ಇಡಿ ಬಲೆಗೆ ಶಿಯೋಮಿ – 5 ಸಾವಿರ ಕೋಟಿ ಜಪ್ತಿ

Public TV
1 Min Read

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ(ಎಫ್‌ಇಎಮ್‌ಎ) 1999ರ ಅಡಿಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ ಶಿಯೋಮಿಯ 5,551.25 ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಂಡಿದೆ.

ಈ ವರ್ಷದ ಫೆಬ್ರವರಿಯಲ್ಲಿ ಕಂಪನಿ ಮಾಡಿದ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು. ಶಿಯೋಮಿ ಭಾರತದಲ್ಲಿ 2014ರಿಂದ ತನ್ನ ಕಾರ್ಯಾಚರಣೆ ಪ್ರಾರಂಭಿಸಿ, 2015ರಿಂದ ಕಾನೂನು ಬಾಹಿರ ಹಣ ವರ್ಗಾಯಿಸಲು ಪ್ರಾರಂಭಿಸಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಇದನ್ನೂ ಓದಿ: ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್

ಕಂಪನಿ ಶಿಯೋಮಿ ಗ್ರೂಪ್ ಸೇರಿದಂತೆ ಒಟ್ಟು 3 ವಿದೇಶಿ ಘಟಕಗಳಿಗೆ ಸುಮಾರು 5,551.27 ಕೋಟಿ ರೂ. ಯಷ್ಟು ಹಣವನ್ನು ವರ್ಗಾಯಿಸಿದೆ ಎಂದು ಇಡಿ ಆರೋಪಿಸಿದೆ. ಇದನ್ನೂ ಓದಿ: ಜೂನ್‌ ಆರಂಭದಲ್ಲಿ 5ಜಿ ಸ್ಪೆಕ್ಟ್ರಂ ಹರಾಜು: ಅಶ್ವಿನಿ ವೈಷ್ಣವ್‌

ಶಿಯೋಮಿ ಭಾರತದಲ್ಲಿ ಎಂಐ ಹೆಸರಿನಲ್ಲಿ ಮೊಬೈಲ್ ಫೋನ್‌ಗಳ ಮಾರಾಟ ಮಾಡುತ್ತಿದ್ದು ಭಾರತದಲ್ಲೇ ತಯಾರಾದ ಬಿಡಿ ಭಾಗಗಳನ್ನು ಬಳಸುತ್ತಿತ್ತು. ಇದು ಹಣ ವರ್ಗಾಯಿಸಿದ ಘಟಕಗಳಿಂದ ಯಾವುದೇ ಸೇವೆ ಅಥವಾ ವಸ್ತುಗಳನ್ನು ಖರೀದಿ ಮಾಡಿಲ್ಲ ಎಂದು ಇಡಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *