ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ – ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

Public TV
2 Min Read

ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ (RCB) ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ.

ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು ಇವರಾಗಿದ್ದಾರೆ. ಪ್ರತಿ ಮ್ಯಾಚ್‌ ನಡೆದಾಗಲೂ ಆರ್‌ಸಿಬಿ ಅಭಿಮಾನಿಗಳು ಸುದ್ದಿಯಲ್ಲಿರುತ್ತಾರೆ. ಕಳೆದ 15 ಆವೃತ್ತಿಗಳಲ್ಲಿ ಒಮ್ಮೆಯೂ ಆರ್‌ಸಿಬಿ ಪ್ರಶಸ್ತಿ ಗೆದ್ದಿಲ್ಲವಾದರೂ ಅಭಿಮಾನಿಗಳ ಪ್ರೀತಿ, ಬಲ, ನಂಬಿಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಒಂದಲ್ಲ ಒಂದು ದಿನ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದೊಂದಿಗೆ ಅಭಿಮಾನಿಗಳು ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: IPLನಲ್ಲಿ ಮತ್ತೆ ನೋಬಾಲ್‌ ವಿವಾದ – ಮುಂಬೈ ಇಂಡಿಯನ್ಸ್‌ ವಿರುದ್ಧ ಅಭಿಮಾನಿಗಳು ಕೆಂಡ

ಅದೇ ರೀತಿ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಸಹ ಆರ್‌ಸಿಬಿ ಆಟಗಾರರಿಗೆ ಫ್ಯಾನ್‌ ಆಗಿದ್ದಾರೆ. ಈ ಕುರಿತು ರಶ್ಮಿಕಾ ಮಂದಣ್ಣ ಮಾತನಾಡಿರುವ ವೀಡಿಯೋ ತುಣುಕನ್ನು ಸ್ಟಾರ್‌ಸ್ಪೋಟ್ಸ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ನಾನು ಬೆಂಗಳೂರಿನ ಹುಡುಗಿ, ಕರ್ನಾಟಕದ ಹುಡುಗಿ, ಈ ಸಲ ಕಪ್‌ ನಮ್ದೆ ಎಂಬ ಘೋಷಣೆ ಕೇಳುತ್ತಲೇ ಇದ್ದೇನೆ. ನನ್ನ ನೆಚ್ಚಿನ ತಂಡ ಸಹ ಆರ್‌ಸಿಬಿ, ಈಬಾರಿಯಾದರು ಕಪ್‌ ಗೆಲ್ಲಬೇಕೆಂಬುದು ನಮ್ಮೆಲ್ಲರ ಆಸೆ. ಹಾಗೆಯೇ ವಿರಾಟ್‌ ಕೊಹ್ಲಿ (Virat Kohli) ಸರ್‌ ನನ್ನ ಫೇವ್ರೆಟ್‌ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

16ನೇ ಐಪಿಎಲ್‌ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲೇ ರಶ್ಮಿಕಾ ಭರ್ಜರಿ ನೃತ್ಯ ಪ್ರದರ್ಶನ ನೀಡಿದ್ದರು.

Share This Article