ರಾತ್ರಿವೇಳೆ ಮನೆ ಬಾಗಿಲಿಗೆ ಬಂದ ಕಾಡಾನೆಗಳು – ಬೆಚ್ಚಿಬಿದ್ದ ಮನೆ ಮಾಲೀಕ

1 Min Read

– ಕಾಂಪೌಂಡ್ ಒಳಗಿದ್ದ ಪಪ್ಪಾಯ, ಬಾಳೆ ತಿಂದು ದಾಂಧಲೆ

ರಾಮನಗರ: ರಾತ್ರಿವೇಳೆ ಮನೆ ಬಾಗಿಲಿಗೆ ಬಂದ ಕಾಡಾನೆಗಳನ್ನು (Wild Elephant) ನೋಡಿ ಮನೆ ಮಾಲೀಕ ಬೆಚ್ಚಿಬಿದ್ದ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ದೊಡ್ಡೇಗೌಡ ಎಂಬುವವರ ಮನೆ ಬಳಿ ಎರಡು ಕಾಡಾನೆಗಳು ಪ್ರತ್ಯಕ್ಷಗೊಂಡಿವೆ. ಮನೆಯ ಕಾಂಪೌಂಡ್ ಒಳಗೆ ಬೆಳೆದಿದ್ದ ಬಾಳೆ, ಪಪ್ಪಾಯ ತಿಂದು ದಾಂಧಲೆ ನಡೆಸಿ ಬಳಿಕ ಕಾಡಿಗೆ ಮರಳಿವೆ. ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಅಧಿಕಾರಿಗೆ 20 ವರ್ಷ ಜೈಲು ಶಿಕ್ಷೆ

ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ನಿತ್ಯ ಜನವಸತಿ ಪ್ರದೇಶಕ್ಕೆ ಬಂದು ಕಾಡಾನೆಗಳು ರೈತರ ಬೆಳೆನಾಶದ ಜೊತೆ ಮನೆಗಳಿಗೂ ಹಾನಿ ಮಾಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆಗಳು ಬಂದು ದಾಂಧಲೆ ಮಾಡುವ ದೃಶ್ಯವನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೋ ಸಹಿತ ಅರಣ್ಯ ಇಲಾಖೆಗೆ ದೂರು ನೀಡಿ ಕಾಡಾನೆಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೆಹಲಿ ನಾಯಕರ ಸೂಚನೆ ಮೇರೆಗೆ ಕ್ರಮ, ವೈಯಕ್ತಿಕ ವಿಚಾರ ಏನಿಲ್ಲ: ಡಿಕೆಶಿ

Share This Article