ಮಹಿಳಾ ಪೇದೆ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಮಿಲನ

Public TV
2 Min Read

– ಆಕೆಯ ಮೊಬೈಲಲ್ಲಿತ್ತು 50 ಅಶ್ಲೀಲ ವೀಡಿಯೋ

ಜೈಪುರ: 6 ವರ್ಷದ ಮಗುವಿನ ಮುಂದೆಯೇ ಹಿರಿಯ ಪೊಲೀಸ್ ಅಧಿಕಾರಿ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ಲೈಂಗಿಕ ಸಂಪರ್ಕ ನಡೆಸಿದ ಮಹಿಳಾ ಕಾನ್‍ಸ್ಟೇಬಲನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ ಮಹಿಳಾ ಪೇದೆಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದು, ಸೆಪ್ಟೆಂಬರ್ 17ರವರೆಗೆ ಆಕೆಯನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ.

ಮಹಿಳಾ ಪೇದೆ ಜೊತೆ ದೈಹಿಕ ಸಂಪರ್ಕ ನಡೆಸಿದ್ದ ಹಿರಿಯ ಅಧಿಕಾರಿಯನ್ನು ಇದಕ್ಕೂ ಮುನ್ನವೇ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ಬಂಧನ ಬೆನ್ನಲ್ಲೇ ವೀಡಿಯೋದಲ್ಲಿದ್ದ ಅಜ್ಮಲ್ ಬೇವಾರ್ ಸರ್ಕಲ್ ಆಫೀಸರ್ ಹೀರಾಲಾಲ್ ಸೈನಿ ಹಾಗೂ ಪೊಲೀಸ್ ಕಮೀಷನರ್ ಕಚೇರಿಯ ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ‘ಚಿಂತಾಮಣಿ ಅಪಘಾತ – 8 ಮಂದಿಯ ಸಾವಿಗೆ ರಮೇಶ್‍ಕುಮಾರ್ ನೇರ ಹೊಣೆ’

ಕೈ ತಪ್ಪಿದ ವೀಡಿಯೋ ವಾಟ್ಸಪ್ ಸ್ಟೇಟಸ್ ಆಯ್ತು!: ಮಹಿಳಾ ಪೇದೆಯ ಬರ್ತ್ ಡೇ ಸಂಭ್ರಮಾಚರಣೆ ಮಾಡಲು ಹಿರಿಯ ಅಧಿಕಾರಿ ಅಜ್ಮೇರ್ ನ ರೆಸಾರ್ಟ್ ಗೆ ಆಗಮಿಸಿದ್ದರು. ಬರ್ತ್ ಡೇ ಸಂಭ್ರಮದಲ್ಲಿ ಸ್ವಿಮ್ಮಿಂಗ್ ಪೂಲ್‍ಗಿಳಿದ ಜೋಡಿಗಳು ಮೊಬೈಲಲ್ಲಿ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದರು. ಈ ವೇಳೆ ಮಹಿಳಾ ಪೇದೆಯ 6 ವರ್ಷದ ಮಗ ಕೂಡಾ ಜೊತೆಯಲ್ಲಿದ್ದ. ಈ ವೀಡಿಯೋ ಅಚಾನಕ್ ಆಗಿ ಮಹಿಳಾ ಪೇದೆಯ ವಾಟ್ಸಪ್ ಸ್ಟೇಟಸ್ ಆಗಿದೆ. ಆದರೆ ಈ ವಿಚಾರ ಅರಿವಿಗೆ ಬರುವ ಮುನ್ನವೇ ಈ ವೀಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಮಹಿಳಾ ಪೇದೆಯ ಪತಿ ಹಿರಿಯ ಅಧಿಕಾರಿ ಮಗನ ಜೊತೆ ಅಸಭ್ಯವಾಗಿ ವರ್ತಿಸಿದ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ಪೊಲೀಸರು ಹಿರಿಯ ಅಧಿಕಾರಿಯನ್ನು ಬಂಧಿಸಿದ್ದಾರೆ.

ಮಹಿಳಾ ಪೇದೆ ಮೊಬೈಲಲ್ಲಿ ಸಿಕ್ಕಿದೆ 50 ವೀಡಿಯೋ!: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಮಹಿಳಾ ಪೇದೆಯ ಮೊಬೈಲಲ್ಲಿ ಈ ರೀತಿಯ ಸುಮಾರು 50 ವೀಡಿಯೋಗಳು ಪತ್ತೆಯಾಗಿವೆ. ಇದನ್ನು ಆಕೆ ಮೊಬೈಲಿನಲ್ಲಿ ಪ್ರತ್ಯೇಕ ಫೋಲ್ಡರ್‍ನಲ್ಲಿ ಸೇವ್ ಮಾಡಿದ್ದರು. ಆದರೆ ಈ ವೀಡಿಯೋ ಅಚಾನಕ್ ಆಗಿ ಆಕೆಯ ವಾಟ್ಸಪ್ ಸ್ಟೇಟಸ್ ಆಗಿದೆ. ಇದನ್ನು ಆಕೆಯ ಪತಿ ಹಾಗೂ ಕುಟುಂಬಸ್ಥರು ನೋಡಿದ್ದಾರೆ. ಬಳಿಕ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನೂ ಸಮಯ ಇದೆ, ಅರ್ಜೆಂಟ್ ಏನೂ ಇಲ್ಲ: ಹೆಚ್‍ಡಿಕೆ 

5 ವರ್ಷದಿಂದ ಇತ್ತಂತೆ ಅಫೇರ್: ಈ ಮಹಿಳೆ ಹಾಗೂ ಡಿಎಸ್‍ಪಿ ಸೈನಿ ನಡುವೆ ಕಳೆದ 5 ವರ್ಷದಿಂದ ಅಫೇರ್ ಇತ್ತು. ಈ ಹಿನ್ನೆಲೆಯಲ್ಲಿ ಆಕೆ ಪತಿಯನ್ನು ಬಿಟ್ಟು ಪ್ರತ್ಯೇಕ ವಾಸವಾಗಿದ್ದಳು ಎಂದು ತನಿಖೆ ವೇಳೆ ಮಾಹಿತಿ ನೀಡಿದ್ದಾಳೆ.  ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು

ಇನ್ನಷ್ಟು ಅಧಿಕಾರಿಗಳಿಗೆ ಸಂಕಷ್ಟ: ಈ ಮಹಿಳೆಯ ಬಂಧನದಿಂದಾಗಿ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿದೆ. ಮಹಿಳಾ ಪೇದೆಯ ವಿರುದ್ಧ ದೂರು ನೀಡಲು ಪತಿ ಆಗಮಿಸಿದ ವೇಳೆ ಪೊಲೀಸರು ದೂರು ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ದೂರು ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೈಪುರ ಹಾಗೂ ನಾಗೌರ್ ಠಾಣೆಯ ಅಧಿಕಾರಿಗಳನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿದೆ. ಹಲವು ಹಿರಿಯ ಅಧಿಕಾರಿಗಳಿಗೆ ಇವರಿಬ್ಬರ ಸಂಬಂಧದ ಬಗ್ಗೆ ಮಾಹಿತಿ ಇದ್ದರೂ ಕೈಗೊಂಡಿರಲಿಲ್ಲ ಎಂದು ತನಿಖೆ ವೇಳೆ ತಿಳಿದುಬಂದಿದೆ.  

Share This Article
Leave a Comment

Leave a Reply

Your email address will not be published. Required fields are marked *