ಬೇಸಿಗೆಯಲ್ಲೂ ಹಾಟ್ ಲುಕ್‌ನಲ್ಲಿ ಕಾಣಬೇಕೆ? ಇಲ್ಲಿದೆ ಟಿಪ್ಸ್

Public TV
Public TV - Digital Head
2 Min Read

ಸುಡುವ ಬಿಸಿಲಿನ ನಡುವೆಯೂ ಫ್ಯಾಷನ್ (Summer Fashion) ಮಾಡಬಹುದು. ಫ್ಯಾಷನ್ ಪ್ರಿಯರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್. ಸೀರೆಗೆ ಸ್ಲೀವ್‌ಲೆಸ್ ಬ್ಲೌಸ್ (Sleeveless Saree) ಧರಿಸುವ ಟ್ರೆಂಡ್ ಈ ಬೇಸಿಗೆಯಲ್ಲಿ ಮರಳಿದೆ. ಬೇಸಿಗೆಯಲ್ಲಿ ಉಡುವ ನಾನಾ ಬಗೆಯ ವೆರೈಟಿ ಸೀರೆಗಳಿಗೆ ಈಗಾಗಲೇ ಲೆಕ್ಕವಿಲ್ಲದಷ್ಟು ಶೈಲಿಯವು ಮಾರುಕಟ್ಟೆಗೆ ಬಂದಿದ್ದು, ಅವುಗಳಲ್ಲಿ ಬ್ರಾಡ್‌ ನೆಕ್‌ಲೈನ್, ಸ್ಟ್ರಾಪ್‌ ಕ್ರಾಪ್‌ಟಾಪ್ ಶೈಲಿಯವು ಮತ್ತು ಬಿಕಿನಿ ಸ್ಟೈಲ್‌ ಸ್ಲಿವ್‌ಲೆಸ್ ಬ್ಲೌಸ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಸ್ಲಿವ್‌ಲೆಸ್ ಸೀರೆ ಬ್ಲೌಸ್‌ಗಳು ಈ ಸೀಸನ್‌ನ ಹಾಟ್‌ ಟ್ರೆಂಡ್. ಪ್ರತಿ ಬಾರಿಯಂತೆ ಈ ಬಾರಿಯು ಈ ಕಾನ್ಸೆಪ್ಟ್ ಸಮ್ಮರ್ ಸೀರೆ ಫ್ಯಾಷನ್‌ಗೆ ಕಾಲಿಟ್ಟಿದ್ದು, ಹುಡುಗಿಯರ ಲುಕ್‌ಗೆ ಗ್ಲಾಮರಸ್ ಟಚ್ ನೀಡುತ್ತಿವೆ.

ನೋಡಲು ಗ್ಲಾಮರಸ್ ಲುಕ್ ನೀಡುವ ಈ ಸ್ಲಿವ್‌ಲೆಸ್ ಬ್ಲೌಸ್‌ಗಳು ಇದೀಗ ಕೇವಲ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರನ್ನು ಮಾತ್ರವಲ್ಲ, ಅಲ್ಟ್ರಾ ಮಾಡರ್ನ್ ಯುವತಿಯರನ್ನು ಹಾಗೂ ಟೀನೇಜ್ ಹುಡುಗಿಯರನ್ನು ಸೆಳೆಯುತ್ತಿವೆ. ಸೀರೆಯೊಂದಿಗೆ ಧರಿಸುವ ಸ್ಟೈಲ್‌ ಕೂಡ ಡಿಫರೆಂಟಾಗಿ ಬದಲಾಗುತ್ತಿದೆ. ನೋಡಲು ಒಂದೇ ಬಗೆಯ ಕಾನ್ಸೆಪ್ಟ್‌ನಂತೆ ಕಂಡರೂ, ಸ್ಲಿವ್‌ಲೆಸ್ ಬ್ಲೌಸ್‌ಗಳಲ್ಲೇ ನಾನಾ ಬಗೆಯವು ದೊರೆಯುತ್ತಿವೆ. ಇದನ್ನೂ ಓದಿ:‘ಹನುಮಾನ್’ ಹೀರೋ ತೇಜ್ ಸಜ್ಜಾ ನಟನೆಯ ಹೊಸ ಸಿನಿಮಾ ಅನೌನ್ಸ್

