ಗುಡ್ಡದಲ್ಲಿ ಅನ್ಯಕೋಮಿನ ಜೋಡಿ ಪತ್ತೆ- ವಿದ್ಯಾರ್ಥಿ ತಂಡದಿಂದ ಹಲ್ಲೆ

Public TV
1 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುಡ್ಡವೊಂದರಲ್ಲಿ ಅನ್ಯಕೋಮಿನ ಜೋಡಿಯೊಂದು ಪತ್ತೆಯಾಗಿದ್ದು, ವಿದ್ಯಾರ್ಥಿಗಳ ತಂಡ ಹಲ್ಲೆ ಮಾಡಿದ ಘಟನೆ ನಡೆದಿದೆ.

ಈ ಜೋಡಿ ಸುಳ್ಯದ ಕಾಲೋಜೊಂದರ ವಿದ್ಯಾರ್ಥಿಗಳಾಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಜೋಡಿ ಇರುವುದು ಗೊತ್ತಾಗಿದೆ. ಜೋಡಿಯನ್ನು ಗಮನಿಸಿದ ವಿದ್ಯಾರ್ಥಿ ತಂಡ ಅಲ್ಲಿಗೆ ತೆರಳಿ ಜೋಡಿಯ ಮೇಲೆ ಹಲ್ಲೆ ನಡೆಸಿದೆ. ಇದನ್ನೂ ಓದಿ: 55 ವರ್ಷದ ವ್ಯಕ್ತಿಯನ್ನು ವರಿಸಿದ 18ರ ಯುವತಿ- ಅಚ್ಚರಿ ಹುಟ್ಟಿಸುತ್ತೆ ಕಾರಣ

POLICE JEEP

ಸದ್ಯ ಹಲ್ಲೆ ನಡೆಸಿದ ತಂಡದ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಮಹಮ್ಮದ್ ಸನೀಫ್ ದೂರು ನೀಡಿದ್ದು, ಹಲ್ಲೆ ನಡೆಸಿದ 7 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *