ಜಮೀನಿಗೆ ತೆಂಗಿನಕಾಯಿ ಕೀಳಲು ಹೋಗಿದ್ದಾಗ ಅವಘಡ – ಅಕ್ರಮ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು

0 Min Read

ಚಾಮರಾಜನಗರ: ಅಕ್ರಮ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

- Advertisement -

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಯಿ ಕೀಳಲು ಕೆಲಸಕ್ಕೆ ಹೋಗಿದ್ದ ಇಬ್ಬರು ದುರ್ಮರಣ ಹೊಂದಿದ್ದಾರೆ. ಕಾಡಂದಿ ಕಾಟದಿಂದ ಜಮೀನಿಗೆ ಅಕ್ರಮ ವಿದ್ಯುತ್ ಅಳವಡಿಸಿದ್ದ ಹಿನ್ನೆಲೆ, ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. ಸ್ವಾಮಿ, ಕೃಷ್ಣ ಮೃತ ದುರ್ದೈವಿಗಳು.

- Advertisement -

ಗ್ರಾಮದ ಪ್ರಕಾಶ್ ಎಂಬವರ ಜಮೀನಿನಲ್ಲಿ ಘಟನೆ ನಡೆದಿದೆ. ಕೇರಳ ಮೂಲದವರಿಗೆ ಜಮೀನು ಗುತ್ತಿಗೆಯನ್ನು ಕೊಡಲಾಗಿತ್ತು. ಬೆಳೆ ರಕ್ಷಣೆಗೆ ಅಕ್ರಮ ವಿದ್ಯುತ್ ಹಾಯಿಸಿದ್ದರು. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Share This Article