ಪತಿ ಇಷ್ಟಪಟ್ಟವಳೊಂದಿಗೆ ಮದುವೆ ಮಾಡಿಸಿ ಒಂದೇ ಮನೆಯಲ್ಲಿ ಸಂಸಾರ ನಡೆಸಲು ಮುಂದಾದ ಪತ್ನಿ

Public TV
2 Min Read

ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಪತಿ ಇಷ್ಟಪಟ್ಟ ಹುಡುಗಿಯೊಂದಿಗೆ ಸಾಂಪ್ರದಾಯಿಕವಾಗಿ ಆಂಧ್ರಪ್ರದೇಶದ (Andhra Pradesh) ತಿರುಪತಿಯಲ್ಲಿ (Tirupati) ಮದುವೆ ಮಾಡಿದ್ದಾರೆ.

ತಿರುಪತಿಯ (Tirupati) ದಕ್ಕಿಲಿಯ (Dakkili ) ಅಂಬೇಡ್ಕರ್ ನಗರದ (Ambedkar Nagar) ನಿವಾಸಿ ಕಲ್ಯಾಣ್ ಯೂಟ್ಯೂಬ್ ಮತ್ತು ಶೇರ್ ಚಾಟ್‍ನಲ್ಲಿ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಈ ವೇಳೆ ಅವರಿಗೆ ಕಡಪಾ ಮೂಲದ ವಿಮಲಾ ಅವರು ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿ ಚಿಲುಮಿದೆ. ಕೆಲವು ವರ್ಷಗಳ ಹಿಂದೆ ಇಬ್ಬರೂ ವಿವಾಹ ಕೂಡ ಆದರು. ನಂತರ ಇಬ್ಬರೂ ಜೊತೆಗೂಡಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ (Social Media) ಫ್ಲಾಟ್‍ಫಾರ್ಮ್‍ಗಳಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಫೇಮಸ್ ಆಗಿದ್ದರು. ಜೊತೆಗೆ ಈ ಜೋಡಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಇದನ್ನೂ ಓದಿ: IND Vs AUS: 3ನೇ T20 ಇಂದು – ಸರಣಿ ಗೆಲ್ಲುವ ತವಕದಲ್ಲಿ ಭಾರತ!

ಹೀಗಿದ್ದರೂ ಗಂಡನ ನಡವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲಾರಂಭಿಸಿದ ವಿಮಲಾಗೆ, ಕಲ್ಯಾಣ್ ವಿಶಾಖಪಟ್ಟಣಂನ (Visakhapatnam) ಯುವತಿಯನ್ನು ಇಷ್ಟಪಟ್ಟಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಇಬ್ಬರೂ ಬೇರೆಯಾಗಿದ್ದರು. ಅಂದಿನಿಂದ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

ಮತ್ತೊಂದೆಡೆ ಕಲ್ಯಾಣ್ ಮದುವೆಯಾಗಿರುವ ಸುದ್ದಿಯನ್ನು ಕೇಳಿದ ನಿತ್ಯಾ, ನಂತರ ಕಲ್ಯಾಣ್‍ನನ್ನು ಮದುವೆಯಾಗಲು (Marriage) ಅನುಮತಿ ನೀಡುವಂತೆ ವಿಮಲಾರನ್ನು ಬೇಡಿಕೊಂಡಿದ್ದಾಳೆ. ಅಲ್ಲದೇ ಕಲ್ಯಾಣ್ ಮತ್ತು ನನ್ನ ಮದುವೆಯಾದ ಬಳಿಕ ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸೋಣ ಎಂದು ವಿಮಾಲಾರಿಗೆ ಕೇಳಿಕೊಂಡಿದ್ದಾಳೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

ಇದರಿಂದ ಒಂದು ಕ್ಷಣ ತಬ್ಬಿಬ್ಬಾದ ವಿಮಲಾ ಆಲೋಚಿಸಲು ಕೊಂಚ ಸಮಯ ತೆಗೆದುಕೊಂಡು ನಂತರ ಮದುವೆಗೆ ಗ್ರೀನ್ ಸಿಗ್ನಿಲ್ ನೀಡಿದ್ದಾರೆ. ಅಲ್ಲದೇ ತಾವೇ ಮುಂದೆ ನಿಂತು ಪತಿ ಕಲ್ಯಾಣ್ ಹಾಗೂ ನಿತ್ಯ ಮದುವೆಯನ್ನು ಸಾಂಪ್ರದಾಯಿಕವಾಗಿ ಮಾಡಿದ್ದಾರೆ. ಬಳಿಕ ಮೂವರು ಒಟ್ಟಿಗೆ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಚರ್ಚೆಗೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *