ನೀವು ಮಿನಿಸ್ಟರ್, ನಮ್ಮ ಮಾಸ್ಟರ್ ಅಲ್ಲ: ಡಿಕೆಶಿ ವಿರುದ್ಧ ಮೋಹನ್ ದಾಸ್ ಪೈ ಕಿಡಿ

1 Min Read

ಬೆಂಗಳೂರು: ಡಿಸಿಎಂ ಡಿಕೆಶಿ ವರ್ಸಸ್ ಉದ್ಯಮಿ ಮೋಹನ್‌‌ ದಾಸ್ ಪೈ (Mohandas Pai) ಫೈಟ್ ಮತ್ತೆ ಮುನ್ನೆಲೆಗೆ ಬಂದಿದೆ. ಶನಿವಾರ ಸಂವಾದ ಕಾರ್ಯಕ್ರಮವೊಂದರಲ್ಲಿ ಅಪಾರ್ಟ್‌ಮೆಂಟ್ ನಿವಾಸಿ ಪತ್ರಕ್ಕೆ ವಾರ್ನಿಂಗ್ ಮಾಡಿದ್ದ ಡಿಕೆಶಿಗೆ (DK Shivakumar) ಮೋಹನ್ ದಾಸ್ ಪೈ ಪ್ರಜಾಪ್ರಭುತ್ವದ ಪಾಠ ಮಾಡಿದ್ದಾರೆ.

ನನ್ ಹತ್ರ ಡೀಲ್ ಮಾಡೋವಾಗ ಮಿನಿಮಮ್ ಕಾಮನ್‌ಸೆನ್ಸ್ ಇರಬೇಕು ಅಂದಿದ್ದ ಡಿಕೆಶಿಗೆ ಮೋಹನ್ ದಾಸ್ ಪೈ ಟಾಂಗ್ ಕೊಟ್ಟಿದ್ದು, ನೀವು ಮಿನಿಸ್ಟರ್, ನಮ್ಮ ಮಾಸ್ಟರ್ ಅಲ್ಲ. ಸಾರ್ವಜನಿಕರ ಜೊತೆ ಹೀಗೆ ಮಾತನಾಡಿ ಭಯ ಹುಟ್ಟಿಸಬೇಡಿ. ನೀವು ನಮ್ಮ ಪ್ರತಿನಿಧಿಗಳು. ಪ್ರಜಾಪ್ರಭುತ್ವದಲ್ಲಿ ಸಚಿವರನ್ನು ಪ್ರಶ್ನಿಸುವ ಹಕ್ಕು ನಮಗೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಶಾಮನೂರು ವಿಧಿವಶ – ನಾಳೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ

ಈ ರೀತಿ ಸಾರ್ವಜನಿಕರೊಂದಿಗೆ ಮಾತಾನಾಡೋದು ತಪ್ಪು. ಜನ ಸಮಸ್ಯೆಯಿಂದ ಹೈರಾಣಾಗಿ ನಿಮ್ಮ ಸಹಾಯ ಕೇಳಿದಾಗ ಸಹಾಯ ಮಾಡಬೇಕೆ ಹೊರತು ಭಯ ಹುಟ್ಟಿಸೋದಲ್ಲ ಅಂತ ಟ್ವೀಟ್ ಮೂಲಕ ಉದ್ಯಮಿ ಮೋಹನ್ ದಾಸ್ ಪೈ ಅಸಮಾಧಾನ ಹೊರಹಾಕಿದ್ದಾರೆ.‌ ಇದನ್ನೂ ಓದಿ: ಬೇಸಿಕ್ ಕಾಮನ್‌ಸೆನ್ಸ್ ಇಟ್ಕೊಂಡು ನನ್ನ ಹತ್ರ ಡೀಲ್ ಮಾಡ್ಬೇಕು – ವೇದಿಕೆಯಲ್ಲೇ ಡಿಕೆಶಿ ಗರಂ

Share This Article