ಯೋಗೇಶ್ ಗೌಡ ಹತ್ಯೆ ಕೇಸ್; ಪರಸ್ಪರ 57 ಬಾರಿ ಮೊಬೈಲ್ ಕರೆ ಮಾಡಿ ಕುಲಕರ್ಣಿ-ಮುತ್ತಗಿ ಮಾತುಕತೆ

1 Min Read

ಧಾರವಾಡ: ಯೋಗೇಶ್ ಗೌಡ (Yogesh Gowda) ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕೊಲೆ ಕೇಸನ್ನು ಸಿಬಿಐ ಭೇದಿಸಿದ್ದು ಹೇಗೆ ಎಂಬ ಕುತೂಹಲಕಾರಿ ವಿಚಾರ ಚಾರ್ಜ್ಶೀಟ್‌ದಿಂದ ಬೆಳಕಿಗೆ ಬಂದಿದೆ. ಕೊಲೆ ಬಳಿಕ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಮತ್ತು ಪ್ರಕರಣದ ಎ1 ಆರೋಪಿಯಾಗಿದ್ದ ಬಸವರಾಜ್ ಮುತ್ತಗಿ 57 ಬಾರಿ ಮೊಬೈಲ್‌ನಲ್ಲಿ ಪರಸ್ಪರರು ಕರೆ ಮಾಡಿ ಮಾತುಕತೆ ನಡೆಸಿರುವುದು ಗೊತ್ತಾಗಿದೆ.

ಪ್ರಕರಣದ ತನಿಖೆಗಿಳಿದಿದ್ದ ಸಿಬಿಐಗೆ ಬಸವರಾಜ ಮುತ್ತಗಿ ಮೊಬೈನಲ್ಲಿ 57 ಬಾರಿ ಮಾತನಾಡಿರುವ ಸಿಡಿಆರ್ ಕರೆಗಳ ಸುಳಿವು ಸಿಕ್ಕಿತ್ತು. ಇದರ ಜಾಡು ಹಿಡಿದು ಹೋದಾಗ ಕೇಸ್‌ನ ಇನ್ನಿತರ ಸತ್ಯಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

ಯೋಗೇಶ್ ಗೌಡ ಕೊಲೆ ಬಳಿಕ ಎ1 ಆರೋಪಿ ಮುತ್ತಗಿ ಮತ್ತು ವಿನಯ್ ಕುಲಕರ್ಣಿ 6 ತಿಂಗಳ ಕಾಲ ಪರಸ್ಪರರು 57 ಬಾರಿ ಮೊಬೈಲ್‌ನಲ್ಲಿ ಮಾತುಕತೆ ನಡೆಸಿದ್ದರು. ಇಬ್ಬರೂ ಒಂದೇ ಟವರ್ ಲೊಕೇಷನ್‌ನಲ್ಲಿ 6 ಬಾರಿ ಮಾತನಾಡಿದ್ದ ಸಿಡಿಆರ್ ಸಿಬಿಐ ಅಧಿಕಾರಿಗಳ ಕೈ ಸೇರಿತ್ತು.

ಪತ್ನಿ ಹೆಸರಲ್ಲಿ ಸಿಮ್ ಖರೀದಿ
ವಿನಯ್ ಕುಲಕರ್ಣಿ ತನ್ನ ಪತ್ನಿ ಹೆಸರಲ್ಲಿ ಸಿಮ್ ಖರೀದಿಸಿದ್ದರು. ಅದೇ ಸಿಮ್ ಬಳಸಿ ಮುತ್ತಗಿ ಜೊತೆ ನಿರಂತರವಾಗಿ ಮಾತನಾಡಿರುವ ಕರೆಗಳ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಕೆದಕಿದ್ದರು. ಯೋಗೇಶ್ ಗೌಡ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಬಸವರಾಜ್ ಮುತ್ತಗಿ ಪತ್ರ ಬರೆದಿದ್ದರು. ಅದರ ಜಾಡು ಹಿಡಿದು ತನಿಖೆ ನಡೆಸಿದ ಸಿಬಿಐಗೆ ಕೇಸ್‌ನ ಮುಖ್ಯ ಸಾಕ್ಷ್ಯ ಸಿಕ್ಕಿತ್ತು. ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಯೋಗೇಶ್ ಹತ್ಯೆಗೆ ಆಪ್ತ ಮುತ್ತಗಿ ಮತ್ತು ಬಾವ ಚಂದ್ರಶೇಖರ್‌ಗೆ ವಿನಯ್ ಕುಲಕರ್ಣಿ ಸೂಚನೆ ನೀಡಿದ್ದರು. ಪ್ರಕರಣ ಮುಚ್ಚಿ ಹೋಗಿದ್ದ ವೇಳೆ ಮಾಫಿ ಸಾಕ್ಷಿಯಾಗಿದ್ದ ಆಪ್ತನಿಂದಲೇ ಕುಲಕರ್ಣಿಗೆ ಕಂಟಕ ಎದುರಾಯಿತು. ಆಪ್ತನಿಂದಲೇ ಶಾಸಕ ಶಿಕ್ಷೆಗೆ ಗುರಿಯಾದರು ಎನ್ನಲಾಗಿದೆ.

Share This Article