Asian Para Games | ಭಾರತಕ್ಕೆ ತ್ರಿಬಲ್‌ ಧಮಾಕ – ಜಾವೆಲಿನ್‌ನಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಕ್ಲೀನ್ ಸ್ವೀಪ್

1 Min Read

ನಗೋಯಾ: ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ. ಇಂದು ನಡೆದ ಜಾವೆಲಿನ್‌ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನ ಭಾರತೀಯ ಕ್ರೀಡಾಪಟುಗಳೇ ಬಾಚಿಕೊಂಡಿದ್ದಾರೆ.

F42-44/61-64 ವಿಭಾಗಗಳ ಸಂಯೋಜಿತ ಸ್ಪರ್ಧೆಯಲ್ಲಿ ಸುಮಿತ್ ಆಂಟಿಲ್ ಚಿನ್ನ, ಮಹೇಂದ್ರ ಗುರ್ಜರ್ ಬೆಳ್ಳಿ ಮತ್ತು ಸಂದೀಪ್ ಸಂಜಯ್ ಸರ್ಗಾರ್ ಕಂಚಿನ ಪದಕಗಳನ್ನ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದಾರೆ.

ಸುಮಿತ್ (T64) 72.46 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು 1,112 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಗುರ್ಜರ್ (T42) ಮತ್ತು ಸಂಜಯ್ ಸರ್ಗಾರ್ (T44) ಕ್ರಮವಾಗಿ 59.03 ಮೀಟರ್ ಮತ್ತು 64.48 ಮೀಟರ್ ದೂರ ಜಾವೆಲಿನ್‌ ಎಸೆಯುವ ಮೂಲಕ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು. ಜೊತೆಗೆ ತಮ್ಮ ತಮ್ಮ ವಿಭಾಗಗಳಲ್ಲಿ ಹೊಸ ದಾಖಲೆಗಳನ್ನೂ ನಿರ್ಮಿಸಿದರು.

2 ಬಾರಿ ಪ್ಯಾರಾಲಿಂಪಿಕ್ ಚಾಂಪಿಯನ್‌ ಆಗಿ ವಿಶ್ವದಾಖಲೆ ನಿರ್ಮಿಸಿದ್ದ 28 ವರ್ಷದ ಆಂಟಿಲ್, ಕಳೆದ ಮೇ ತಿಂಗಳಲ್ಲಿ 74.82 ಮೀಟರ್‌ ಜಾವೆಲಿನ್‌ ಎಸೆದಿದ್ದು ಈವರೆಗೆ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. F64 ಸ್ಪರ್ಧೆಯಲ್ಲಿ ಪೂರ್ಣ ಪ್ರಾಬಲ್ಯ ಮೆರೆದರೂ ತಮ್ಮದೇ ದಾಖಲೆಯನ್ನ ಹಿಂದಿಕ್ಕುವಲ್ಲಿ ವಿಫಲರಾದರು.

Share This Article
Exit mobile version