ಪರಪ್ಪನ ಅಗ್ರಹಾರದ ಕ್ವಾರಂಟೈನ್ ಸೆಲ್‌ನಲ್ಲಿ ವಿನಯ್ ಕುಲಕರ್ಣಿ, ಗ್ಯಾಂಗ್ – ದರ್ಶನ್ ಸೆಲ್‌ನ ಕೂಗಳತೆ ದೂರದಲ್ಲೇ ಇರೋ ಕೈದಿಗಳು

1 Min Read

ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್‌ ಕುಲಕರ್ಣಿ (Vinay Kulkarni) ಮತ್ತು ಗ್ಯಾಂಗ್‌ ಪರಪ್ಪನ ಅಗ್ರಹಾರದ ಕ್ವಾರಂಟೈನ್‌ ಸೆಲ್‌ ಸೇರಿದ್ದಾರೆ. ನಟ ದರ್ಶನ್‌ (Darshan) ಸೆಲ್‌ನ ಕೂಗಳತೆ ದೂರದಲ್ಲೇ ಈ ಕೈದಿಗಳು ಇದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹದಿನೇಳು ಜನರನ್ನು ಅಪರಾಧಿಗಳು ಅಂತಾ ತೀರ್ಪು ಪ್ರಕಟಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ನಿನ್ನೆ ಪರಪ್ಪನ ಅಗ್ರಹಾರ ಜೈಲು ಸೇರಿದ ಎಲ್ಲಾ ಹದಿನೇಳು ಅಪರಾಧಿಗಳನ್ನು ಕ್ವಾರಂಟೈನ್ ಸೆಲ್‌ನ ‘ಡಿ’ ಬ್ಲಾಕ್ ಬ್ಯಾರಕ್‌ಗೆ ಹಾಕಲಾಗಿದೆ. ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

ಎಲ್ಲಾ ಹದಿನೇಳು ಕೈದಿಗಳನ್ನು ಒಂದೇ ಸೆಲ್‌ನಲ್ಲಿ ಇಡಲಾಗಿದ್ದು, ವಿನಯ್ ಕುಲಕರ್ಣಿಗೆ 3476 ತಾತ್ಕಾಲಿಕ ಯುಟಿಪಿ ನಂಬರ್ ನೀಡಲಾಗಿದೆ. ನಂತರ ಸಿಟಿಪಿ ನಂಬರ್ ನೀಡಲಿದ್ದು, ಹತ್ತು ದಿನಗಳ ನಂತರ ಬೇರೆ ಸೆಲ್‌ಗೆ ರವಾನೆ ಮಾಡಲಾಗುತ್ತದೆ.

ಕುತೂಹಲಕಾರಿ ವಿಚಾರ ಅಂದರೆ, ವಿನಯ್ ಕುಲಕರ್ಣಿ ಮತ್ತು ಗ್ಯಾಂಗ್‌ ಅನ್ನು ನಟ ದರ್ಶನ್ ಇರುವ ಸೆಲ್ ಹತ್ತಿರದಲ್ಲೇ ಇರಿಸಲಾಗಿದೆ. ನಿನ್ನೆ ರಾತ್ರಿ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಅಪರಾಧಿಗಳು ಕೂಡ ಊಟ ಮಾಡದೆ, ಕುಟುಂಬಸ್ಥರನ್ನು ನೆನೆದು ಕಣ್ಣೀರು ಹಾಕಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Share This Article