ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಳೆದ ಶುಕ್ರವಾರ ಹೃದಯ ಸ್ತಂಭನದಿಂದ ವಿಧಿವಶರಾದರು. 46ನೇ ವಯಸ್ಸಿನಲ್ಲಿಯೇ ಇಹ ಲೋಕ ತ್ಯಜಿಸಿದ ಅಪ್ಪು ಜೀವನದಲ್ಲಿ 46 ಸಂಖ್ಯೆ ಬಹಳ ಮಹತ್ವ ಪಡೆದುಕೊಳ್ಳುತ್ತಿದೆ.

PUNEET

ಹೌದು. ಪುನೀತ್ ರಾಜ್‍ಕುಮಾರ್ ಸಾವಿಗೂ 46 ಸಂಖ್ಯೆಗೂ ಬಹಳ ನಿಕಟವಾದ ಸಂಬಂಧವಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. 46 ಸಂಖ್ಯೆ ಪುನೀತ್ ಬಾಳಿನ ಅಮೂಲ್ಯ ವಿಚಾರವನ್ನು ಎದ್ದು ತೋರಿಸುತ್ತಿದೆ. ಈ ಸಂಖ್ಯೆಯ ಹಿಂದಿನ ರಹಸ್ಯವೇನು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಕಾಡುತ್ತಿದೆ.

6 ತಿಂಗಳ ಪುಟ್ಟ ಮಗುವಿದ್ದಾಗಲೇ ಚಿತ್ರಕ್ಕೆ ಬಣ್ಣ ಹಚ್ಚಿದ ಪ್ರೀತಿಯ ಅಪ್ಪು ನಮ್ಮೆಲ್ಲರನ್ನು ಅಗಲಿದ್ದು 46ನೇ ವಯಸ್ಸಿಗೆ. ವರನಟ ಡಾ. ರಾಜ್‍ಕುಮಾರ್ ಅವರಿಗೆ 46 ವರ್ಷ ವಯಸಾಗಿದ್ದಾಗ ಜನಿಸಿದ ಅಪ್ಪು, ಈವರೆಗೂ 46 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:  ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

1975ರ ಮಾರ್ಚ್ 17 ರಂದು ಜನಿಸಿದ ಅಪ್ಪು, 2021ರ ಅಕ್ಟೋಬರ್ 29ರಂದು ವಿಧಿವಶರಾದರು. ಪುನೀತ್ ಜನಿಸಿದ ದಿನಾಂಕ ಮತ್ತು ಮರಣ ಹೊಂದಿದ ದಿನಾಂಕವನ್ನು ಕೂಡಿಸಿದರೆ ಕೂಡ 46 ಸಂಖ್ಯೆ ಬರುತ್ತಿದೆ. ಸದ್ಯ ಈ ಎಲ್ಲದರ ವಿಚಾರ ಪುನೀತ್ ಸಾವಿಗೂ 46 ಸಂಖ್ಯೆಗೂ ಬಹಳ ಹತ್ತಿರದ ನಂಟಿದ್ದಂತೆ ತೋಚುತ್ತಿದೆ. ಅಲ್ಲದೇ ಈ ಮೊದಲೇ 46 ಸಂಖ್ಯೆ ಪುನೀತ್ ಸಾವಿನ ಬಗ್ಗೆ ಸುಳಿವು ನೀಡಿತ್ತಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

Share This Article
Leave a Comment

Leave a Reply

Your email address will not be published. Required fields are marked *