ತೀರಾ ಅಗಲವಾದ ನೆಕ್‌ಲೈನ್ ಇರುವಂತಹ ಸ್ಲಿವ್‌ಲೆಸ್ ಬ್ಲೌಸ್‌ಗಳು ಈ ಬೇಸಿಗೆಯಲ್ಲಿ ಟ್ರೆಂಡಿಯಾಗಿವೆ. ಇವು ಸೀರೆ ಉಟ್ಟಾಗ ಸೆಕೆಯಾಗದಂತೆ ತಡೆಯುತ್ತವೆ. ಅಲ್ಲದೆ, ನೋಡಲು ಕೂಡ ಗ್ಲಾಮರಸ್ ಲುಕ್ ನೀಡುತ್ತವೆ. ಬ್ರಾಡ್ ನೆಕ್ ಇರುವಂತಹ ಸ್ಲಿವ್‌ಲೆಸ್ ಬ್ಲೌಸ್‌ಗಳು ಆದಷ್ಟೂ ಫಿಟ್ ಆಗಿರಬೇಕು. ಇಲ್ಲವಾದಲ್ಲಿ ಪರ್ಫೆಕ್ ಆಗಿ ಕಾಣಿಸದು. ಇನ್ನು ಪ್ರಿಂಟೆಡ್ ಸೀರೆಗೆ ಸಾದಾ ಬ್ಲೌಸ್, ಸಾದಾ ಸೀರೆಗೆ ಪ್ರಿಂಟೆಡ್‌ನವನ್ನು ಮಿಕ್ಸ್-ಮ್ಯಾಚ್ ಮಾಡಬಹುದು ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

ನೋಡಲು ಕ್ರಾಪ್‌ಟಾಪ್‌ನಂತೆ ಕಾಣುವ ಈ ಸ್ಲೀವ್‌ಲೆಸ್ ಬ್ಲೌಸ್‌ಗಳು ಸ್ಟ್ರಾಪ್‌ಟಾಪ್‌ನಂತೆ ಕಾಣುತ್ತವೆ. ಇವು ಇದೀಗ ಅತಿ ಹೆಚ್ಚು ಫ್ಯಾಷನ್‌ನಲ್ಲಿವೆ. ಯಂಗ್‌ಲುಕ್‌ಗಾಗಿ ಇವನ್ನು ಧರಿಸುವುದು ಹೆಚ್ಚಾಗಿದೆ. ಶೋಲ್ಡರ್ ಎಕ್ಸ್ಪೋಸ್ ಮಾಡುವ ಇವನ್ನು ಧರಿಸುವಾಗ ಸ್ಟ್ರಾಪ್‌ಲೆಸ್ ಇನ್ನರ್‌ವೇರ್ ಧರಿಸುವುದು ಸೂಕ್ತ. ಸನ್‌ಟ್ಯಾನ್ ಆಗುವ ಚಾನ್ಸ್ ಹೆಚ್ಚಾಗಿರುವುದರಿಂದ ಒಳಾಂಗಣದಲ್ಲಿರುವ ಸಮಯದಲ್ಲಿ ಧರಿಸಬಹುದು. ಇಂಡೋ-ವೆಸ್ಟರ್ನ್ ಲುಕ್‌ಗೆ ಬೆಸ್ಟ್ ಎಂಬುದು ಅನೇಕರ ಅಭಿಪ್ರಾಯ. ಇನ್ನು ಹಾಟ್‌ಲುಕ್ ಬಯಸುವವರಿಗೆಂದು ಬಿಕಿನಿ ಸ್ಟೈಲ್‌ನ ಸ್ಲಿವ್‌ಲೆಸ್ ಬ್ಲೌಸ್ ಬಂದಿವೆ. ಇವು ರೆಡಿಮೇಡ್ ಮಾತ್ರವಲ್ಲ, ಸ್ಟಿಚ್ಚಿಂಗ್ ಮಾಡಿಸಿ, ಧರಿಸುವವರು ಕೂಡ ಹೆಚ್ಚಾಗಿದ್ದಾರೆ. ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದಾದ ಇವನ್ನು ಇಂಡೋ-ವೆಸ್ಟರ್ನ್ ಶೈಲಿಯ ಸೀರೆಗೆ ಧರಿಸುವವರು ಹೆಚ್ಚಾಗಿದ್ದಾರೆ. ಕಾಟನ್, ಲೆನಿನ್, ರಯಾನ್ ಹೀಗೆ ನಾನಾ ಬಗೆಯ ಸೀರೆಗಳಿಗೆ ಇವನ್ನು ಪ್ರಯೋಗ ಮಾಡುವುದು ಕಂಡು ಬರುತ್ತಿದೆ.

Share This Article