ಬರ್ತ್ ಡೇ ಯಾಕ್ ಆಚರಿಸಿಕೊಂಡಿಲ್ಲ ಅನ್ನೋ ಅಭಿಮಾನಿಗಳ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದ್ದು ಹೀಗೆ

Public TV
2 Min Read

ಬೆಂಗಳೂರು: ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಹಾಗೂ ಸರ್‍ಪ್ರೈಸ್ ಸುದ್ದಿ ನೀಡಿದ್ದಾರೆ.

ಶನಿವಾರ ತಮ್ಮ 43ನೇ ಹುಟ್ಟುಹಬ್ಬ ಪ್ರಯುಕ್ತ ಸುದೀಪ್ ಟ್ವಿಟ್ಟರ್‍ನಲ್ಲಿ ಲೈವ್ ಬಂದು ತಮ್ಮೆಲ್ಲಾ ಕನಸುಗಳನ್ನು ಬಿಚ್ಚಿಟ್ಟಿದ್ದರು. ತಾನೇಕೆ ಈ ಬರ್ತ್‍ಡೇ ಆಚರಿಸಿಲ್ಲ ಅನ್ನೋದಕ್ಕೂ ಬಲವಾದ ಕಾರಣ ಕೊಟ್ರು. ಇಷ್ಟುದಿನ ಹೇಳಿಕೊಳ್ಳದ ಕೆಲವೊಂದು ವಿಷಯವನ್ನು ಭಾವುಕವಾಗಿ ಹಂಚಿಕೊಂಡ್ರು.

ಇದನ್ನೂ ಓದಿ: ಕಿಚ್ಚನಿಗೆ ಹುಟ್ಟುಹಬ್ಬದ ಸಂಭ್ರಮ- ಫೇಸ್‍ಬುಕ್ ಲೈವ್‍ನಲ್ಲಿ ಅಭಿಮಾನಿಗಳೊಂದಿಗೆ ಮಾತು

ವಿಡಿಯೋದಲ್ಲಿ ಏನ್ ಹೇಳಿದ್ರು?: ತಾನು ಯಾರಿಗೂ ಇದನ್ನು ಮಾಡಿ. ಅದನ್ನು ಮಾಡಿ ಅಂತ ಹೇಳಿಲ್ಲ. ಬದಲಾಗಿ ಆ ಹಾರ, ಕೇಕ್ ಅದಕ್ಕಾಗಿ ಬಳಸುವ ಹಣವನ್ನು ಸಾಧ್ಯವಾದ್ರೆ ಯರಿಗಾದ್ರೂ ದಾನ ಮಾಡಿ ಅಂತ ಹೇಳಕೆ ಇಷ್ಟಪಡುತ್ತೇನೆ ಅಂದ್ರು.

ಕಳೆದ ವರ್ಷ ಕೇಕ್ ಕಟ್ ಮಾಡುವ ಮೂಲಕ ಬರ್ತ್ ಡೇ ಆಚರಣೆಯನು ಅದ್ಧೂರಿಯಾಗಿಯೇ ಮಾಡಿ ಆಗಿತ್ತು. ಎಲ್ಲರೂ ಹೋದ ಬಳಿಕ ರಾತ್ರಿ ನಾನು ಮನೆಯಿಂದ ಹೊರಗಡೆ ಬಂದಿದ್ದೆ. ಎಲ್ಲೋ ಹೋಗಲೆಂದು ಕಾರಲ್ಲಿ ಕೂತಾಗ ಮನೆ ಮುಂದೆ ಒಂದು ಪುಟ್ಟ ಹುಡುಗಿ ರೋಡ್ ನಲ್ಲಿ ಬಿದ್ದಿದ್ದ ಕೇಕ್ ತುಂಡುಗಳನ್ನು ಹೆಕ್ಕಿ ತಿನ್ನುತ್ತಾ ಇದ್ದಳು. ಮತ್ತು ಪೇಪರಲ್ಲಿ ಕಟ್ಟಿಕೊಳ್ಳುತ್ತಾ ಇದ್ದಳು. ಅದನ್ನು ನೋಡಿ ನನ್ನ ಮನಸ್ಸು ನಿಜವಾಗ್ಲೂ ಚುರುಕ್ ಅಂದ್ ಬಿಡ್ತು. ಯಾಕಂದ್ರೆ ನನಗೂ ಒಬ್ಬಳು ಮಗಳು ಇದ್ದಾಳೆ.

