ರೋಚಕ ಟೈ ಕಂಡ ಇಂಡೋ-ವಿಂಡೀಸ್ ಮ್ಯಾಚ್

Public TV
3 Min Read

– ಹೋಪ್, ಹೇಟ್ಮರ್ ಹೋರಾಟ ದಿಟ್ಟ ಹೋರಾಟ

ವಿಶಾಖಪಟ್ಟಣ: ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದ್ದು, ಟೀಂ ಇಂಡಿಯಾ ವಿರುದ್ಧ ದಿಟ್ಟ ಹೋರಾಟ ನಡೆಸಿದ ವಿಂಡೀಸ್‍ನ ಹೋಪ್, ಹೆಟ್ಮರ್ ಆಟ ಹಾಗೂ ಭಾರತದ ಕೊನೆಯ ಮೂರು ಓವರ್ ಬೌಲಿಂಗ್ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.

ಟೀಂ ಇಂಡಿಯಾ ನೀಡಿದ್ದ 322 ರನ್‍ಗಳ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಕಿರಾನ್ ಪೊವೆಲ್, ಚಂದ್ರಪಾಲ್ ಹೇಮ್‍ರಾಜ್ ಜೋಡಿ ಉತ್ತಮ ಆರಂಭ ನೀಡುವ ಪ್ರಯತ್ನ ನಡೆಸಿದರು. 64 ರನ್ ಗಳಿಸುವ ವೇಳೆಗೆ ಇಬ್ಬರನ್ನು ಪೆವಿಲಿಯನ್ ಗಟ್ಟಲು ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾದರು. ಇದರ ಬೆನ್ನಲ್ಲೇ ಅನುಭವಿ ಆಟಗಾರ ಮರ್ಲಾನ್ ಸ್ಯಾಮುವೆಲ್ಸ್ 13 ರನ್ ಗಳಿಸಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಈ ವೇಳೆ ಜೊತೆಗೂಡಿದ ಶಿಮ್ರಾನ್ ಹೆಟ್ಮೆಯರ್ ಮತ್ತು ಶಾಯ್ ಹೋಪ್ ಆರಂಭದಿಂದಲೇ ಬಿರುಸಿನ ಆಟವಾಡಿದರು. ಇಬ್ಬರ ಜೋಡಿ 4ನೇ ವಿಕೆಟ್‍ಗೆ 146 ರನ್ ಗಳ ಬೃಹತ್ ಮೊತ್ತ ಪೇರಿಸಿ ತಂಡಕ್ಕೆ ಗೆಲುವಿನ ಆಸೆ ಮೂಡುವಂತೆ ಮಾಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಹೆಟ್ಮಯರ್ ಶತಕದ ಅಂಚಿನಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ 64 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ವಿಂಡೀಸ್ ಅಂತಿಮ 20 ಓವರ್ ಗಳಲ್ಲಿ ಗೆಲುವಿಗೆ 117 ರನ್‍ಗಳನ್ನು ಗಳಿಸಬೇಕಿತ್ತು. ಹೆಟ್ಮರ್ ವಿಕೆಟ್ ಕಳೆದುಕೊಂಡ ಬಳಿಕವೂ ಎದೆಗುಂದದೆ ದಿಟ್ಟ ಹೋರಾಟ ನಡೆಸಿದ ಹೋಪ್ ಶತಕ ಸಿಡಿಸಿ ಪಂದ್ಯವನ್ನು ಕೊನೆಯ ಹಂತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು.

ಅಂತಿಮ 18 ಎಸೆತ: ಅಂತಿಮ 3 ಓವರ್ ಗಳಲ್ಲಿ ಗೆಲ್ಲಲು 22 ರನ್ ಗುರಿ ಹೊಂದಿದ್ದ ವಿಂಡೀಸ್ ಹೋರಾಟ ಮುಂದುವರೆಸಿತ್ತು. ಈ ಹಂತದಲ್ಲಿ ಬಾಲ್ ಪಡೆದ ಚಹಲ್ 6 ಎಸೆತಗಳಲ್ಲಿ ಕೇವಲ ಎರಡು ರನ್ ನೀಡಿ, ರನೌಟ್ ಮೂಲಕ ಹೋಲ್ಡರ್ ವಿಕೆಟ್ ಪಡೆದು ಮಿಂಚಿದರು.

