ಸಹಾಯ ಪಡೆದವಳನ್ನ ಮಂಚಕ್ಕೆ ಕರೆದ ಆನ್‌ಲೈನ್‌ ಗೆಳೆಯ – ಮಹಿಳೆ ಆತ್ಮಹತ್ಯೆಗೆ ಯತ್ನ

1 Min Read

– ಸಹಕರಿಸದಿದ್ರೆ ಪೋರ್ನ್‌ ವೆಬ್‌ಸೈಟ್‌ನಲ್ಲಿ ನಂಬರ್‌ ಹಾಕೋದಾಗಿ ನಿತ್ಯ ಕಿರುಕುಳ

ಬೆಂಗಳೂರು: ಮಗಳ ಚಿಕಿತ್ಸೆಗಾಗಿ ತನ್ನಿಂದ ಹಣ ಸಹಾಯ ಪಡೆದಿದ್ದ ಮಹಿಳೆಯನ್ನ ಆನ್‌ಲೈನ್‌ ಗೆಳೆಯ ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ (Bengaluru) ರಾಜಗೋಪಾಲ್‌ ನಗರದಲ್ಲಿ ನಡೆದಿದೆ.

ಘಟನೆ ಬಳಿಕ ರಾಜಗೋಪಾಲ ನಗರ ಪೋಲೀಸ್ ಠಾಣೆಯಲ್ಲಿ (Rajagopala Nagar Police Station) ಆರೋಪಿ ಪಾರಿತೋಷ್ ಯಾದವ್ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಏನೇ ಮಾಡಿದ್ರೂ ನನ್ನ ಸ್ಟ್ಯಾಂಡ್‌ ಬದಲಾಗಲ್ಲ, ನಾನು ಸಿದ್ದರಾಮಯ್ಯ ಪರವೇ: ಕೆ.ಎನ್‌ ರಾಜಣ್ಣ

ಆನ್‌ಲೈನ್‌ನಲ್ಲಿ ಪರಿಚಯವಾದ ಗೆಳೆಯನಿಂದ ಕಿರುಕುಳ
ಕೆಲ ದಿನಗಳ ಹಿಂದೆ ಗ್ಯಾಸ್‌ ಸಿಲಿಂಡರ್‌ ಸ್ಫೋಟ ಸಂಭವಿಸಿದ ಸಂತ್ರಸ್ತೆ ಮಗಳಿಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಸೋಷಿಯಲ್‌ ಮೀಡಿಯಾದಲ್ಲಿ ಪರಿಚಯವಾಗಿದ್ದ ಪಾರಿತೋಷ್‌ ಯಾದವ್‌ನಿಂದ ಮಗಳ ಚಿಕಿತ್ಸೆಗಾಗಿ 30 ಸಾವಿರ ರೂ. ಸಾಲ ಪಡೆದಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಪಾರಿತೋಷ್‌ ದೈಹಿಕವಾಗಿ ಸಹಕರಿಸುವಂತೆ ಕಿರುಕುಳ ಕೊಡುತ್ತಿದ್ದನಂತೆ.

ಪ್ರತಿನಿತ್ಯ ಮೆಸೇಜ್ ಮಾಡಿ ದೈಹಿಕವಾಗಿ ಸಹಕರಿಸದಿದ್ದರೆ ಪೋರ್ನ್‌ ವೆಬ್‌ಸೈಟ್‌, ವೇಶ್ಯಾವಾಟಿಕೆ ಮಾಡುವವರಿಗೆ ನಿನ್ನ ನಂಬರ್‌ ಕೊಡ್ತೇನೆ ಅಂತ ಮಹಿಳೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ದಿನನಿತ್ಯ ಅಸಭ್ಯವಾಗಿ ಮೆಸೇಜ್‌ ಮಾಡೋದರ ಜೊತೆಗೆ ಅಸಭ್ಯ ಫೋಟೋ, ವಿಡಿಯೋಗಳನ್ನ ಮಹಿಳೆಗೆ ಕಳಿಸಲು ಶುರು ಮಾಡಿದ್ದಾನೆ. ಈ ವಿಷಯ ಗಂಡನಿಗೂ ಗೊತ್ತಾಗಿ ಇಬ್ಬರ ಮಧ್ಯೆ ಮನಸ್ಥಾಪ ಉಂಟಾಗಿತ್ತು. ಇದರಿಂದ ತೀರಾ ಮನನೊಂದಿದ್ದ ಸಂತ್ರಸ್ತೆ ಗಂಡನನ್ನ ತೊರೆದು ಸ್ನೇಹಿತೆ ಮನೆಗೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ ಸ್ನೇಹಿತೆ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಬಳಿಕ ರಾಜಗೋಪಾಲ ನಗರ ಪೋಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಬೇಲೂರು | ಅಪರಾಧ ಪ್ರಕರಣ ಹೆಚ್ಚಳ – ಅನ್ಯ ರಾಜ್ಯದವ್ರನ್ನ ಬಾಡಿಗೆ ಮನೆಯಿಂದ ಹೊರಹಾಕಲು ನೋಟಿಸ್‌

Share This Article