4 ರಾಜ್ಯಗಳಲ್ಲಿ 9 ಎಫ್‌ಐಆರ್ – ಬಿಜೆಪಿ ಮಾಜಿ ವಕ್ತಾರೆ ನೂಪುರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?

Public TV
2 Min Read

ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು ದೇಶದ ನಾನಾಕಡೆ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ತಮ್ಮ ವಿರುದ್ಧ ದಾಖಲಾಗಿರುವ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ FIR ಗಳನ್ನು ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

court order law

ಈವರೆಗೆ ದೆಹಲಿಯಲ್ಲಿ 1, ಮಹಾರಾಷ್ಟ್ರದಲ್ಲಿ 5, ಪಶ್ಚಿಮ ಬಂಗಾಳದಲ್ಲಿ 2 ಹಾಗೂ ತೆಲಂಗಾಣದಲ್ಲಿ 1 ಸೇರಿದಂತೆ ಒಟ್ಟು 9 ಎಫ್‌ಐಆರ್‌ಗಳು ದಾಖಲಾಗಿವೆ. ಮಹಾರಾಷ್ಟ್ರದ ಮುಂಬೈನ ಪೈಧೋನಿ ಠಾಣೆಯಲ್ಲಿ ಮೇ 28 ರಂದು, ಥಾಣೆಯ ಮುಂಬ್ರಾ ಠಾಣೆಯಲ್ಲಿ ಮೇ 30 ರಂದು, ಪುಣೆಯ ಕೊಂಧ್ವಾ ಮೇ 31 ರಂದು ಮತ್ತು ಭಿವಂಡಿಯಲ್ಲಿ ಮೇ 30ರಂದು, ಪರ್ಭಾನಿಯ ನಾನಲಪೇಠ್ ಠಾಣೆಯಲ್ಲಿ ಜೂನ್ 13ರಂದು ಎಫ್‌ಐಆರ್‌ಗಳು ದಾಖಲಾಗಿವೆ. ತೆಲಂಗಾಣದ ಹೈದರಾಬಾದ್‌ನ ಸೈಬರ್ ವಿಭಾಗೀಯ ಠಾಣೆಯಲ್ಲಿ ಮೇ 30ರಂದು, ಪಶ್ಚಿಮ ಬಂಗಾಳದ ನರ್ಕೆಲದಂಗ ಠಾಣೆಯಲ್ಲಿ ಜೂನ್ 4ರಂದು ಮತ್ತು ಕೋಲ್ಕತ್ತಾದ ಅಮ್ಹೆರೆಸ್ಟ್ ಠಾಣೆಯಲ್ಲಿ ಹಾಗೂ ದೆಹಲಿಯ ಐಎಫ್‌ಎಸ್‌ಒ ಠಾಣೆಯಲ್ಲಿ ಜೂನ್ 6ರಂದು ಪ್ರಕರಣ ದಾಖಲಾಗಿವೆ ಎಂದು ಹೇಳಲಾಗಿದೆ.

ಇದಲ್ಲದೆ ಅಸ್ಸಾಂ, ಕರ್ನಾಟಕ, ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದ ವಿವಿಧೆಡೆ ಕೂಡ ಎಫ್‌ಐಆರ್‌ಗಳು ದಾಖಲಾಗಿರುವ ಮಾಹಿತಿಯಿದ್ದು ಅವುಗಳ ವಿವರ ಲಭ್ಯವಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಮಸೀದಿಯಲ್ಲಿ ವಿದ್ಯುತ್ ಕಡಿತ- ಗಲಾಟೆಯಲ್ಲಿ ಇಬ್ಬರು ಸಾವು

ದೇಶದ ವಿವಿಧೆಡೆ ದಾಖಲಾಗಿರುವ ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಲ್ಲಿ ದೇಶದ ವಿವಿಧೆಡೆ ದಾಖಲಾಗಿರುವ ಎಲ್ಲ ಎಫ್‌ಐಆರ್‌ಗಳೆಲ್ಲವನ್ನೂ ಸೇರಿಸಿ ಒಂದೇ ಎಫ್‌ಐಆರ್ ಮಾಡಿ ದೆಹಲಿ ಪೊಲೀಸರಿಗೆ ತನಿಖೆ ಮಡಲು ಅವಕಾಶ ಮಾಡಿಕೊಡಬೇಕು ಎಂಬುದು ಅವರ ಮನವಿಯಾಗಿತ್ತು.

SUPREME COURT

ಆಧಾರ ರಹಿತ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಮಾಡಲಾಗಿದೆ. ದೇಶಾದ್ಯಂತ ಒಂದರ ಹಿಂದೆ ಒಂದರಂತೆ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿರುವುದು ಅದರ ಹಿಂದಿನ ಉದ್ದೇಶವನ್ನು ತಿಳಿಸುತ್ತದೆ. ಅರ್ಜಿದಾರರ ವಿರುದ್ಧ ಆರೋಪ ಮಾಡಿರುವ ಯಾವುದೇ ಅಪರಾಧದ ಅಂಶಗಳಿಗೆ ಆಧಾರವಿಲ್ಲ. ಹೀಗಾಗಿ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ವಿವರಿಸಲಾಗಿದೆ. ಹೀಗಾಗಿ, ಮನವಿಯಲ್ಲಿ ಎಫ್‌ಐಆರ್ ವಜಾ ಮಾಡಬೇಕು ಎಂದು ಕೋರಲಾಗಿದೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಚೇಂಜ್ ಮಾಡಿದ ಶಿಂಧೆ – ಬಾಳ್ ಠಾಕ್ರೆ ಫೋಟೋ ಜೊತೆಗೆ ಕೊಟ್ಟ ಸಂದೇಶವೇನು?

ವಿವಿಧ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಿಸಿರುವುದರಿಂದ ತನಿಖಾ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಲಿದೆ. ಇದರಿಂದ ಅರ್ಜಿದಾರರಿಗೂ ಅನಗತ್ಯ ಕಿರುಕುಳ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಸತೀಂದರ್ ಸಿಂಗ್ ಭಾಸಿನ್ ಮತ್ತು ಟಿ.ಟಿ.ಆಂಟನಿ ಪ್ರಕರಣಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *