ಭಾಗ್ಯಶ್ರೀ ಜೊತೆ ವಿಜಯ್ ದೇವರಕೊಂಡ ಲಿಪ್‌ಲಾಕ್- ‘ಕಿಂಗ್‌ಡಮ್’ ಸಾಂಗ್ ಔಟ್

Public TV
1 Min Read

‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ ದೇವರಕೊಂಡ (Vijay Devarakonda) ನಟನೆಯ ‘ಕಿಂಗ್‌ಡಮ್’ (Kingdom) ಚಿತ್ರದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಆಗಿದೆ. ನಾಯಕಿ ಭಾಗ್ಯಶ್ರೀಗೆ ವಿಜಯ್ ಲಿಪ್‌ಲಾಕ್ ಮಾಡಿದ್ದಾರೆ. ರಗಡ್‌ ಗೆಟಪ್‌ನಲ್ಲಿ ವಿಜಯ್‌ ಅಬ್ಬರಿಸಿದ್ದಾರೆ. ಇದನ್ನೂ ಓದಿ:‘ಕಾಲನಾಗಿಣಿ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

 

View this post on Instagram

 

A post shared by Vijay Deverakonda (@thedeverakonda)

ವಿಜಯ್ ದೇವರಕೊಂಡ ಮತ್ತೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನ ರಗಡ್ ಲುಕ್ ಮತ್ತು ನಾಯಕಿ ಜೊತೆಗಿನ ಮುದ್ದಾಟ ‘ಅರ್ಜುನ್ ರೆಡ್ಡಿ’ ಸಿನಿಮಾ ನೆನಪಿಸುವಂತಿದೆ. ನಾಯಕಿ ಭಾಗ್ಯಶ್ರೀಗೆ ಕಿಸ್ ವಿಜಯ್ ಮಾಡಿ ಅದೇ ಹಳೆಯ ರೌಡಿ ಅವತಾರ ನೆನಪಿಸಿದ್ದಾರೆ. ಸದ್ಯ ರಿಲೀಸ್ ಆಗಿರೋ ‘ಕಿಂಗ್‌ಡಮ್’ ಚಿತ್ರದ ‘ಹೃದಯಂ ಲೋಪಲ’ ಸಾಂಗ್ ಸಂಗೀತ ಪ್ರಿಯರು ಗುನುಗುವಂತೆ ಮಾಡಿದೆ. ಇದನ್ನೂ ಓದಿ:ಮತ್ತೆ ಚರ್ಚೆಗೆ ಗ್ರಾಸವಾಯ್ತು ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ಡೇಟಿಂಗ್ ವಿಚಾರ- ವಿಡಿಯೋ ವೈರಲ್

 

View this post on Instagram

 

A post shared by Vijay Deverakonda (@thedeverakonda)

ಮೊದಲ ಬಾರಿಗೆ ವಿಜಯ್ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ (Bhagyashree Borse) ಸಾಥ್ ನೀಡಿದ್ದಾರೆ. ಇದೇ ಮೇ.30ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಗೌತಮ್ ತಿನ್ನನುರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

 

View this post on Instagram

 

A post shared by Bhagyashri Borse (@bhagyashriiborse)

ಲೈಗರ್, ಖುಷಿ ಸಿನಿಮಾಗಳಿಂದ ಸಕ್ಸಸ್ ಕಾಣದೇ ಸೋಲಿನ ಸುಳಿಯಲ್ಲಿರುವ ವಿಜಯ್‌ಗೆ ‘ಕಿಂಗ್‌ಡಮ್’ ಚಿತ್ರದ ಮೂಲಕ ಗೆಲುವು ಸಿಗುತ್ತಾ? ಎಂದು ಕಾದುನೋಡಬೇಕಿದೆ.

Share This Article