– ಮಗನಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ
ದಾವಣಗೆರೆ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ. ಕಿಡ್ನಾಪ್ ಮಾಡಿದವರು ನನ್ನ ಮಗನನ್ನು ಬಿಟ್ಟುಬಿಡಲಿ ನಾನು ದೂರು ನೀಡುವುದಿಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ (M.P Renukacharya) ಹೇಳಿದ್ದಾರೆ.
ಹೊನ್ನಾಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮಗ ಚಂದ್ರು ಕಾಣೆಯಾಗಿ 5 ದಿನ ಆಯ್ತು. ಭಾನುವಾರ ಬೆಳಗ್ಗೆ ಎಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೂಡ ಆತನಿಗೆ ಇಲ್ಲ. ದೊಡ್ಡಪ್ಪನ ಪರವಾಗಿ, ಕ್ಷೇತ್ರದ ಪರವಾಗಿ ಓಡಾಟ ನಡೆಸಿದ್ದ ಎಂದು ಕಣ್ಣೀರಿಟ್ಟರು.
ಶಿವಮೊಗ್ಗ (Shivamogga) ಕ್ಕೆ ನಮ್ಮ ಗಾಡಿಯಲ್ಲಿಯೇ ನನ್ನ ಮಗ ಹೋಗಿದ್ದ. ಶಿವಮೊಗ್ಗದಿಂದ ಗೌರಿ ಗದ್ದೆಗೆ ನಮ್ಮ ಗಾಡಿ ಪಾಸ್ ಆಗಿಲ್ಲ. ಗುರೂಜಿ ಹತ್ತಿರ ಹೋದಾಗ ಆಶೀರ್ವಾದ ಮಾಡಿದ್ದಾರೆ. ಗ್ರೇ ಕಲರ್ ಗಾಡಿಯಲ್ಲಿ ಆಶ್ರಮಕ್ಕೆ ಹೋಗಿದ್ದು. ನಮ್ಮ ಗಾಡಿ ಶಿವಮೊಗ್ಗದಿಂದ ಔಟ್ ಗೋಯಿಂಗ್ ಇಲ್ಲ, ಇನ್ ಕಮಿಂಗ್ ಇಲ್ಲ. ಆದರೆ ನಮ್ಮ ಗಾಡಿ ಎಲ್ಲಿಗೆ ಹೋಯ್ತು ಎನ್ನುವುದು ತಿಳಿಯುತ್ತಿಲ್ಲ. ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಗೃಹ ಸಚಿವರು ಹಾಗೂ ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಲಾಗಿದೆ. ಸೂರ್ಯಚಂದ್ರರೂ ಎಷ್ಟು ಸತ್ಯವೋ ಅಷ್ಟೇ ಸತ್ಯ ನನ್ನ ಮಗ ಕಿಡ್ನಾಪ್ (Kidnap) ಆಗಿದ್ದಾರೆ. ಎಲ್ಲರ ಆಶೀರ್ವಾದದಿಂದ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ತಂದೆ-ತಾಯಿ ಹಾಗೂ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ: ರೇಣುಕಾಚಾರ್ಯ
ಭಾರವಾದ ಮನಸ್ಸಿನಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ನನಗೆ ಬೆದರಿಕೆ ಕರೆಗಳು ಬಂದರೂ ಜಗ್ಗಲಿಲ್ಲ. ನಾನು ಅನುಕಂಪಕ್ಕಾಗಿ ಕಣ್ಣೀರು ಹಾಕುತ್ತಿಲ್ಲ. ನಮ್ಮ ಮನೆ ಮಾಣಿಕ್ಯ ಆಗಿದ್ದ. ನನ್ನ ಬಾಯಲ್ಲಿ ಕೆಟ್ಟ ಮಾತುಗಳು ಬರುತ್ತವೆ, ಆದರೆ ಅವನು ಯಾರಿಗೂ ಕೆಟ್ಟ ಮಾತು ಆಡುತ್ತಿರಲಿಲ್ಲ. ಕಿಡ್ನಾಪ್ ಮಾಡಿದವರು ಏನಾದ್ರು ಬೇಡಿಕೆ ಇದ್ದರೆ ಹೇಳಲಿ ಎಂದು ಹೇಳಿದರು. ಇದನ್ನೂ ಓದಿ: ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ
ಪೊಲೀಸ್ ಮೂಲಗಳ ಪ್ರಕಾರ ಗಾಡಿ ಮನೆಗೆ ಬಂದಿದೆ ಎನ್ನುತ್ತಾರೆ. ಆದರೆ ಸಿಸಿ ಕ್ಯಾಮೆರಾದಲ್ಲಿ ನೋಡಿದಾಗ ನನ್ನ ಮಗನ ಕಾರಿನ ಹಿಂದೆ ಸ್ವಿಫ್ಟ್ ಡಿಸೈರ್ ಕಾರು ಬರುತ್ತಿದೆ. ಯಾರು ಅಪಹರಿಸಿದ್ದಾರೋ ಅವರ ಡಿಮ್ಯಾಂಡ್ ನಾನು ಪೂರೈಸುತ್ತೇನೆ. ನನ್ನ ಮಗನಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ನಾನು ಎಂದೂ ಇಟ್ಟ ಹೆಜ್ಜೆ ಹಿಂದಕ್ಕೆ ಇಟ್ಟಿರಲಿಲ್ಲ. ಸೋತ ನಂತರ ಒಂದು ದಿನ ಕಣ್ಣೀರಿಟ್ಟಿದ್ದೇ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ
ಎಲ್ಲಾ ಸಿಸಿ ಕ್ಯಾಮರಾ (CC Camera) ಗಳನ್ನು ಪರಿಶೀಲನೆ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ನಮ್ಮ ಮಗನ ಕಾರು ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಕೇವಲ ಡೈವರ್ಟ್ ಮಾಡಲು ಈ ರೀತಿಯಾಗಿ ಕಾರು ಕಳಿಸಿದ್ದಾರೆ. ವಿನಯ್ ಗುರೂಜಿ (Vinay Guruji) ಕರೆ ಮಾಡಿ ಗ್ರೇ ಕಲರ್ ಗಾಡಿಯಲ್ಲಿ ಬಂದಿದ್ದರು ಎಂದು ಹೇಳಿದ್ದಾರೆ. ತನಿಖೆ ವಿಳಂಬದ ಬಗ್ಗೆ ನಾನು ಏನು ಕೂಡ ಮಾತನಾಡುವುದಿಲ್ಲ. ನಾನು ಕೂಡ ಪಾರ್ಟ್ ಆಫ್ ಗೌವರ್ನಮೆಂಟ್. ಎಸ್ ಪಿ ಯವರು ಕೂಡ ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ನಾನು ಅವರ ಮೇಲೆ ಆರೋಪ ಮಾಡುವುದು ಈ ಸಮಯದಲ್ಲಿ ಸರಿಯಲ್ಲ. ಅದಷ್ಟು ಬೇಗ ತನಿಖೆ ಮುಗಿಯುತ್ತದೆ ಎನ್ನುವ ನಂಬಿಕೆ ಇದೆ. ಕ್ಷೇತ್ರದಲ್ಲಿ ಇದ್ದ ಕಾರ್ಯಕ್ರಮಗಳನ್ನು ಮುಂದೂಡಿದ್ದೇನೆ ಎಂದರು.