– ಕೆಲವರು ಮುಖವಾಡ ಹಾಕ್ಕೊಂಡೇ ಬದುಕಬೇಕಿತ್ತು, ಅದಕ್ಕೆ ಅಂತರ ಕಾಯ್ದಿರಿಸಿದ್ರು
– ವಿಜಯಲಕ್ಷ್ಮಿ – ಧನ್ವೀರ್ ಅವ್ರನ್ನ ದರ್ಶನ್ ಜೈಲಲ್ಲೇ ಸಮಾಧಾನಪಡಿಸಿದ್ರಾ?
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) Vs ನಟ ಧನ್ವೀರ್ ಗೌಡ ನಡುವೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಪೋಸ್ಟರ್ ವಾರ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ನಟ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ (NCR) ದಾಖಲಾಗಿದೆ.
ಈ ಬಗ್ಗೆ ʻಪಬ್ಲಿಕ್ ಟಿವಿʼ ಜೊತೆಗೆ ನಟ ಧನ್ವೀರ್ (Dhanveer Gowda) ಸುದೀರ್ಘವಾಗಿ ಮಾತನಾಡಿದ್ದಾರೆ. ದೂರು ಕೊಡಲಿ, ಇದಾದ್ಮೇಲೂ ನಾನು ಅವನಿಗೆ ನಿಂದನೆ ಮಾಡೇ ಮಾಡ್ತೀನಿ. ಆದ್ರೆ ಒಬ್ಬ ವುಕ್ತಿ ಸುಮ್ಮನೆ ಬೈಯ್ಯಲ್ಲ. ಏನಿಕೆ ಬೈಯ್ದೆ ಅನ್ನೋದು ಬೇಕಲ್ವಾ? ಆ ಕಾರಣ ಏನು ಅನ್ನೋದನ್ನ ಕೇಳಿ. ಯಾರ ಮ್ಯಾನೇಜರ್ ಅಂತಿದ್ದಾರಲ್ಲಾ ಈಗ, ಅವರ ಬಂಡವಾಳ ಆಚೆ ಬರುತ್ತೆ ಅಂತ ಖಡಕ್ಕಾಗಿ ಹೇಳಿದರು.
ಮ್ಯಾನೇಜರ್ಗೆ ಏನಿಕೆ ಬೈಯ್ದೆ, ಅದಕ್ಕೆ ಬಲವಾದ ಕಾರಣ ಇರುತ್ತೆ ಅಲ್ವಾ? ಅದೇನು ಅಂತ ಗೊತ್ತಾದ್ರೆ, ಯಾರ್ಯಾರ ಮುಖವಾಡ ಹೇಗೆ ಅನ್ನೋ ಬಂಡವಾಳ ಬಯಲಾಗುತ್ತೆ ಎಂದರು.
ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಮತ್ತು ನಿಮ್ಮ ನಡುವೆ ಪೋಸ್ಟರ್ ವಾರ್ ಆಗ್ತಿದ್ದು ನಿಜಾನಾ? ಅನ್ನೋ ʻಪಬ್ಲಿಕ್ʼ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಅದು ಗೊತ್ತಾಗುತ್ತೆ,. ಯಾವುದು ಏನು ಅನ್ನೋ ಸತ್ಯಾಂಶ ಹೊರಬರುವ, ಮುಖವಾಡ ಕಳಚಿ ಬೀಳುವ ಸಮಯ ಬಂದಿದೆ. ಕಳಚಿ ಬೀಳುತ್ತೆ, ಮುಖವಾಡ ಕಳಚಲು ನಾವು ಶತಸಿದ್ಧ ಅಂತ ತಿಳಿಸಿದ್ರು.
ದರ್ಶನ್ ಜೊತೆಗೆ ಇದ್ದರವ ಇದ್ದವರು ಯಾಕೆ ಅಂತರ ಕಾಯ್ದುಕೊಂಡ್ರಿ? ಅನ್ನೋ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಧನ್ವೀರ್, ಅಂತರ ಕಾಯ್ದುಕೊಂಡಿಲ್ಲ, ಕಾಯ್ದಿರಿಸಿದ್ರು. ಏಕೆಂದ್ರೆ ನಾವು ದರ್ಶನ್ ಅಣ್ಣನ ಪರವಾಗಿದ್ದೆವು. ದರ್ಶನ್ ಅಣ್ಣನ ಪರವಾಗಿದ್ದಾಗ ಆಗುತ್ತಿದ್ದ ಕೆಲಸಗಳು ಆಗಬಾರದು ಅನ್ನೋದು ಕೆಲವರಿಗೆ ಇತ್ತು. ಅವರು ಮುಂದೆ ಒಂದು, ಹಿಂದೆ ಒಂದು ಮುಖವಾಡ ಹಾಕ್ಕೊಂಡು ಬದುಕಬೇಕಿತ್ತು. ಈಗ ಮುಖವಾಡ ತೆಗೆಯುವ ಸಮಯ ಬಂದಿದೆ, ಇನ್ಮೇಲೆ ನಾವು ಶುರು ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟರು.
ಮುಂದುವರಿದು… ಜೈಲಲ್ಲಿ ನಿಮ್ಮನ್ನ ಮತ್ತು ವಿಜಯಲಕ್ಷ್ಮಿ ಅವರನ್ನ ಸಮಾಧಾನ ಪಡಿಸಿದ್ರಾ ದರ್ಶನ್? ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ಥರಹ ಏನಿಲ್ಲ, ಸಮಾಧಾನ ಏನೂ ಮಾಡಿಲ್ಲ, ನಾನು ದರ್ಶನ್ ಅಣ್ಣನನ್ನ ಮಾತಾಡಿಸಿಕೊಂಡು ಬಂದಿದ್ದೆ ಅಷ್ಟೇ.
ಒಟ್ನಲ್ಲಿ ಈಗ ದೂರು ಕೊಟ್ಟಿದ್ದಾರಲ್ಲ.. ಅವರದ್ದೇ ಬಂಡವಾಳಗಳು ಆಚೆ ಬರುತ್ತವೆ. ಮುಖವಾಡ ಬೀಳಿಸೋ ತನಕ ಬಿಡಲ್ಲ. ನ್ಯಾಯ, ನೀತಿ ಧರ್ಮದಲ್ಲಿ ನಡೆಯುತ್ತಿರುವಾಗ ಹೆದರುವ ಮಾತೇ ಇಲ್ಲ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಮುಖವಾಡ ಕಳಚಿಡುತ್ತೇನೆ ಎಂದು ಹೇಳಿದರು.
