ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ; ಮಹಾಯುತಿ ಮೈತ್ರಿಗೆ ಭರ್ಜರಿ ಗೆಲುವು

1 Min Read

ಮುಂಬೈ: ಮಹಾರಾಷ್ಟ್ರದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಪಡೆದಿದೆ.

- Advertisement -

ಒಟ್ಟು 246 ನಗರ ಪರಿಷತ್ ಹಾಗೂ 42 ನಗರ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು 288 ಸ್ಥಾನಗಳ ಪೈಕಿ 213ರಲ್ಲಿ ವಿಜಯದ ಪತಾಕೆ ಬಾರಿಸಿವೆ. ಬಿಜೆಪಿ ಒಂದೇ 129 ಸೀಟ್ ಗೆದ್ದಿದೆ.

- Advertisement -

ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಮೈತ್ರಿಕೂಟದ ಗೆಲುವಿನ ಓಟವು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿಯನ್ನು ಒಟ್ಟಾರೆಯಾಗಿ 44 ಸ್ಥಾನಗಳಿಗೆ ಸೀಮಿತಗೊಳಿಸಿದೆ.

- Advertisement -

ಬಿಜೆಪಿ 117 ಪುರಸಭೆ ಅಧ್ಯಕ್ಷ ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ 53 ಮತ್ತು ಎನ್‌ಸಿಪಿ 37 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 28, ಎನ್‌ಸಿಪಿ (ಎಸ್‌ಪಿ) ಏಳು ಮತ್ತು ಶಿವಸೇನೆ (ಯುಬಿಟಿ) ಒಂಬತ್ತು ಸ್ಥಾನಗಳನ್ನು ಗೆದ್ದಿದೆ.

- Advertisement -

ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ ಪಕ್ಷಗಳು ನಾಲ್ಕು ಸ್ಥಾನಗಳನ್ನು ಗೆದ್ದರೆ, ಪುರಸಭೆಯ ಅಧ್ಯಕ್ಷರ 28 ಸ್ಥಾನಗಳು ಮಾನ್ಯತೆ ಪಡೆಯದ ನೋಂದಾಯಿತ ಪಕ್ಷಗಳಿಗೆ ಹೋಗಿವೆ. ಐದು ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ.

Share This Article