ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೋಸ್ ವೀಲ್‌ನಲ್ಲಿ ದೋಷ – ತಪ್ಪಿದ ಭಾರೀ ದುರಂತ

1 Min Read

– ಎಲ್ಲಾ 133 ಪ್ರಯಾಣಿಕರು ಸೇಫ್

- Advertisement -

ಬ್ಯಾಂಕಾಕ್: ಲ್ಯಾಂಡಿಂಗ್ ವೇಳೆ ನೋಸ್ ವೀಲ್‌ನಲ್ಲಿ (Nose Wheel) ತಾಂತ್ರಿಕ ದೋಷ ಕಾಣಿಸಿಕೊಂಡು ಹೈದರಾಬಾದ್‌ನಿಂದ ಥೈಲ್ಯಾಂಡ್‌ಗೆ (Thailand) ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನ ಭಾರೀ ದುರಂತದಿಂದ ಪಾರಾಗಿದೆ.

- Advertisement -

ಫುಕೆಟ್ ವಿಮಾನ ನಿಲ್ದಾಣದಲ್ಲಿ (Phuket International Airport) ಲ್ಯಾಂಡ್ ಆಗುವಾಗ ವಿಮಾನದ ನೋಸ್ ವೀಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಆದರೂ, ಪೈಲಟ್ ಅತ್ಯಂತ ಚಾಣಾಕ್ಷತನದಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ 133 ಪ್ರಯಾಣಿಕರು ಸೇಫ್ ಆಗಿದ್ದಾರೆ. ಈ ಘಟನೆಯ ನಂತರ ಫುಕೆಟ್ ಏರ್‌ಪೋರ್ಟ್‌ನ ರನ್‌ವೇಯನ್ನು ಮುಚ್ಚಲಾಗಿದೆ.ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ಬಂದ್ – ಸಂಪೂರ್ಣವಾಗಿ ಸೌದೆ ಒಲೆ ಮೊರೆಹೋದ ಹೋಟೆಲ್ ಮಾಲೀಕರು

- Advertisement -

- Advertisement -

ಅಪಾಯದಿಂದ ಪಾರಾದ ವಿಮಾನ ಬೋಯಿಂಗ್ 737-ಮ್ಯಾಕ್ಸ್8 ಮಾದರಿಯದ್ದಾಗಿದೆ. ಮಾರ್ಚ್ 11 ರಂದು ಹೈದರಾಬಾದ್-ಫುಕೆಟ್ ವಿಮಾನವು ಲ್ಯಾಂಡಿಂಗ್ ವೇಳೆ ನೋಸ್ ವೀಲ್ ಸಮಸ್ಯೆಗೆ ಸಿಲುಕಿತು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನದ ಲ್ಯಾಂಡಿಂಗ್ ಗೇರ್ ಸಿಸ್ಟಮ್‌ನಲ್ಲಿ ನೋಸ್ ವೀಲ್ ಬಹಳ ಮುಖ್ಯವಾದ ಭಾಗವಾಗಿದೆ. ಈ ವಿಮಾನವು ಹೈದರಾಬಾದ್‌ನಿಂದ ಬೆಳಗ್ಗೆ 6:42ಕ್ಕೆ ಟೇಕ್ ಆಫ್ ಆಗಿ, ಸ್ಥಳೀಯ ಕಾಲಮಾನ ಬೆಳಗ್ಗೆ 11:40ಕ್ಕೆ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಸದ್ಯ ವಿಮಾನವು ರನ್‌ವೇಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ, ಸಂಜೆವರೆಗೂ ರನ್‌ವೇ ಬಂದ್ ಆಗಿರಲಿದೆ. ಇದರಿಂದಾಗಿ ಹಲವು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ. ಇದನ್ನೂ ಓದಿ: ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್‌ ತಂತ್ರಕ್ಕೆ ಟ್ರಂಪ್‌ ಕೆಂಡಾಮಂಡಲ – ಏನಿದು ನೇವಲ್‌ ಮೈನ್ಸ್‌?

Share This Article