ಅನುಪಮಾ ಶೆಣೈ ಹೊಸ ಪಕ್ಷ ಕಾಂಗ್ರೆಸ್ ಮತಗಳನ್ನು ಒಡೆಯುತ್ತಾ?

Public TV
1 Min Read

ಬಳ್ಳಾರಿ: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಡಿವೈಎಸ್‍ಪಿ ಅನುಪಮಾ ಶೆಣೈ ಇದೀಗ ಹೊಸ ಪಕ್ಷವೊಂದನ್ನು ಸ್ಥಾಪಿಸಿದ್ದು, ಕಾಂಗ್ರೆಸ್ ಮತಗಳನ್ನು ಒಡೆಯುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಬಳ್ಳಾರಿಯ ಕೂಡ್ಲಿಗಿ ಪಟ್ಟಣದಲ್ಲಿ ಗಾಂಧೀಜಿ ಚಿತ್ಮಾಭಸ್ಮಕ್ಕೆ ನಮನ ಸಲ್ಲಿಸುವ ಮೂಲಕ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ `ಭಾರತೀಯ ಜನಶಕ್ತಿ ಕಾಂಗ್ರೆಸ್’ ಎಂಬ ಹೆಸರಿನಲ್ಲಿ ಪಕ್ಷ ಘೋಷಣೆ ಮಾಡಿ ನೂತನ ರಾಜಕೀಯ ಪಕ್ಷವನ್ನು ಅನುಪಮಾ ಶಣೈ ಉದ್ಘಾಟನೆಗೊಳಿಸಿದ್ರು. ಈ ಮೂಲಕ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ರಾಜಕೀಯ ನೆಲೆ ಕಂಡುಕೊಳ್ಳಲು ಅನುಪಮಾ ಮುಂದಾಗಿದ್ದಾರೆ.

ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಶೆಣೈಗೆ ಸಿಟ್ಟು: ಅರ್ಧಕ್ಕೆ ಪ್ರೆಸ್‍ಮೀಟ್ ಮುಗಿಸಿ ಎದ್ದು ಹೋದ್ರು

ಮಂಗಳವಾರವಷ್ಟೇ ರಿಯಲ್ ಸ್ಟಾರ್, ನಟ ಉಪೇಂದ್ರ `ಕೆಜೆಪಿಜೆ’ ಎನ್ನುವ ಪಕ್ಷವನ್ನು ಉದ್ಘಾಟನೆಗೊಳಿಸಿದ್ದರು. ಇದೀಗ ಮತ್ತೆ ಅನುಪಮಾ ಶೆಣೈ ಕೂಡ ಪಕ್ಷ ಕಟ್ಟಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಎರಡು ದಿನಗಳಲ್ಲೆ ಎರಡು ರಾಜಕೀಯ ಪಕ್ಷಗಳು ಹೊಸದಾಗಿ ಆರಂಭಗೊಂಡಿರುವುದು ರಾಜ್ಯದಲ್ಲೆ ಇದೇ ಮೊದಲಾಗಿದೆ.

ಇದನ್ನೂ ಓದಿ:  ಚುನಾವಣೆ ಹೊತ್ತಲ್ಲಿ ಹೊಸದೊಂದು ಪಕ್ಷ ಎಂಟ್ರಿ – ಬುದ್ಧಿವಂತನಿಂದ `ಕೆಪಿಜೆಪಿ’ ಸ್ಥಾಪನೆ

ಅನುಪಮಾ ಶೆಣೈ ತಮ್ಮ ಪಕ್ಷಕ್ಕೆ ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂದು ಹೆಸರಿಟ್ಟಿರುವ ಕಾರಣ ಕಾಂಗ್ರೆಸ್‍ಗೆ ಸ್ಪಲ್ಪ ಕಟಂಕವಾಗಬಹುದು ಎನ್ನುವ ಮಾತುಗಳು ಈಗ ಕೇಳಿ ಬಂದಿವೆ. ಅನುಪಮಾ ಶಣೈ ಅವರ `ಭಾರತೀಯ ಜನಶಕ್ತಿ ಕಾಂಗ್ರೆಸ್’ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು 80 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ.

ಅನುಪಮಾ ಶೆಣೈ ಹೊಸ ಪಕ್ಷ ಸ್ಥಾಪಿಸಿದ ಹಿನ್ನೆಲೆಯಲ್ಲಿ ನಿಮ್ಮ ಅಭಿಪ್ರಾಯ ಏನು? ಈ ಪಕ್ಷದಿಂದ ಅತಿ ಹೆಚ್ಚಿನ ಹೊಡೆತ ಯಾರಿಗೆ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

Share This Article
Leave a Comment

Leave a Reply

Your email address will not be published. Required fields are marked *