ಆ ಘಟನೆಯ ಬಳಿಕ ತುಂಬಾ ದಿನ ಈ ವಿಚಾರವೇ ನನ್ನ ತಲೆಯಲ್ಲಿ ಓಡಾಡ್ತಾ ಇತ್ತು. ಹೀಗಾಗಿ ಯಾರಿಗೂ ನೋವು ಕೊಡಬೇಕೆಂಬ ಉದ್ದೇಶ ನನಗಿಲ್ಲ. ಅಥವಾ ನೀವೆಲ್ಲಾ ನನ್ನ ಮೇಲೆ ಪ್ರೀತಿಯಿಟ್ಟು ಮನೆಗೆ ಬಂದಾಗ ಸಿಗಬಾರದೆಂಬ ದುರಂಕಾರವೂ ಇಲ್ಲ. ನನ್ನ ಕುಟುಂಬದವರ ಜೊತೆ ನಾನಿಲ್ಲ. ನಿಮ್ಮೊಂದಿಗೆ ನಾನು ಹೆಚ್ಚು ಕಾಲ ಕಳೆಯುತ್ತೇನೆ ಅಂತ ಹೇಳಿದ್ರು.

ಇದನ್ನೂ ಓದಿ: ಕಿಚ್ಚ ಸುದೀಪ್ – ಶಿವಣ್ಣನ ಕಿಲ್ಲರ್ ‘ದಿ ವಿಲನ್’ ಲುಕ್ ನೋಡಿ!

18 ಮಕ್ಕಳನ್ನು ನಾನು ದತ್ತು ತೆಗೆದುಕೊಂಡಿದ್ದೀವಿ. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀವಿ. ಅನಾಥಾಶ್ರಮ ನಡೆಸ್ತಾ ಇದ್ದೀವಿ. ಒಂದಷ್ಟು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದೀವಿ. ಆದ್ರೆ ನಾನು ಯಾವತ್ತೂ ಯಾರ ಮುಂದೆನೂ ಬೇಡಿದವನಲ್ಲ. ಇನ್ನೊಬ್ಬರ ಮುಂದೆ ಕೈ ಚಾಚಿ ಹಣಕಾಸು ಬೇಕು ಎಂದವನಲ್ಲ. ನನ್ನ ದುಡಿಮೆಯಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡಿಕೊಂಡು ಬಂದಿದ್ದೀನಿ. ಕಾರಣ ಇಷ್ಟೇ ಎಷ್ಟು ದಿನ ನಾನು ಬಾಳಿ ಬದುಕುತ್ತೇನೆ ಅಂತ ಗೊತ್ತಿಲ್ಲ ಅಂತ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳದಿರುವುದಕ್ಕೆ ಕಾರಣ ನೀಡಿದ್ರು.

ಇದನ್ನೂ ಓದಿ: 50 ಸಾಲು ಸಸಿ ನೆಡುವ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ರು!

ನಿಮಗೆ ಎಷ್ಟು ಪ್ರೀತಿ ನನ್ ಮೇಲಿದೆಯೋ, ಅಷ್ಟೇ ಪ್ರೀತಿ ನಿಮ್ಮ ಮೇಲೆ ನನಗಿದೆ. ನಿಮ್ಮನ್ನು ನೋಡಬೇಕು, ಮಾತನಾಡಬೇಕು ಅನ್ನೋ ಹಂಬಲ ನನಗೂ ಇದೆ. ಹೀಗಾಗಿ ಎಷ್ಟೋ ಭಾನುವಾರದಂದು ನಾನು ಆದಷ್ಟೂ ನಿಮ್ಮೊಂದಿಗೆ ಕಾಲ ಕಳೆಯಲು ಪ್ರಯತ್ನಿಸುತ್ತೇನೆ. ನಾನು ಸಿನಿಮಾ ರಂಗಕ್ಕೆ ಬಂದಿರೋದೇ ನಿಮ್ಮಗಳನ್ನು ಸಂಪಾದಿಸಬೇಕು ಅಂತ. ಹೀಗಾಗಿ ಇದಕ್ಕಿಂತ ದೊಡ್ಡ ಹೆಮ್ಮೆ ನನಗೆ ಬೇರೇನಿಲ್ಲ. ಎಲ್ಲರಿಗೂ ಧನ್ಯವಾದಗಳು ಅಂತ ಸುದೀಪ್ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *