ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಜೋರು ಮಳೆ ಮೂನ್ಸೂಚನೆ

2 Min Read

-ವಾಯುಭಾರ ಕುಸಿತವೇ ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆ

ಬೆಂಗಳೂರು: ಮುಂಗಾರು ಕೊರತೆ ಎದುರಿಸಿದ್ದ ರಾಜ್ಯಕ್ಕೆ ಸದ್ಯ ಹಿಂಗಾರು ಕೊಂಚ ನೆಮ್ಮದಿ ತಂದಿದೆ. ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರದ ಕುಸಿತದ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಜೋರು ಮಳೆಯಾಗುವ ಸಾಧ್ಯತೆ ಇದೆ.

ವಾಯುಭಾರ ಕುಸಿತವೇ ಚಂಡಮಾರುತವಾಗಿ (Cyclone) ಮಾರ್ಪಾಡಾಗುವ ಸಾಧ್ಯತೆ ಇದ್ದು, ನಾಳೆ ನಾಡಿದ್ದು, ಆಂಧ್ರ ಗಡಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈ ಬಾರಿಯ ಮುಂಗಾರು ಅಂದುಕೊಂಡಂತೆ ಆಗಿಲ್ಲ. ಬಹುತೇಕ ಕಡೆ ಮಳೆ ಕೊರತೆ ಜನರನ್ನ ಸಂಕಷ್ಟಕ್ಕೆ ದೂಡಿದೆ. ಈ ಮಧ್ಯೆ ಹಿಂಗಾರು ರಾಜ್ಯದ ಸಂಕಷ್ಟಕ್ಕೆ ಕೊಂಚ ನೆಮ್ಮದಿ ನೀಡುತ್ತಿದೆ. ಕಳೆದ ಒಂದು ವಾರದಿಂದ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ಮಧ್ಯೆ ರಾಜ್ಯದ ದಕ್ಷಿಣ ಭಾಗಕ್ಕೆ ಮುಂದಿನ ಎರಡ್ಮೂರು ದಿನ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಜೈಲಿನಲ್ಲೇ ಪತ್ನಿ, ಸ್ನೇಹಿತನ ಮನವೊಲಿಸಿದ್ದ ದರ್ಶನ್; ಫಲಕೊಡದ ಸಂಧಾನ ಮತ್ತೆ ಸಂಘರ್ಷ ಆರಂಭ

ಹೌದು, ಅಂಡಮಾನ್ ಬಳಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಗಂಭೀರ ಪರಿಣಾಮ ಉಂಟುಮಾಡುತ್ತಿದ್ದು, ದಕ್ಷಿಣ ಜಿಲ್ಲೆಗಳತ್ತ ಮಳೆ ಮಾರುತಗಳನ್ನ ಹೊತ್ತು ಬರುವ ಸಾಧ್ಯತೆ ಇದೆ. ಮುಂದಿನ ಮೂರು ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಈ ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ನೀಡಿದ್ದು, ಜೋರು ಮಳೆಯಾಗುವ ಸಾಧ್ಯತೆ ಇದೆ.

ಇನ್ನೂ ಸದ್ಯ ಇದೇ ವಾಯುಭಾರ ಕುಸಿತ ಚಂಡಮಾರುತವಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅ.24 ಅಥವಾ 25ಕ್ಕೆ ಅರ್ನಾಬ್ ಚಂಡಮಾರುತ ಆಂಧ್ರದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಪರಿಣಾಮ ರಾಜ್ಯದ ಕರಾವಳಿ ಭಾಗಕ್ಕೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.. ಮೀನುಗಾರರಿಗೂ ಹವಾಮಾನ ಇಲಾಖೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಒಟ್ಟಾರೆ ಮುಂದಿನ ಎರಡು ಮೂರು ದಿನ ರಾಜ್ಯಕ್ಕೆ ಮಳೆಯಾಗುವ ಸಾಧ್ಯತೆ ಇದ್ದು, ಜನ ಕೂಡ ಕೊಂಚ ಎಚ್ಚರಿಕೆ ವಹಿಸೋದು ಸೂಕ್ತ.ಇದನ್ನೂ ಓದಿ: ಆಸ್ತಿ ವಿವಾದ – ಮಗಳ ಕಣ್ಣೆದುರೇ ಅತ್ತಿಗೆಯ ಮೇಲೆ ಬೊಲೆರೋ ಹರಿಸಿದ ಮೈದುನ

Share This Article
Exit mobile version