ದಿವ್ಯಾ ಹಾಗರಗಿ ಬಂಧನ ಯಾವಾಗ? – ಪ್ರಭಾವಿಗಳ ಶ್ರೀರಕ್ಷೆಯಲ್ಲಿದ್ದಾರಾ ದಿವ್ಯಾ

Public TV
1 Min Read

ಕಲಬುರಗಿ: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಬಿಜೆಪಿ ಮಹಿಳಾ ಘಟಕದ ಮಾಜಿ ನಾಯಕಿ ದಿವ್ಯಾ ಹಾಗರಗಿ ಬಂಧನ ಯಾವಾಗ? ಅನ್ನೋ ಪ್ರಶ್ನೆ ಎಲ್ಲಕಡೆ ಹರಿದಾಡುತ್ತಿದೆ. ದಿವ್ಯಾ ತೆಲೆ ಮರೆಸಿಕೊಂಡು 14 ದಿನ ಕಳೆದರು ಇನ್ನೂ ಪತ್ತೆ ಆಗದಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಪಿಎಸ್‍ಐ ನೇಮಕಾತಿ ಅಕ್ರಮದ ಕೇಂದ್ರ ಸ್ಥಾನವಾದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ, ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ, ಶಾಲೆಯ ಹೆಡ್‍ಮಾಸ್ಟರ್ ಕಾಶಿನಾಥ್ ಸೇರಿ ಐವರು ತೆಲೆ ಮರೆಸಿಕೊಂಡು ಇಂದಿಗೆ 14 ದಿನಗಳು ಕಳೆದಿದೆ. ಸಿಐಡಿ ಎಷ್ಟೇ ಶೋಧ ಮಡೆಸಿದ್ರು ಐವರಲ್ಲಿ ಯಾರು ಪತ್ತೆಯಾಗಿಲ್ಲ. ರಾಜ್ಯದ ಪ್ರಭಾವಿ ಮುಖಂಡರು ದಿವ್ಯಾಳ ರಕ್ಷಣೆಗೆ ನಿಂತಿದ್ದಾರಾ? ಅವರ ಶ್ರೀರಕ್ಷೆಯಿಂದ ದಿವ್ಯಾ ಬಂಧನ ಆಗ್ತಿಲ್ವಾ? ಎಂಬ ಚರ್ಚೆ ಜೋರಾಗಿ ನಡೆದಿವೆ. ಇದನ್ನೂ ಓದಿ: ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್ 

ಅಜ್ಞಾತ ಸ್ಥಳದಿಂದಲೇ ನೀರಿಕ್ಷಣಾ ಜಾಮೀನು ಕೋರಿ ದಿವ್ಯಾ ಮತ್ತು ಸಹಚರರು ಸಲ್ಲಿಸಿದ್ದ ನೀರಿಕ್ಷಣಾ ಜಾಮೀನು ಜಿಲ್ಲಾ ನ್ಯಾಯಾಲಯ ತೀರಸ್ಕರಿಸಿದೆ. ದಿವ್ಯಾ ಮತ್ತು ಅವರ ತಂಡ ಸಿಐಡಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಹೀಗಿದ್ರು ದಿವ್ಯಾ ಪತ್ತೆ ಆಗಿಲ್ಲದಿರುವುದು ಸಿಐಡಿಗೆ ತೆಲೆ ನೋವಾಗಿ ಕಾಡುತ್ತಿದೆ.

ಸಿಐಡಿ ಆರು ಪ್ರತ್ಯೇಕ ತಂಡ ರಚನೆ
ದಿವ್ಯಾ ಹಾಗರಗಿ ಮತ್ತು ಸಹಚರರ ಬಂಧನಕ್ಕೆ ಸಿಐಡಿ ತೀವ್ರ ಶೋಧ ಕಾರ್ಯ ಆರಂಭಿಸಿದೆ. ಡಿಜಿಪಿ, ಎಸ್‍ಪಿ ಕಲಬುರಗಿಯಲ್ಲಿ ಬೀಡಾರ ಹೂಡಿ ಬಂಧನಕ್ಕೆ ಆರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಹಗಲಿರುಳು ಎನ್ನದೆ ದಿವ್ಯಾಗೆ ತೀವ್ರ ತಲಾಶ್‍ಗೆ ಕಾರ್ಯ ಸಿಐಡಿಯ ಆರು ತಂಡಗಳು ಮಾಡುತ್ತಿವೆ.

ತೀವ್ರ ತನಿಖೆ ನಡೆಸುತ್ತಿದ್ರೂ ಇಲ್ಲಿವರೆಗೆ ದಿವ್ಯಾ ಇರುವ ಸ್ಥಳದ ಸುಳಿವು ಸಿಕ್ಕಿಲ್ಲ. ಇಷ್ಟರಲ್ಲೆ ದಿವ್ಯಾ ಮತ್ತು ತಂಡ ಬಂಧನ ಮಾಡಿಯೇ ತಿರುತ್ತೇವೆ ಎಂಬ ಆತ್ಮವಿಶ್ವಾದಲ್ಲಿ ಸಿಐಡಿ ತಂಡ ಕಾರ್ಯನಿರ್ವಹಿಸುತ್ತಿದೆ. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

Share This Article
Leave a Comment

Leave a Reply

Your email address will not be published. Required fields are marked *