49ನೇ ಓವರ್ ಎಸೆತಲು ಬಂದ ಶಮಿ ಮೊದಲ ಮೂರು ಎಸೆತಗಳಲ್ಲಿ 3 ರನ್ ಮಾತ್ರ ನೀಡಿ ತಮ್ಮ ಉತ್ತಮ ಬೌಲಿಂಗ್ ಮೂಲಕ ಹೋಮ್ ರನ್ ಗಳಿಸಲು ಪರದಾಡುವಂತೆ ಮಾಡಿದರು. ಓವರ್ ನ 5ನೇ ಎಸೆತದಲ್ಲಿ ಲಾಂಗ್ ಆನ್ ನತ್ತ ಬ್ಯಾಟ್ ಬೀಸಿದ ಹೋಪ್ 2 ರನ್ ಪಡೆಯಲು ಯಶಸ್ವಿಯಾದರು. ಒಟ್ಟಾರೆ 6 ಎಸೆತಗಳಲ್ಲಿ 66 ರನ್ ನೀಡಿ ಬಿಗಿ ಬೌಲಿಂಗ್ ನಡೆಸಿದರು.

ಅಂತಿಮ ಓವರ್ ಎಸೆಯುವ ಜವಾಬ್ದಾರಿ ಪಡೆದ ಉಮೇಶ್ ಯಾದವ್ ಮೊದಲ ಎಸೆತದಲ್ಲಿ 1 ರನ್ ನೀಡಿದರೆ, 2 ನೇ ಎಸೆತದಲ್ಲಿ ಸ್ಟ್ರೈಕ್‍ನಲ್ಲಿದ್ದ ಆ್ಯಷೆ ನರ್ಸ್ ಕಾಲಿಗೆ ಬಿದ್ದ ಬಾಲ್ ನಿರಾಯಾಸವಾಗಿ ಬೌಂಡರಿ ಗೆರೆ ತಲುಪಿತು. 3 ನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ ಆ್ಯಷೆ ನರ್ಸ್ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ದೃಶ್ಯ 2008 ರ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಎದುರು ಶ್ರೀಶಾಂತ್ ಪಡೆದ ಕ್ಯಾಚನ್ನು ನೆನಪಿಸಿತು. 4ನೇ ಎಸೆತದಲ್ಲಿ 2ನೇ ರನ್ ಪಡೆದು ಅಂತಿಮ ಎಸೆತದಲ್ಲಿ ಗೆಲ್ಲಲು 5 ರನ್ ಗುರಿ ಪಡೆದರು. ಈ ವೇಳೆ ಗೆಲುವಿನ ಸನಿಹದಲ್ಲಿ ಬೌಂಡರಿ ಸಿಡಿಸಿ ಪಂದ್ಯ ಡ್ರಾ ಆಗುವಂತೆ ಮಾಡಿದರು.

ಟೀಂ ಇಂಡಿಯಾ ಪರ ಪಂದ್ಯದಲ್ಲಿ ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ, ಶಮಿ, ಯಾದವ್, ಚಹಲ್ 1 ವಿಕೆಟ್ ಪಡೆದgರು. ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಇಂಡಿಯಾ ಕೊಹ್ಲಿ, ಅಂಬಾಟಿ ರಾಯುಡು ಆಟದ ನೆರವಿನಿಂದ 50 ಓವರ್ ಗಳಲ್ಲಿ 321 ರನ್ ಪೇರಿಸಿತ್ತು. ಇದನ್ನು ಓದಿ : ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *