ರಾಜ್ಯದಲ್ಲಿ ಟ್ರೆಕ್ಕಿಂಗ್‌ಗೆ ಹೊಸ ಗೈಡ್‌ಲೈನ್ಸ್ – ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ: ಈಶ್ವರ್ ಖಂಡ್ರೆ

1 Min Read

10 ಮಂದಿ ಚಾರಣಿಕರಿಗೆ ಗೈಡ್ ಇದ್ದರೆ ಮಾತ್ರ ಅನುಮತಿ

ಬೆಂಗಳೂರು: ರಾಜ್ಯದ ಚಾರಣಿಗರ ಸುರಕ್ಷತೆಗಾಗಿ ಟ್ರೆಕ್ಕಿಂಗ್‌ಗೆ (Trekking) ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ.

ಟ್ರೆಕ್ಕಿಂಗ್ ಸಂಬಂಧಿಸಿದ ಎಸ್‌ಒಪಿ ಬಿಡುಗಡೆ ಮಾಡಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ. 10 ಚಾರಣಿಗರಿಗೆ ಒಬ್ಬ ಗೈಡ್ ಇರಲೇಬೇಕು. ಆನ್‌ಲೈನ್ ಮೂಲಕ ಚಾರಣದ ಬುಕ್ಕಿಂಗ್‌ಗೆ ಅವಕಾಶವಿದೆ. 10 ಮಂದಿಗೆ ಒಬ್ಬ ಗೈಡ್ ಕೊಟ್ಟ ಬಳಿಕವೇ ಚಾರಣಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕೇರಳದಿಂದ ಪ್ರವಾಸ ಬಂದಿದ್ದ 10ನೇ ತರಗತಿ ವಿದ್ಯಾರ್ಥಿನಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆ

ರಾಜ್ಯದಲ್ಲಿ 44 ಚಾರಣ ಪಾಯಿಂಟ್‌ಗಳು ಚಾಲ್ತಿಯಲ್ಲಿವೆ. ಕೊಡಗು ತಡಿಯಾಂಡಮೊಳ್‌ನಲ್ಲಿ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿದ್ದರು. ಕಡ್ಡಾಯವಾಗಿ ಎಸ್‌ಓಪಿ ಜಾರಿಗೆ ತರಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.

500-1000 ಮಂದಿ ಕೂಡ ಒಂದೊಂದು ಲೊಕೇಷನ್‌ನಲ್ಲಿ ಚಾರಣಕ್ಕೆ ಹೋದ ಉದಾಹರಣೆ ವರದಿ ಆಗಿದೆ. ಕ್ಯಾರಿಂಗ್ ಕೆಪಾಸಿಟಿ ಕೂಡ ಲಿಮಿಟ್ ಮಾಡುತ್ತಿದ್ದೇವೆ. ಒಮ್ಮೆ 150 ಮಂದಿ ಮಾತ್ರ ಚಾರಣಕ್ಕೆ ಹೋಗಬೇಕು. 150 ಮಂದಿಯ ತಂಡ ಮರಳಿದ ನಂತರ ಮಾತ್ರ ಇನ್ನೊಂದು ತಂಡ ಕಳಿಸಬೇಕು. ಕಟ್ಟುನಿಟ್ಟಾಗಿ ಎಸ್‌ಒಪಿ ಜಾರಿಗೆ ತರಲಾಗುತ್ತದೆ. ಈ ನಿಯಮಗಳನ್ನು ಮೊದಲು ಪಾಲನೆ ಮಾಡುತ್ತಿರಲಿಲ್ಲ. ಈಗ ಪಾಲನೆ ಮಾಡಲೇಬೇಕು ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದ ಮಹಿಳೆ ನಾಪತ್ತೆ

ವರಿಷ್ಠರು ಎಲ್ಲವನ್ನೂ ಸರಿಪಡಿಸ್ತಾರೆ:
ದಾವಣಗೆರೆ ದಕ್ಷಿಣ ಕ್ಷೇತ್ರದ ಗೊಂದಲ ವಿಚಾರ ಕ್ಯಾಬಿನೆಟ್ ವೇಳೆ ನಾನು ಸ್ವಲ್ಪ ಬೇಗ ಹೊರಟೆ. ಏನು ಚರ್ಚೆ ಆಗಿದೆ ಅಂತ ನನಗೆ ಗೊತ್ತಿಲ್ಲ. ಪಕ್ಷದ ಆಂತರಿಕ ವಿಚಾರ ಇದು, ಪಕ್ಷ ಕ್ರಮ ತಗೆದುಕೊಂಡಿದೆ. ಏನೇ ಇದ್ದರೂ ನಮ್ಮ ವರಿಷ್ಠರು ತೀರ್ಮಾನ ತೆಗೆದುಕೊಳ್ತಾರೆ. ನಮ್ಮ ವರಿಷ್ಠರು ಎಲ್ಲವನ್ನೂ ಸರಿಪಡಿಸುತ್ತಾರೆ. ಯಾವ ಸಚಿವರು ಏನು ಅಭಿಪ್ರಾಯ ತಿಳಿಸಿದ್ದಾರೆ ಅಂತ ನನಗೆ ಮಾಹಿತಿ ಇಲ್ಲ ಎಂದರು.

Share This Article