ಬಲಮುರಿ, ಎಡಮುರಿ ಪ್ರವಾಸಿ ತಾಣಗಳಿಗೆ ನಿಷೇಧ – ಸರ್ಕಾರದ ನಡೆಗೆ ವ್ಯಾಪಾರಿಗಳ ಅಸಮಾಧಾನ

1 Min Read

ಮಂಡ್ಯ: ಬೇಸಿಗೆ ರಜೆ ಬಂತು ಎಂದರೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಬಲಮುರಿ (Balamuri) ಹಾಗೂ ಎಡಮುರಿ (Edamuri) ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತಿದ್ದವು. ಆದರೆ ಇದೀಗ ಇಲ್ಲಿನ ನಡೆದಿರುವ ಸಾವು ನೋವಿನ ಪರಿಣಾಮ ಪ್ರವಾಸಿಗರಿಗೆ ಬಲಮುರಿ ಹಾಗೂ ಎಡಮುರಿ ಎರಡು ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ.

ಇಲ್ಲಿಗೆ ಬರುವಂತ ಪ್ರವಾಸಿಗರು ಕಾವೇರಿ ನದಿಗೆ ಇಳಿದು ಮೋಜು- ಮಸ್ತಿ ಮಾಡುವ ವೇಳೆ ಸುಳಿಗೆ ಸಿಕ್ಕಿ ಮೃತಪಟ್ಟಿದ್ದರು. 2015ರಿಂದ ಇಲ್ಲಿಯವರೆಗೆ 79 ಮಂದಿ ಮೃತಪಟ್ಟಿದ್ದು, ಕಳೆದ ಒಂದು ವಾರದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವು-ನೋವುಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಈ ಎರಡು ಪ್ರವಾಸಿ ತಾಣಗಳಿಗೆ ಮುಂದಿನ ಆದೇಶದವರೆಗೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ‘ಸೆವನ್ ಸೀಸ್ ಮರಿನರ್’ ಆಗಮನ

ಇಲ್ಲಿ ನಿರ್ಬಂಧ ಇರುವ ಕಾರಣ ಇಲ್ಲಿರುವ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ. ಪ್ರವಾಸಿಗರನ್ನೇ ನಂಬಿಕೊಂಡು ಇಲ್ಲಿ ಸಾಕಷ್ಟು ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ ಇದೀಗ ಇವರ ಸ್ಥಿತಿಯೂ ಚಿಂತಾಜನಕವಾಗಿದೆ. ಇಲ್ಲಿ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಿ ಸಾವು-ನೋವುಗಳು ಆಗದಂತೆ ಕ್ರಮ ವಹಿಸಬೇಕಾಗಿತ್ತು, ಆದರೆ ನಿರ್ಬಂಧ ಹೇರಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಇರಾನ್‌ ವಿದೇಶಾಂಗ ಸಚಿವರನ್ನೇ ಮೂರ್ಖ ಎಂದ ಐಆರ್‌ಜಿಸಿ

Share This Article