ಇಂದು ‌ತಾತ್ಕಾಲಿಕವಾಗಿ ಬಂದ್‌ ಆಗಲಿದೆ ಹಸಿರು ಮಾರ್ಗದ 4 ನಿಲ್ದಾಣಗಳು

Public TV
1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮನದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಸಿರು ಮಾರ್ಗದ (Green Line) ನಾಲ್ಕು ನಿಲ್ದಾಣಗಳು ತಾತ್ಕಾಲಿಕವಾಗಿ ಮುಚ್ಚಲಿದೆ.

ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ಆರ್ ವಿ ರಸ್ತೆ ಮೆಟ್ರೋ ನಿಲ್ದಾಣಗಳು ತಾತ್ಕಾಲಿಕ ಮುಚ್ಚಲಾಗುತ್ತದೆ ಎಂದು ಎಂದು ಬಿಎಂಆರ್‌ಸಿಎಲ್‌ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.  ಇದನ್ನೂ ಓದಿ: ಬೆಂಗಳೂರಿಗೆ ಬರಲಿದ್ದಾರೆ ಮೋದಿ ಹಲವೆಡೆ ವಾಹನ ಸಂಚಾರ ಬಂದ್‌, ಪರ್ಯಾಯ ಮಾರ್ಗ ಯಾವುದು?

 

ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 10:30ಕ್ಕೆ ಬೆಂಗಳೀರಿಗೆ ಆಗಮಿಸಲಿರುವ ಮೋದಿ 3 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದು, ಇದರಲ್ಲಿ ಬೆಳಗಾವಿಯಿಂದ ಬೆಂಗಳೂರು ರೈಲು ಕೂಡ ಸೇರಿದೆ. ಬಳಿಕ 11:50 ರ ಸುಮಾರಿಗೆ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ

5,057 ಕೋಟಿ ವೆಚ್ಚದ ಮೆಟ್ರೋ ಹಳದಿ ಮಾರ್ಗ ಇದಾಗಿದ್ದು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದಲ್ಲಿ ಹಳದಿ ಮೆಟ್ರೋ ರೈಲು ಸಂಚರಿಸಲು ಸಿದ್ಧವಾಗಿದೆ. ಉದ್ಘಾಟನೆ ಮಾಡಿದ ಬಳಿಕ ರಾಗಿಗುಡ್ಡ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಮೋದಿ ಮೆಟ್ರೋದಲ್ಲಿ ಸಂಚಾರ ಮಾಡಲಿದ್ದಾರೆ. ಹಳದಿ ಮಾರ್ಗ ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ.

Share This Article