ಮಂಡ್ಯ: ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ.
ನಂಜುಂಡ ಮತ್ತು ಸಿತಾರ ದಂಪತಿಯ ಪುತ್ರ ಸೂರ್ಯ ಎಂಬ ಬಾಲಕನೇ ಮೃತ ದುರ್ದೈವಿ. ಮಂಗಳವಾರ ರಾತ್ರಿ ಮನೆಯ ಬಳಿ ಆಟವಾಡುತ್ತಿದ್ದಾಗ ಬಾಲಕನಿಗೆ ಹಾವು ಕಚ್ಚಿದೆ. ಪರಿಣಾಮ ಅಸ್ವಸ್ಥಗೊಂಡ ಬಾಲಕನನ್ನು ಪೋಷಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾದೇ ಬಾಲಕ ಸೂರ್ಯ ಮೃತಪಟ್ಟಿದ್ದಾನೆ.
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾವಿನ ಬಾಯಿಗೆ ಸಿಕ್ಕ ಕುರಿ- ರಕ್ಷಿಸಲು ಮುಂದಾದ ಸ್ಥಳೀಯರನ್ನೇ ಬೆನ್ನತ್ತಿದ ಹಾವು