ಮತ್ತೆ ಮದುವೆ ಟೀಸರ್ : ಮೈಸೂರು ಲಾಡ್ಜ್ ನಲ್ಲಿ ಸಿಕ್ಕ ಪವಿತ್ರಾ ಲೋಕೇಶ್, ನರೇಶ್ ದೃಶ್ಯ

By
2 Min Read

ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಪ್ರೇಮಕಥೆಯು ಸಿನಿಮಾವಾಗಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ತಮ್ಮ ತಮ್ಮ ಪಾತ್ರಗಳನ್ನು ನರೇಶ್ ಮತ್ತು ಪವಿತ್ರಾ ಲೋಕೇಶ್ ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ‘ಮತ್ತೆ ಮದುವೆ’ ಎಂದು ಹೆಸರಿಡಲಾಗಿದೆ. ನರೇಶ್ ಅವರ ಪತ್ನಿ ರಮ್ಯಾ ಸೇರಿದಂತೆ ಹಲವು ಪಾತ್ರಗಳು ಸಿನಿಮಾದಲ್ಲಿ ಇರುತ್ತವೆ ಎನ್ನುವುದಕ್ಕೆ ಇಂದು ಬಿಡುಗಡೆ ಮಾಡಿರುವ ಟೀಸರ್ ಸಾಕ್ಷಿಯಾಗಿದೆ.

ನರೇಶ್ ಮತ್ತು ಪವಿತ್ರಾ ತಮ್ಮ ಖಾಸಗಿ ಬದುಕಿನಲ್ಲಿ ನಡೆದ ಘಟನೆಗಳನ್ನೂ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಮೈಸೂರಿನ ಲಾಡ್ಜ್ ವೊಂದರಲ್ಲಿ ಮಾಧ್ಯಮಗಳ ಕ್ಯಾಮೆರಾಗಳಿಗೆ ಇಬ್ಬರೂ ಸೆರೆಸಿಕ್ಕ ದೃಶ್ಯವನ್ನೂ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಪವಿತ್ರಾ ಮತ್ತು ನರೇಶ್ ಈವರೆಗೂ ಏನೆಲ್ಲ ಕ್ಷಣಗಳನ್ನು ಕಳೆದಿದ್ದಾರೋ ಎಲ್ಲವನ್ನೂ ಸಿನಿಮಾದಲ್ಲಿ ಅಳವಡಿಸಿದ್ದಾರೆ ಎನ್ನುವ ಕುರುಹು ಈ ಟೀಸರ್ ನಲ್ಲಿ ಕಾಣಸಿಗುತ್ತಿದೆ.

ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಲವ್ವಿಡವ್ವಿ ವಿಚಾರ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ವರ್ಷದ ಮೊದಲ ದಿನದಿಂದ ಈವರೆಗೂ ಒಂದಿಲ್ಲೊಂದು ವಿಚಾರಕ್ಕಾಗಿ ಈ ಇಬ್ಬರೂ ಸುದ್ದಿಯಲ್ಲಿದ್ದಾರೆ. ಮದುವೆ, ಹನಿಮೂನ್ ಅಂತೆಲ್ಲ ಫೋಟೋ ಹಂಚಿಕೊಳ್ಳುತ್ತಿದ್ದವರ ನಿಜಬಣ್ಣ ಈಗ ಬಯಲಾಗಿದೆ. ಈ ಎಲ್ಲವೂ ಖಾಸಗಿ ವಿಚಾರವಲ್ಲ, ಅವು ಸಿನಿಮಾಗಾಗಿ ಮಾಡಿದ ದೃಶ್ಯಗಳು ಎಂದು ನಿರ್ದೇಶಕ ಎಂ.ಎಸ್.ರಾಜು (MS Raju) ಹೇಳಿಕೊಂಡಿದ್ದರು. ಅದು ಟೀಸರ್ ಮೂಲಕ ನಿಜವಾಗಿದೆ.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ರಾಜು. ಅವರವರ ಪಾತ್ರಗಳನ್ನು ಅವರೇ ಮಾಡಿದ್ದಾರಂತೆ. ಅಲ್ಲದೇ, ನರೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ.  ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಮದುವೆ ಫೋಟೋ ರಿಲೀಸ್ ಆದ ಬೆನ್ನಲ್ಲೇ ಸದ್ದಿಲ್ಲದೇ ದುಬೈಗೆ (Dubai) ಹಾರಿದ್ದರು. ಕೆಲ ದಿನಗಳ ಕಾಲ (Honeymoon) ದುಬೈನಲ್ಲಿ ಈ ಜೋಡಿ ಕಳೆದಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಎಲ್ಲವೂ ಸಿನಿಮಾದಲ್ಲಿ ಇರಲಿವೆಯಂತೆ.

ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು ತೆಲುಗು ನಟ ನರೇಶ್. ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು. ಅದು ಮತ್ತೆ ಮದುವೆ ಸಿನಿಮಾದ ದೃಶ್ಯವೆಂದು ಈಗ ಖಚಿತವಾಗಿದೆ.

Share This Article