದ ವೇಳೆ ಆತನ ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು, ರವಿ ಪಾಟಿದಾರ್ ಎಂಬವರು ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಹಂಚಿಕೊಂಡಿದ್ದು, ಸುಮಾರು 12 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯೋರ್ವ ಪೆಟ್ರೋಲ್ ಮತ್ತು ಬೆಂಕಿಯನ್ನು ಕಡ್ಡಿಗೆ ಹಚ್ಚಿಕೊಂಡು ಸ್ಟಂಟ್ ಮಾಡುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮೊದಲ ಗಂಡ ಸಾಯ್ತಾನೆ – ಜ್ಯೋತಿಷಿ ಮಾತು ನಂಬಿ ಪ್ರಿಯಕರನಿಗೆ ವಿಷ ಕೊಟ್ಟು ಸಾಯಿಸಿದ್ಲು

ಹಲವಾರು ಪ್ರೇಕ್ಷಕರು ನಿಂತಿದ್ದ ವೇಳೆ, ವೇದಿಕೆ ಮೇಲೆ ವ್ಯಕ್ತಿಯೋರ್ವ ಪೆಟ್ರೋಲ್ ಅನ್ನು ಬಾಯಿಯಲ್ಲಿ ತುಂಬಿಕೊಂಡು, ಕಡ್ಡಿಯಲ್ಲಿದ್ದ ಬೆಂಕಿಯನ್ನು ಒದುತ್ತಾನೆ. ಈ ವೇಳೆ ಪೆಟ್ರೋಲ್‍ಗೆ ಬೆಂಕಿ ತಗುಲಿ ಆತನ ಬಾಯಿ ಮತ್ತು ಗಡ್ಡಕ್ಕೆ ಬೆಂಕಿ ಹೊತ್ತೊಕೊಳ್ಳುತ್ತದೆ. ಶೀಘ್ರದಲ್ಲೇ ಆತನ ಮುಖಕ್ಕೂ ಕೂಡ ಬೆಂಕಿ ಹರಡಿಕೊಳ್ಳುತ್ತದೆ. ಈ ವೇಳೆ ವ್ಯಕ್ತಿಗಳಿಬ್ಬರು ಕೂಡಲೇ ಆತನ ಮುಖಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಕೈಗಳಿಂದ ಹಾರಿಸುತ್ತಾರೆ. ಈ ಭಯಾಂಕರ ವೀಡಿಯೋ ನೋಡಿ ಭಯಗೊಂಡ ನೆಟ್ಟಿಗರು, ಇಂತಹ ಸಾಹಸಗಳಿಗೆ ಯಾರು ಕೈ ಹಾಕಬಾರದು ಎಂದು ತಿಳಿ ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

Live Tv
[brid partner=56869869 player=32851 video=960834 autoplay=true]

Share This Article
Exit mobile version