ವಿಜಯ್ ಸೇತುಪತಿ, ಸಂದೀಪ್ ಕಿಶನ್ ‘ಮೈಕಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್

Public TV
1 Min Read

ರಂಜಿತ್ ಜಯೆಕೊಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಮೈಕಲ್’ ಚಿತ್ರದ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ಸಂದೀಪ್ ಕಿಶನ್ ಮತ್ತು ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಒಂದಿಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಬಳಗಕ್ಕೆ ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

ಈ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿಕೊಳ್ಳಲು ಸಜ್ಜಾಗುತ್ತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ  ರಿಲೀಸ್ ದಿನಾಂಕವನ್ನೂ ಘೋಷಿಸಲಿದೆ. ಅದಕ್ಕೂ ಮುನ್ನ ಇದೀಗ ಈ ಚಿತ್ರದ ಹೊಸದಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ.  ಭರತ್ ಚೌಧರಿ, ಪುಷ್ಕರ್ ರಾಮ್ ಮೋಹನ್ ರಾವ್ ಮೈಕಲ್ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರವನ್ನು ರಂಜಿತ್ ಜಯೆಕೊಡಿ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ, ಕೇವಲ ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

ಮಾಸ್ ಆ್ಯಕ್ಷನ್ ಮತ್ತು ಕಮರ್ಷಿಯಲ್ ಅಂಶಗಳುಳ್ಳ ಈ ಸಿನಿಮಾ, ಸದ್ಯ ಚಿತ್ರೀಕರಣದಲ್ಲಿ ಬಿಜಿಯಾಗಿದೆ. ಈ ಚಿತ್ರದಲ್ಲಿ ಕಿಶನ್ ಗೆ ನಾಯಕಿಯರಾಗಿ ದಿವ್ಯಾಂಶ ಕೌಶಿಕ್, ವರಲಕ್ಷ್ಮಿ ಶರತ್ ಕುಮಾರ್ ನಟಿಸಿದರೆ‌, ವರುಣ್ ಸಂದೇಶ್ ಪ್ರಮುಖ ಪಾತ್ರದಲ್ಲಿದ್ದಾರೆ.  ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

ಇನ್ನು ಈವರೆಗೂ ಕಂಟೆಂಟ್ ಬೇಸ್ಡ್​ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟ ಸಂದೀಪ್ ಕಿಶನ್, ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ಲುಕ್​ನಲ್ಲಿ ಎದುರಾಗುತ್ತಿದ್ದಾರೆ. ಈ ಸಿನಿಮಾದ ಸಲುವಾಗಿ ದೇಹವನ್ನು ಹುರಿಗೊಳಿಸಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರ, ಖಡಕ್ ಲುಕ್, ಲಾಂಗ್ ಹೇರ್ ನಿಂದಲೇ ಹೊಸ ಸಂದೀಪ್ ಕಿಶನ್ ಮೈಕಲ್ ಸಿನಿಮಾದಲ್ಲಿ ಕಾಣಿಸಲಿದ್ದಾರೆ.  ವಿಜಯ್ ಸೇತುಪತಿ, ಗೌತಮ್ ಮೆನನ್ ಜತೆಗೆ ತೆರೆ ಹಂಚಿಕೊಳ್ಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *